ವಾಷಿಂಗ್ಟನ್, ಭಾನುವಾರ, 6 ಸೆಪ್ಟೆಂಬರ್ 2009( 14:57 IST )
ಬುಷ್ ಆಡಳಿತ ಮತ್ತು ಸೆಪ್ಟೆಂಬರ್ 11ರ ಭಯೋತ್ಪಾದಕ ದಾಳಿ ಕುರಿತು ಪ್ರಚೋದನಾಕಾರಿ ಸರಣಿ ಹೇಳಿಕೆಗಳನ್ನು ನೀಡಿ ತೀವ್ರ ಟೀಕೆಗೆ ಗುರಿಯಾಗಿದ್ದ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾರ ಪರಿಸರ ಸಲಹೆಗಾರ ವಾನ್ ಜಾನ್ಸ್ ತನ್ನ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ.
2001ರ ಉಗ್ರಗಾಮಿಗಳ ದಾಳಿಯಲ್ಲಿ ಸರಕಾರದ ಪಾತ್ರದ ಕುರಿತು ಅಭಿಪ್ರಾಯವ್ಯಕ್ತಪಡಿಸಿದ್ದ ಒಬಾಮಾರ ಹಸಿರು ಅಭಿಯಾನದಲ್ಲಿ ನಿರಂಕುಶ ಅಧಿಪತಿ ಜಾನ್ಸ್ ತೊಂದರೆಯಲ್ಲಿ ಸಿಲುಕಿದ್ದರು ಎಂದು ಪತ್ರಿಕೊಂದು ವರದಿ ಮಾಡಿದೆ.
ಅಮೆರಿಕಾದ ಮೇಲಿನ ಉಗ್ರಗಾಮಿ ದಾಳಿಯಲ್ಲಿನ ಒಳಸಂಚು ವಾದಗಳನ್ನು ಬೆಂಬಲಿಸಿ ಅವರು ಸಹಿ ಹಾಕಿದ ವಿಚಾರ ಬಹಿರಂಗವಾದ ನಂತರ ಹಲವು ರಾಜಕಾರಣಿಗಳು ಜಾನ್ಸ್ ರಾಜಿನಾಮೆಗೆ ಒತ್ತಾಯಿಸಿದ್ದರು.
ಭಾನುವಾರ ಬೆಳಿಗ್ಗೆ ಈ ರಾಜಿನಾಮೆ ಪತ್ರವನ್ನು ವೈಟ್ ಹೌಸ್ ಬಿಡುಗಡೆ ಮಾಡಿದ್ದು, ತಾನು ಹುಸಿ ಆರೋಪಗಳ ಚಳುವಳಿಯ ಬಲಿಪಶುವಾಗಿದ್ದೇನೆ ಎಂದು ಜಾನ್ಸ್ ಪ್ರತಿಕ್ರಿಯಿಸಿದ್ದಾರೆ.
ಆರೋಗ್ಯ ಜಾಗೃತಿ ಮತ್ತು ಪರಿಶುದ್ಧ ಸಾಮರ್ಥ್ಯಕ್ಕಾಗಿ ಐತಿಹಾಸಿಕ ಹೋರಾಟ ನಡೆಸಿದ ನನ್ನ ಮೇಲೆ ಪಿತೂರಿದಾರರು ಸುಳ್ಳು ಆರೋಪಗಳನ್ನು ಹೊರಿಸಿದ್ದಾರೆ. ಅವರು ವಿಭಜನೆ ಮತ್ತು ಗೊಂದಲವನ್ನುಂಟು ಮಾಡುವ ಸಲುವಾಗಿ ಸುಳ್ಳು ಮತ್ತು ತಿರುಚುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಜಾನ್ಸ್ ಪ್ರತಿಕ್ರಿಯೆ ನೀಡಿದ್ದಾರೆ.
ತನ್ನ ಈ ಹಿಂದಿನ ಹೇಳಿಕೆಗಳಿಗಾಗಿ ಗುರುವಾರ ಜಾನ್ಸ್ ಕ್ಷಮೆಯಾಚಿಸಿದ್ದರು. ಅದರ ಮರುದಿನ 'ಒಬಾಮಾರಿಗೆ ಜಾನ್ಸ್ ಮೇಲೆ ಈಗಲೂ ನಂಬಿಕೆಯಿದೆಯೇ?' ಎಂಬ ಪ್ರಶ್ನೆ ಬಂದಾಗ ವೈಟ್ ಹೌಸ್ ಮಾಧ್ಯಮ ಕಾರ್ಯದರ್ಶಿ ರಾಬರ್ಟ್ ಗಿಬ್ಸ್, 'ಅವರು ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ' ಎಂದಷ್ಟೇ ತಿಳಿಸಿದ್ದರು.