ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಿಶ್ವಸಂಸ್ಥೆ ಅಧಿಕಾರಿಯನ್ನು ಹೊರ ದಬ್ಬಿದ ಶ್ರೀಲಂಕಾ (Sri Lanka | United Nations | James Elder | LTTE)
 
ಇತ್ತೀಚೆಗಷ್ಟೇ ಮುಕ್ತಾಯ ಕಂಡಿದ್ದ ಎಲ್‌ಟಿಟಿಇ ಸಮರದ ಕುರಿತು ವಿಶ್ವಸಂಸ್ಥೆ ಹಿರಿಯ ಅಧಿಕಾರಿಯೊಬ್ಬರು ನೀಡಿದ ಹೇಳಿಕೆಯಿಂದ ಘಾಸಿಗೊಳಗಾಗಿರುವ ಶ್ರೀಲಂಕಾ ಸರಕಾರವು, ದೇಶ ಬಿಟ್ಟು ತೊಲಗುವಂತೆ ಆದೇಶಿಸಿದೆ.

ಜನಾಂಗೀಯ ಕಲಹದಿಂದ ಯುವ ಜನತೆಯ ಮೇಲಾಗುವ ದುಷ್ಪರಿಣಾಮಗಳ ಕುರಿತು ಎಂದಿನಂತೆ ವಿದೇಶೀ ಸುದ್ದಿ ವಾಹಿನಿಗಳು ಮತ್ತು ಮುದ್ರಣ ಮಾಧ್ಯಮಗಳ ಜತೆ ವಿಶ್ವಸಂಸ್ಥೆ ಮಕ್ಕಳ ಕಲ್ಯಾಣ ನಿಧಿ (ಯುನಿಸೆಫ್) ವಕ್ತಾರ ಜೇಮ್ಸ್ ಎಲ್ಡರ್ ಚರ್ಚಿಸಿದ್ದರು.

ಅವರ ವಿಸಾ ಸೆಪ್ಟೆಂಬರ್ 7ರಂದು ರದ್ದುಗೊಳ್ಳಲಿದ್ದು, ತಕ್ಷಣವೇ ದೇಶ ಬಿಟ್ಟು ಹೊರಡುವಂತೆ ಆದೇಶ ನೀಡಲಾಗಿತ್ತು. ಆದರೆ ಅಧಿಕಾರಿ ಹೆಚ್ಚಿನ ಸಮಯ ಬೇಕೆಂದು ಮನವಿ ಸಲ್ಲಿಸಿದ ಕಾರಣ ಸೆಪ್ಟೆಂಬರ್ 21ರವರೆಗೆ ದೇಶದಲ್ಲಿರಲು ಅವಕಾಶ ನೀಡಲಾಗಿದೆ ಎಂದು ಲಂಕಾ ವಲಸೆ ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವು ತಿಂಗಳ ಹಿಂದೆ ಅವರು ಮಾಧ್ಯಮಗಳೆದುರು ಮಾಡಿದ ಆರೋಪಗಳ ಹಿನ್ನಲೆಯಲ್ಲಿ ಸರಕಾರ ಈ ಕ್ರಮ ಕೈಗೊಂಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಆದರೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ಆಸ್ಟ್ರೇಲಿಯಾದ ಪಾಸ್‌ಪೋರ್ಟ್ ಹೊಂದಿರುವ ಎಲ್ಡರ್ ಯುನಿಸೆಫ್ ಪರವಾಗಿ ಶ್ರೀಲಂಕಾದಲ್ಲಿ ಕಳೆದ ವರ್ಷದ ಜುಲೈನಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು 2010ರವರೆಗೆ ಶ್ರೀಲಂಕಾದಲ್ಲಿ ವಾಸ ಮಾಡುವ ವಿಸಾ ಹೊಂದಿದ್ದರು.

ಯುದ್ಧದ ಕುರಿತು ಮಾಧ್ಯಮಗಳ ಮೇಲೆ ಕಠಿಣ ನಿಲುವು ತಳೆದಿರುವ ಶ್ರೀಲಂಕಾ ಸರಕಾರವು, ಈಶಾನ್ಯ ವಲಯದಲ್ಲಿನ ಸಂಘರ್ಷದ ವರದಿಗಳಿಗೆ ಸಂಪೂರ್ಣ ನಿಷೇಧ ಹೇರಿದೆ. ಕೆಲವೇ ಕೆಲವು ಅಂತಾರಾಷ್ಟ್ರೀಯ ವರದಿಗಾರರಿಗೆ ಮಾತ್ರ ನಿಯಂತ್ರಿತ ವಿಸಾ ನೀಡಲಾಗುತ್ತಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ