ಇಲ್ಲಿ ನೂತನವಾಗಿ ಆರಂಭವಾಗಿರುವ ಬ್ರಿಟನ್ ಡೆಪ್ಯೂಟಿ ಹೈಕಮೀಷನ್ ಮುಖ್ಯಸ್ಥರಾಗಿ ನೇಮಕವಾಗಿರುವ ರಿಚರ್ಡ್ ಹೈಡ್ ಅವರು ತಮ್ಮ ವಂಶದ ಬೇರುಗಳನ್ನು ಶೋಧಿಸುವ ಇನ್ನೊಂದು ಗುರಿಯನ್ನೂ ಹೊಂದಿದ್ದಾರೆ. ಹೈಡ್ ತಾತಾ ಗುಜರಾತಿನ ಜಾಮ್ನಗರದಲ್ಲಿ ಹುಟ್ಟಿದ್ದು, ಅವರ ತಂದೆ ಬ್ರಿಟನ್‌ಗೆ ವಲಸೆ ಹೋಗುವ ಮುಂಚೆ ಗೋವಾದಲ್ಲಿ ನೆಲೆಸಿದ್ದರಿಂದ ಹೈಡ್ ಭಾರತೀಯ ಮೂಲದ ವ್ಯಕ್ತಿಯೆನಿಸಿದ್ದಾರೆ.
ಹೀಗಾಗಿ ಅವರು ಗೋವಾ ಮತ್ತು ಗುಜರಾತ್‌ಗೆ ತೆರಳಿ ತಮ್ಮ ವಂಶದ ಬೇರನ್ನು ಹುಡುಕುವ ಯೋಜನೆ ಹಾಕಿದ್ದಾರೆ. 'ಮಗುವಾಗಿ ತಮ್ಮ ತಂದೆ ಹೆಚ್ಚಿನ ಸಮಯವನ್ನು ಗೋವಾದಲ್ಲಿ ಕಳೆಯಲಿಲ್ಲ. ಅವರು 15ರ ಪ್ರಾಯದಲ್ಲೇ ಭಾರತವನ್ನು ಬಿಟ್ಟಿದ್ದರು. ಅವರು ದೃಷ್ಟಿಹೀನರಾಗಿದ್ದು ಶಿಕ್ಷಣದ ಸಲುವಾಗಿ ಭಾರತ ಬಿಟ್ಟಿದ್ದರು.ಅವರ ಸಮೀಪದ ಕುಟುಂಬದ ಉಳಿದ ಸೋದರರು, ಸೋದರಿಯರು ಮತ್ತು ತಂದೆತಾಯಿಗಳು ಕೂಡ ಕೆಲವು ವರ್ಷಗಳ ಬಳಿಕ ತೊರೆದಿದ್ದರು.
ಈಗ ಸೋದರ ಸಂಬಂಧಿಗಳಿಗಾಗಿ ಹುಡುಕಲು ತಾವು ಆಸಕ್ತರಾಗಿರುವುದಾಗಿ' ಅವರು ತಿಳಿಸಿದ್ದಾರೆ.'ಆದರೆ ಅವರು ಕೂಡ ಸ್ಥಳಬದಲಾಯಿಸಿದ್ದರಿಂದ ಸಮಸ್ಯೆಯಾಗಿದೆ. ತಂದೆಯ ಸೋದರಿ ಮುಂಬೈನಲ್ಲಿ ಮತ್ತು ಸೋದರ ಕರಾಚಿಯಲ್ಲಿ ಹುಟ್ಟಿದ್ದಾರೆ. ತಮ್ಮ ತಂದೆ ಢಾಕಾದಲ್ಲಿ ಹುಟ್ಟಿದ್ದಾರೆಂದು' ಅವರು ತಿಳಿಸಿದರು.
ಹೈಡ್ ಇಲ್ಲಿನ ಮತ್ತು ಹೈದರಾಬಾದಿನ ಬ್ರಿಟನ್ ವ್ಯಾಪಾರ ಕೇಂದ್ರದ ಮುಖ್ಯಸ್ಥರ ಹುದ್ದೆಯನ್ನು ಕಳೆದ ಎರಡು ವರ್ಷಗಳಿಂದ ವಹಿಸಿದ್ದಾರೆ. ಆದರೆ ಬಿಡುವಿಲ್ಲದ ಕೆಲಸದಿಂದ ಗೋವಾ ಮತ್ತು ಗುಜರಾತಿಗೆ ಭೇಟಿ ಕೊಡಲು ಅವರಿಗೆ ಸಮಯ ಸಿಕ್ಕಿಲ್ಲ.
ಆದರೆ ಹೈಡ್ ಅವರು ಹೇಗಾದರೂ ಮಾಡಿ ತಮ್ಮ ವಂಶದ ಬೇರನ್ನು ಹುಡುಕಲು ಕಾತುರರಾಗಿದ್ದಾರೆ. ತಾವು ಹೋಗಲೇಬೇಕೆಂದು ಕುಟುಂಬ ಹೇಳುತ್ತಿದೆ. ಗೋವಾಗೆ ಮತ್ತು ಜಾಮ್ನಗರಕ್ಕೆ ತಮ್ಮ ಕುಟುಂಬದ ಜತೆ ತೆರಳಿ ತಮ್ಮ ಪೂರ್ವಿಕರ ಬೇರನ್ನು ಹುಡುಕುವುದಾಗಿ ಅವರು ಹೇಳಿದರು.