ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಜರ್ದಾರಿ ಕುಸಿದ ಜನಪ್ರಿಯತೆ: ಅಧ್ಯಕ್ಷ ಗಾದಿಗೆ ಕುತ್ತು (Islamabad | Zardari | Popularity | Pakistan)
 
ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಅವರ ಕುಸಿಯುತ್ತಿರುವ ಜನಪ್ರಿಯತೆಯಿಂದ ಅವರು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸುವರೇ ಎಂಬ ಪ್ರಶ್ನೆಗಳು ಎದ್ದಿವೆ. ಅಲ್ ಖಾಯಿದಾ ಮತ್ತು ತಾಲಿಬಾನ್ ವಿರುದ್ಧ ಹೋರಾಟದಲ್ಲಿ ಪಾಕಿಸ್ತಾನದ ಗಳಿಸಿದ ಇತ್ತೀಚಿನ ಲಾಭಗಳು ಪಾಕಿಸ್ತಾನದ ರಾಜಕೀಯ ಕ್ಷೋಭೆಯಿಂದ ಕ್ಷೀಣಿಸುವ ಸಾಧ್ಯತೆಗಳನ್ನು ಹೆಚ್ಚಿಸಿದೆ.

ಜರ್ದಾರಿ ಅಧಿಕಾರ ಸ್ವೀಕರಿಸಿ ಒಂದು ವರ್ಷ ಕಳೆದ ಬಳಿಕ, ಹತಾಶ, ಬಡ ರಾಷ್ಟ್ರದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಅವರ ವೈಫಲ್ಯದಿಂದ ಮತ್ತು ಭಯೋತ್ಪಾದನೆಯನ್ನು ತುರ್ತಾದ ವಿಷಯವಾಗಿ ಕಾಣದಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನಿಯರು ಜರ್ದಾರಿ ಬಗ್ಗೆ ಅತೃಪ್ತರಾಗಿದ್ದಾರೆಂದು ಜನಮತಗಣನೆಯಲ್ಲಿ ತಿಳಿದುಬಂದಿದೆ.ಜರ್ದಾರಿ ಮುಖ್ಯ ಎದುರಾಳಿ ಪ್ರತಿಪಕ್ಷದ ನಾಯಕ ನವಾಜ್ ಷರೀಫ್ ರಾಷ್ಟ್ರದಲ್ಲಿ ಜನಪ್ರಿಯತೆ ಗಳಿಸಿದ ರಾಜಕಾರಣಿಯೆಂದು ಹೆಸರು ಗಳಿಸಿದ್ದು, ಜರ್ದಾರಿ 2013ರಲ್ಲಿ ತಮ್ಮ ಅಧಿಕಾರದ ಅವಧಿ ಮುಗಿಯುವ ತನಕ ಉಳಿಯುವುದು ಕಷ್ಟವೆಂದು ಕೆಲವು ರಾಜಕೀಯ ವಿಶ್ಲೇಷಕರು ಮತ್ತು ಎದುರಾಳಿ ರಾಜಕಾರಣಿಗಳು ವಿಶ್ಲೇಷಿಸಿದ್ದಾರೆ.

ಆದರೆ ಜರ್ದಾರಿ ಪಕ್ಷಕ್ಕೆ ಸಂಸತ್ತಿನಲ್ಲಿ ಬಹುಮತವಿರುವ ಹಿನ್ನೆಲೆಯಲ್ಲಿ ಪ್ರಜಾತಾಂತ್ರಿಕವಾಗಿ ಆಯ್ಕೆಯಾದ ನಾಯಕನನ್ನು ಇಳಿಸುವುದು ಕಷ್ಟವೆಂದು ಇನ್ನುಳಿದವರ ಅಭಿಮತವಾಗಿದೆ. ಜರ್ದಾರಿ ಪದಚ್ಯುತಿಗೆ ಶಕ್ತಿಶಾಲಿ ಮಿಲಿಟರಿಯ ಬೆಂಬಲ ಅಗತ್ಯವಾಗಿದ್ದು, ಮುಷರಫ್ ರಾಜೀನಾಮೆ ಬಳಿಕ ಅತೀ ಶೀಘ್ರದಲ್ಲೇ ರಾಜಕೀಯದಲ್ಲಿ ಮುಳುಗಲು ಮಿಲಿಟರಿ ಹಿಂದೇಟು ಹಾಕುತ್ತಿದೆ.

ಆದರೆ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳಿಗೆ ತಾಲಿಬಾನ್ ವಿರುದ್ಧ ಮಿಲಿಟರಿ ಜಯದ ನಡುವೆಯ‌ೂ ಜರ್ದಾರಿಯ ರಾಜಕೀಯ ದುರ್ಬಲತೆ ಪ್ರಮುಖ ಸಮಸ್ಯೆಯಾಗಿದೆ. ಆಫ್ಘಾನಿಸ್ತಾನದಲ್ಲಿ ಅಮೆರಿಕ ನೇತೃತ್ವದ ಕಾರ್ಯಾಚರಣೆ ಮತ್ತು ಅಣ್ವಸ್ತ್ರ ಸಜ್ಜಿತ ರಾಷ್ಟ್ರದ ಸ್ಥಿರತೆಗೆ ಬೆದರಿಕೆಯೊಡ್ಡಿರುವ ಉಗ್ರವಾದಿಗಳ ವಿರುದ್ಧ ಹೋರಾಟಕ್ಕೆ ಸುದೀರ್ಘಾವಧಿಯ ಪಾಲುದಾರರನ್ನು ಅಮೆರಿಕ ಮತ್ತು ಇತರೆ ರಾಷ್ಟ್ರಗಳು ಹುಡುಕುತ್ತಿವೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ