ಅನ್ಯಧರ್ಮೀಯರಿಗೆ ಅವಮಾನ ಮಾಡಬೇಡಿರೆಂದು ಕುರಾನ್ ಗ್ರಂಥವನ್ನು ಉಲ್ಲೇಖಿಸಿ ಮಲೇಶಿಯದ ಪ್ರಧಾನಮಂತ್ರಿ ನಜೀಬ್ ಟುನ್ ರಜಾಕ್ ಶನಿವಾರ ಕೋರಿಕೊಂಡಿದ್ದಾರೆ. ಮುಸ್ಲಿಂ ಪ್ರಾಬಲ್ಯದ ನಿವಾಸಿಗಳು ತಮ್ಮ ಪ್ರದೇಶಕ್ಕೆ ಹಿಂದು ದೇವಸ್ಥಾನವನ್ನು ಸ್ಥಳಾಂತರಿಸುವುದರ ವಿರುದ್ಧ ರ್ಯಾಲಿಯಲ್ಲಿ ದನದ ತಲೆಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದರು.
ಸುಮಾರು 150 ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಮರಿಯಮ್ಮನ್ ದೇಗುಲವನ್ನು ಸೆಕ್ಷನ್ 19ರಿಂದ ಮುಸ್ಲಿಂ ಮಲಯ್ ಬಹುಸಂಖ್ಯಾತ ಪ್ರದೇಶಕ್ಕೆ ಸ್ಥಳಾಂತರಿಸುವುದಕ್ಕೆ ಶಾ ಅಲಾಂನಲ್ಲಿ ಪ್ರತಿಭಟನಾ ರ್ಯಾಲಿಯನ್ನು ಮುಸ್ಲಿಮರು ಹಮ್ಮಿಕೊಂಡಿದ್ದರು. ಆದರೆ ಹಿಂದೂಗಳು ಪವಿತ್ರವೆಂದು ಪರಿಗಣಿಸಿರುವ ಹಸುಗಳ ತಲೆಯನ್ನು ಮೆರವಣಿಗೆಗೆ ತಂದು ರಾಜ್ಯ ಕಾರ್ಯಾಲಯದಲ್ಲಿ ಇರಿಸಿದಾಗ ವಿವಾದ ಭುಗಿಲೆದ್ದಿತು. ರಮ್ಜಾನ್ ಆಚರಿಸುವ ಮಧ್ಯೆ ಮಸೀದಿಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ರಜಾಕ್, ಅನ್ಯಧರ್ಮೀಯರನ್ನು ಗೌರವಿಸುವ ನಿಜವಾದ ಇಸ್ಲಾಂ ಬೋಧನೆಯನ್ನು ಅನುಸರಿಸುವಂತೆ ಮುಸ್ಲಿಮರಿಗೆ ಒತ್ತಾಯಿಸಿದರು.
ಅನ್ಯ ಧರ್ಮೀಯರ ವಿರುದ್ಧ ತಿರುಗಿಬಿದ್ದರೆ, ಇತರೆ ಧರ್ಮೀಯರೂ ಹಿಂಸಾಚಾರಕ್ಕೆ ಇಳಿಯುತ್ತಾರೆಂದು ಸುರಾ ಅಲ್ ಮೈದಾ ಮತ್ತು ಸುರಾ ಅಲ್ ಅನಾಂ ಮುಸ್ಲಿಮರಿಗೆ ಹಿತವಚನ ನುಡಿದರು.ಪ್ರವಾದಿ ಮಹಮದ್ ಶಕೆಯಲ್ಲಿ ಕೂಡ ಅವರು ಸ್ವತಃ ಅನ್ಯಧರ್ಮೀಯರು ನಂಬಿದ ಧರ್ಮವನ್ನು ಆಚರಿಸಲು ಇತರರಿಗೆ ಅವಕಾಶ ನೀಡಿದ್ದರು ಮತ್ತು ಅವರ ಅನುಯಾಯಿಗಳು ಅದರ ವಿರುದ್ಧ ತಿರುಗಿಬೀಳುವುದನ್ನು ನಿಷೇಧಿಸಿದ್ದರು. ಈ ರಮ್ಜಾನ್ ಮಾಸದಲ್ಲಿ ನಾವು ಶಿಸ್ತಿನ ಅನುಯಾಯಿಗಳೆಂದು ಸಾಬೀತು ಮಾಡಬೇಕು ಎಂದು ರಜಾಕ್ ತಿಳಿಸಿದರು.