ಇಲ್ಲಿನ ಪಶುಪತಿನಾಥ ದೇಗುಲದಲ್ಲಿ ನೂತನವಾಗಿ ಆಯ್ಕೆಯಾದ ಭಾರತೀಯ ಅರ್ಚಕರ ಮೇಲೆ ಮಾವೋವಾದಿಗಳಿಂದ ಹಲ್ಲೆ ನಡೆದ ಘಟನೆ ಬಗ್ಗೆ ನೇಪಾಳ ವಿಷಾದ ವ್ಯಕ್ತಪಡಿಸಿದ್ದು, ಅವರಿಗೆ ರಕ್ಷಣೆ ನೀಡುವುದಾಗಿ ಭರವಸೆ ನೀಡಿದೆ.
ಅರ್ಚಕರಿಗೆ ಹಲ್ಲೆ ಮಾಡಿದ ಗುಂಪಿನ ನಾಯಕ ಸೇರಿದಂತೆ ಸುಮಾರು 24 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಮಿಲಿಯಾಂತರ ಹಿಂದೂಗಳ ನಂಬಿಕೆಯ ಕೇಂದ್ರವಾದ ಪವಿತ್ರ ದೇಗುಲದಲ್ಲಿ ಭಾರತೀಯ ಅರ್ಚಕರ ಮೇಲೆ ದಾಳಿ ಅತ್ಯಂತ ವಿಷಾದನೀಯ ಮತ್ತು ದುಃಖಕರ ಎಂದು ನೇಪಾಳ ಸಾಂಸ್ಕೃತಿಕ ಸಚಿವ ಮಿನಿಂದ್ರಾ ರಿಜಾಲ್ ತಿಳಿಸಿದ್ದಾರೆ.
ಅರ್ಚಕರಾದ ಗಿರೀಶ್ ಭಟ್ಟ ಮತ್ತು ರಾಘವೇಂದ್ರ ಭಟ್ಟ ಅವರನ್ನು 40-50 ಮಾವೋವಾದಿಗಳು ತೀವ್ರವಾಗಿ ಥಳಿಸಿದ ಘಟನೆ ನಡೆದ ಮರುದಿನವೇ ಅವರ ಹೇಳಿಕೆ ಹೊರಬಿದ್ದಿದೆ. ಅರ್ಚಕರ ಬಟ್ಟೆಗಳು ಮತ್ತು ಜನಿವಾರಗಳನ್ನು ಮಾಜಿ ಬಂಡುಕೋರರು ಕಿತ್ತುಹಾಕಿದ್ದರು