ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹೊಸ ಒಪ್ಪಂದದಿಂದ ಕಪ್ಪು ಹಣ ಪತ್ತೆಗೆ ಸಹಕಾರ: ಸ್ವಿಸ್ (double taxation | Switzerland | India | Swiss bank)
 
ಇಮ್ಮಡಿ ತೆರಿಗೆ ಉಲ್ಲಂಘನೆ ಒಪ್ಪಂದದ ಪರಿಷ್ಕರಣೆ ಕುರಿತಂತೆ ಭಾರತ ಮತ್ತು ಸ್ವಿಟ್ಜರ್ಲೆಂಡ್ ಸರಕಾರಗಳು ಮಾತುಕತೆಗೆ ಸಿದ್ಧತೆ ನಡೆಸುತ್ತಿರುವ ಹೊತ್ತಿಗೆ ಹೇಳಿಕೆ ನೀಡಿರುವ ಸ್ವಿಟ್ಜರ್ಲೆಂಡ್ ಉಪಾಧ್ಯಕ್ಷೆ ಡೋರಿಸ್ ಲೂತಾರ್ಡ್, ಮುಂದಿನ ವರ್ಷದೊಳಗೆ ಒಪ್ಪಂದವು ಅಂತಿಮ ಹಂತಕ್ಕೆ ತಲುಪುವ ಭರವಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸ್ವಿಸ್ ಬ್ಯಾಂಕುಗಳಲ್ಲಿರುವ ಕಪ್ಪು ಹಣದ ವಿವರಗಳನ್ನು ಕೂಡ ಭಾರತ ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.

1995ರಲ್ಲಿ ಉಭಯ ರಾಷ್ಟ್ರಗಳು ಮಾಡಿಕೊಂಡಿದ್ದ ಒಪ್ಪಂದವನ್ನು ಪರಿಷ್ಕರಣೆಯಾಗಲಿದೆಯೇ ಎಂದು ಅವರನ್ನು ಪ್ರಶ್ನಿಸಿದಾಗ, ಹೌದು ಎಂದು ಉತ್ತರಿಸಿದ್ದಾರೆ. ಈ ಒಪ್ಪಂದದಲ್ಲಿ ಪರಿಷ್ಕರಣೆಯಾದಲ್ಲಿ ಸ್ವಿಸ್ ಬ್ಯಾಂಕುಗಳಲ್ಲಿ ತೆರಿಗೆ ವಂಚಿಸಿ ಅಕ್ರಮವಾಗಿ ಕೂಡಿಟ್ಟಿರುವ ಭಾರತೀಯರ ಖಾತೆ ವಿವರಗಳನ್ನು ಭಾರತ ಪಡೆಯಬಹುದಾಗಿದೆ.

ಡಿಸೆಂಬರ್‌ನಲ್ಲಿ ಆರಂಭವಾಗಲಿರುವ ಉಭಯ ರಾಷ್ಟ್ರಗಳ ಮಾತುಕತೆಯಿಂದ ಯಶಸ್ವಿ ಫಲಿತಾಂಶ ಹೊರ ಬೀಳಲಿದೆ ಎಂದು ಇದೇ ಸಂದರ್ಭದಲ್ಲಿ ಲೂತಾರ್ಡ್ ಭರವಸೆ ವ್ಯಕ್ತಪಡಿಸಿದ್ದಾರೆ.

'ನನ್ನ ಪ್ರಕಾರ ಮುಂದಿನ ವರ್ಷ ಹೊಸ ಒಪ್ಪಂದವು ಪೂರ್ಣಗೊಳ್ಳಲಿದೆ' ಎಂದು ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯೂಟಿಓ) ಸಮಾವೇಶಕ್ಕಾಗಿ ಸ್ವಿಟ್ಜರ್ಲೆಂಡ್ ಪ್ರತಿನಿಧಿಯಾಗಿ ಭಾರತಕ್ಕೆ ಆಗಮಿಸಿರುವ ಅವರು ತಿಳಿಸಿದರು.

ಹೆಸರು ಹುಡುಕುವ ಕಾರ್ಯಕ್ಕೆ ನಾವು ಭಾರತವನ್ನು ಸ್ವಾಗತಿಸುವುದಿಲ್ಲ ಎಂದು ಸ್ವಿಸ್ ಬ್ಯಾಂಕರ್ಸ್ ಅಸೋಸಿಯೇಷನ್ (ಎಸ್‌ಬಿಎ) ನೀಡಿದ್ದ ಹೇಳಿಕೆಯನ್ನು ಬೆಂಬಲಿಸಿರುವ ಅವರು, ವಿಶ್ವದ ಯಾವುದೇ ದೇಶಕ್ಕೂ ಅಂತಹ ಅವಕಾಶವನ್ನು ನಾವು ನೀಡುವುದಿಲ್ಲ ಎಂದರು.

'ಜಗತ್ತಿನ ಯಾವುದೇ ರಾಷ್ಟ್ರಕ್ಕೂ ಖಾತೆಗಳನ್ನು ಹುಡುಕುವ ಅವಕಾಶವನ್ನು ನಾವು ನೀಡುವುದಿಲ್ಲ. ನಾವು ಓಇಸಿಡಿ ಗುಣಮಟ್ಟವನ್ನು ಕಾಯ್ದುಕೊಂಡಿದ್ದೇವೆ. ಅಂತಾರಾಷ್ಟ್ರೀಯ ಕಾನೂನನ್ನು ನಾವು ಅನುಸರಿಸುತ್ತಿದ್ದೇವೆ. ಆದರೆ ಅಪರಾಧವನ್ನು ರಕ್ಷಿಸುವ ಕೆಲಸವನ್ನು ಮಾಡುವುದಿಲ್ಲ' ಎಂದು ವಾಣಿಜ್ಯ ಸಚಿವೆಯೂ ಆಗಿರುವ ಲೂತಾರ್ಡ್ ಸ್ಪಷ್ಟಪಡಿಸಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ