ದಕ್ಷಿಣ ಇಂಡೊನೇಶಿಯದ ಬಹು ಭಾಗವನ್ನು ಭೀಕರ ಭೂಕಂಪ ಬುಧವಾರ ಅಪ್ಪಳಿಸಿದ್ದು, ಕನಿಷ್ಠ 15 ಜನರು ಬಲಿಯಾಗಿದ್ದು, ಹತ್ತಾರು ಜನರು ಗಾಯಗೊಂಡಿದ್ದಾರೆ. ಅನೇಕ ಕಟ್ಟಡಗಳು ಮತ್ತು ಮನೆಗಳು ಭೂಕಂಪದಿಂದ ಕುಸಿದಿವೆ. ಸ್ಥಳೀಯ ಕಾಲಮಾನ 2.55 ಗಂಟೆಗೆ ಅಪ್ಪಳಿಸಿದ ಭೂಕಂಪವು 7.0 ತೀವ್ರತೆ ಹೊಂದಿದ್ದು, ಭೂಕಂಪದಿಂದಾಗಿ ಭೂಕುಸಿತಗಳು ಸಂಭವಿಸಿದ್ದು, ಅನೇಕ ಮನೆಗಳು ಹೂತುಹೋಗಿವೆ.
ರಾಜಧಾನಿ ಜಕಾರ್ತದಲ್ಲಿ ಜನರು ಗಾಬರಿಯಿಂದ ಮನೆಯಿಂದ ಹೊರಕ್ಕೆ ಓಡಿದರು. ಬೃಹತ್ ಅಲೆಗಳ ಲಕ್ಷಣ ಕಾಣದಿದ್ದರಿಂದ ಸುನಾಮಿ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ. 2001ರಲ್ಲಿ ಭೂಕಂಪದಿಂದ ಉದ್ಭವಿಸಿದ ಭಾರೀ ಸುನಾಮಿ ಅಲೆಗಳಿಂದ ಶ್ರೀಲಂಕಾ ಮತ್ತು ಭಾರತ ಸೇರಿದಂತೆ ಇಂಡೊನೇಶಿಯದಲ್ಲಿ ಭಾರೀ ಸಾವು, ನೋವು ಮತ್ತು ಆಸ್ತಿಪಾಸ್ತಿ ಹಾನಿ ಉಂಟುಮಾಡಿದೆ.
ಕಟ್ಟಡಗಳ ಕುಸಿತ ಮತ್ತು ಭೂಕುಸಿತಗಳಿಂದ ಭೂಕಂಪ ವಿನಾಶದ ಜಾಡನ್ನು ಬಿಟ್ಟುಹೋಗಿದ್ದು, 50 ಕಿಮೀ ಭೂಗರ್ಭದಲ್ಲಿ ಸಂಭವಿಸಿದ ಕಂಪನದಿಂದ ಬಹುತೇಕ ಸಾವುಗಳು ಸಂಭವಿಸಿದೆಯೆಂದು ಅಧಿಕಾರಿಗಳು ಹೇಳಿದ್ದಾರೆ. ಜಕಾರ್ತದಲ್ಲಿ ಕೂಡ ಗಾಯಗಳಾಗಿರುವ ವರದಿಗಳು ಬಂದಿದೆ. ಜಾವಾ ದ್ವೀಪದ ದಕ್ಷಿಣ ತೀರದಲ್ಲಿ ಬಂಡೆಕುಸಿದು ಕೆಲವು ಜನರು ಸತ್ತಿದ್ದಾರೆ.
ಅನೇಕ ಮಂದಿ ಆಸ್ಪತ್ರೆಗಳಿಗೆ ಸೇರಿರುವುದರಿಂದ ದಕ್ಷಿಣ ಪ್ರದೇಶಗಳಲ್ಲಿ ಗಾಯಗೊಂಡರವ ಅಂತಿಮ ಸಂಖ್ಯೆ ತಿಳಿದುಬಂದಿಲ್ಲ. ಜಕಾರ್ತದಲ್ಲಿ ವಾಸಿಸುತ್ತಿರುವ ರಿಂಕು ಖನ್ನಾ ಈ ಕುರಿತು ತಿಳಿಸುತ್ತಾ, ತಾವು ಗಾಬರಿಯಿಂದ ಓಡಿದ್ದಾಗಿಯೂ, ಮನೆಯ ಗೋಡೆಗಳು ಮತ್ತು ಕಿಟಕಿಗಳು ಅದುರಿದವು ಎಂದು ಹೇಳಿದ್ದಾರೆ. ಇಂಡೊನೇಶಿಯದ ಸ್ನೇಹಿತರು ಹೇಳಿರುವ ಪ್ರಕಾರ ಇದೊಂದು ಅತ್ಯಂತ ಭೀಕರ ಭೂಕಂಪವೆಂದು ಅವರು ವಿವರಿಸಿದ್ದಾರೆ.
ಭೂಕಂಪದ ಕೇಂದ್ರಬಿಂದುವಿನಿಂದ 115 ಕಿಮೀ ದೂರದ ಪಟ್ಟಣ ತಾಸಿಕ್‌ಮಲಯ ಪಟ್ಟಣದ ನಿವಾಸಿಗಳು ಅದೊಂದು ಅತ್ಯಂತ ಶಕ್ತಿಶಾಲಿ ಭೂಕಂಪವೆಂದು ವರ್ಣಿಸಿದ್ದಾರೆ. ಪಶ್ಚಿಮ ಜಾವಾದ ದಕ್ಷಿಣ ಸಿಯಾಂಜುರ್ ಜಿಲ್ಲೆಯಲ್ಲಿ ಇದುವರೆಗೆ 10 ಸಾವುಗಳು ಸಂಭವಿಸಿವೆ. ಭೂಕಂಪದಿಂದ ಅನೇಕ ಕಡೆ ಭೂಕುಸಿತಗಳು ಸಂಭವಿಸಿದ್ದು, ಅನೇಕ ಮನೆಗಳು ಹೂತುಹೋಗಿವೆ.