ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹಿಂದೂ ಅರ್ಚಕರ ನೇಮಕ ವಿರೋಧಿಸಿ ಮತ್ತೆ ಹಿಂಸಾಚಾರ (Indra Jatra | Nepal | Pashupatinath | Priests)
 
ಪಶುಪತಿನಾಥ ಹಿಂದೂ ದೇವಸ್ಥಾನದಲ್ಲಿ ಭಾರತೀಯ ಅರ್ಚಕರನ್ನು ನೇಮಿಸುವ ನೂತನ ಸರ್ಕಾರದ ನಿರ್ಧಾರದಿಂದ ಹಿಂಸಾಚಾರ ಭುಗಿಲೆದ್ದು, ಮಳೆ ದೇವರ ಉತ್ಸವವಾದ ಇಂದ್ರ ಜಾತ್ರೆಯ ಆಚರಣೆಗೆ ಗುರುವಾರ ತೊಡಕುಂಟಾಯಿತು. ರಾಜಧಾನಿಯ ಅತ್ಯಂತ ಪ್ರಾಚೀನವಾದ 5ನೇ ಶತಮಾನದ ದೇವಸ್ಥಾನಕ್ಕೆ ಹೋಗುವ ರಸ್ತೆಗೆ ತಡೆಯೊಡ್ಡಿದ ಪ್ರತಿಭಟನೆಕಾರರು ಸರ್ಕಾರಕ್ಕೆ ಧಿಕ್ಕಾರ, ಭಾರತೀಯ ಅರ್ಚಕರೇ ಭಾರತಕ್ಕೆ ಹಿಂತಿರುಗಿ ಎಂದು ಘೋಷಣೆಗಳನ್ನು ಕೂಗಿದರು.

ಪ್ರಧಾನಿ ಮಾಧವ್ ಕುಮಾರ್ ನೇಪಾಳ್ ನೇತೃತ್ವದ ಸರ್ಕಾರ ಭಾರತದ ಇಬ್ಬರು ಅರ್ಚಕರನ್ನು ದೇವಸ್ಥಾನಕ್ಕೆ ನೇಮಿಸುವ ನಿರ್ಧಾರ ರದ್ದು ಮಾಡಲಿ ಇಲ್ಲವೇ ಹೆಚ್ಚಿನ ಅಡ್ಡಿಆತಂಕಗಳನ್ನು ಎದುರಿಸಿ ಎಂದು ಪ್ರತಿಭಟನಾ ಸಮಿತಿಯು ಎಚ್ಚರಿಸಿದೆ.ಕಳೆದ ವರ್ಷ ಮಾವೋವಾದಿಗಳ ಒತ್ತಡದಿಂದ ಮುಖ್ಯಅರ್ಚಕ ಮಹಾಬಲೇಶ್ವರ ಭಟ್ ಮತ್ತು ಇನ್ನೂ ಇಬ್ಬರು ರಾಜೀನಾಮೆ ನೀಡಿದ್ದರು ಮತ್ತು ಮಾವೋವಾದಿ ಪ್ರಧಾನಮಂತ್ರಿ ಪುಷ್ಪ ಕಮಲ್ ದಹಾಲ್ ಪ್ರಚಂಡ ಕಳೆದ ವರ್ಷ ದೇವಸ್ಥಾನದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಹಿಂದೂ ಅರ್ಚಕರನ್ನು ಓಡಿಸಿ, ನೇಪಾಳಿ ಅರ್ಚಕರನ್ನು ನೇಮಿಸಿದ್ದರು.

ಆದರೆ ಸಂಪ್ರದಾಯವಾದಿ ಭಕ್ತರು ಈ ನೇಮಕಗಳನ್ನು ವಿರೋಧಿಸಿ ಕೋರ್ಟ್ ಮೊರೆ ಹೋಗಿದ್ದರು. ವಿವಾದವು ಕೋರ್ಟ್‌ನಲ್ಲಿ ಬಾಕಿವುಳಿದಿದ್ದು, ಅದು ಇತ್ಯರ್ಥವಾಗುವ ತನಕ ಯಾವುದೇ ಹೊಸ ಬದಲಾವಣೆ ಮಾಡದಂತೆ ಸರ್ಕಾರಕ್ಕೆ ನ್ಯಾಯಾಧೀಶರು ಆದೇಶ ನೀಡಿದ್ದರು. ಪ್ರಚಂಡ ಸರ್ಕಾರ ಪತನಗೊಂಡ ಬಳಿಕ, ನೂತನ ಸಮ್ಮಿಶ್ರ ಸರ್ಕಾರ ಹಿಂದು ಅರ್ಚಕರನ್ನು ನೇಮಿಸುವ ಹಳೆ ಸಂಪ್ರದಾಯವನ್ನು ಮುಂದುವರಿಸಿತು.

ಕರ್ನಾಟಕ ರಾಜ್ಯದ ಗಿರೀಶ್ ಭಟ್ ಮತ್ತು ರಾಘವೇಂದ್ರ ಭಟ್ ಎಂಬ ಇಬ್ಬರು ನೂತನ ಅರ್ಚಕರನ್ನು ಸರ್ಕಾರ ಪಟ್ಟಿ ಮಾಡಿತು.ಹೊಸ ಕರ್ತವ್ಯ ವಹಿಸಿಕೊಳ್ಳುವ ಮುಂಚೆ ಇಬ್ಬರು ಭಾರತೀಯ ಅರ್ಚಕರನ್ನು ಸಂಪ್ರದಾಯದ ರೀತ್ಯ ಗುಪ್ತ ಸ್ಥಳವೊಂದಕ್ಕೆ ಒಯ್ಡು ಅಲ್ಲಿ 3 ದಿನಗಳ ಕಾಲ ತಂಗಲಿದ್ದು, ಉಪವಾಸ ಆಚರಿಸುವ ಜತೆಗೆ ಹೊಸ ಕರ್ತವ್ಯಕ್ಕೆ ಶುದ್ಧೀಕರಣಗೊಳ್ಳಲು ಧಾರ್ಮಿಕ ಗ್ರಂಥದ ಶ್ಲೋಕಗಳನ್ನು ಪಠಿಸಬೇಕಿತ್ತು.ಆದರೆ ಮಾವೋವಾದಿಗಳ ನೇತೃತ್ವದಲ್ಲಿ ಐದು ಧಾರ್ಮಿಕ ಸಂಘಟನೆಗಳು ಹೊಸ ನೇಮಕಗಳನ್ನು ವಿರೋಧಿಸುತ್ತಿದೆ. ಪ್ರಕರಣ ಇತ್ಯರ್ಥವಾಗುವ ತನಕ ಯಾವುದೇ ಬದಲಾವಣೆ ಮಾಡಬಾರದೆಂಬ ಸುಪ್ರೀಂಕೋರ್ಟ್ ಆದೇಶವನ್ನು ಸರ್ಕಾರ ಉಲ್ಲಂಘಿಸಿದೆಯೆಂದು ಅವರು ಪ್ರತಿಭಟನೆಗೆ ಇಳಿದಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ