ಚೀನಾದ ಸೇನೆಯು ಲಡಖ್ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಗಡಿಯನ್ನು ಉಲ್ಲಂಘಿಸಿ ಬಂಡೆಗಳು ಮತ್ತು ಕಲ್ಲುಗಳ ಮೇಲೆ ಕೆಂಪು ಬಣ್ಣ ಬಳಿದಿದೆಯೆಂಬ ವರದಿಯನ್ನು ಚೀನಾ ಸೋಮವಾರ ನಿರಾಕರಿಸಿದೆ.
ಅತಿಕ್ರಮಣದ ಆರೋಪಗಳು ನಿರಾಧಾರವೆಂದು ಚೀನಾದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಮಾತುಕತೆ ಮೂಲಕ ನಾವು ಸ್ನೇಹಯುತವಾಗಿ ಈ ವಿಷಯವನ್ನು ಇತ್ಯರ್ಥ ಮಾಡುವುದಾಗಿ ಚೀನಾ ತಿಳಿಸಿದೆ.
ವಾಸ್ತವ ನಿಯಂತ್ರಣ ರೇಖೆಯ ಬಳಿ ಭಾರತದ ವಾಯುಪ್ರದೇಶದೊಳಕ್ಕೆ ಹೆಲಿಕಾಪ್ಟರ್ ಅತಿಕ್ರಮಣಗಳನ್ನು ಮಾಡಿದ್ದ ಚೀನಾ, ಲಡಖ್ ಪ್ರದೇಶದಲ್ಲಿ ಕೂಡ ಚೀನಾ ಸೇನೆಯು ಅಂತಾರಾಷ್ಟ್ರೀಯ ಗಡಿಯನ್ನು ಉಲ್ಲಂಘಿಸಿ ಆ ಪ್ರದೇಶದ ಬಂಡೆಗಳು ಮತ್ತು ಕಲ್ಲುಗಳಿಗೆ ಕೆಂಪು ಬಣ್ಣವನ್ನು ಬಳಿದಿದೆಯೆಂದು ವರದಿಯಾಗಿತ್ತು. ಭಾರತ ಮತ್ತು ಚೀನಾ ಅಂತಾರಾಷ್ಟ್ರೀಯ ಗಡಿಯೆಂದು ಗುರುತಿಸಿದ ಮೌಂಟ್ ಗಯಾ ಬಳಿ ಭಾರತದ ಪ್ರದೇಶದೊಳಕ್ಕೆ 1.5 ಕಿಮೀ ವ್ಯಾಪ್ತಿವರೆಗೂ ಚೀನಾ ಪಡೆಗಳು ಪ್ರವೇಶಿಸಿವೆಯೆಂದು ಹೇಳಲಾಗಿದೆ.
ಲೆಹ್ ಪೂರ್ವಕ್ಕೆ ಚುಮಾರ್ ವಲಯದಲ್ಲಿ ಅತಿಕ್ರಮಣವನ್ನು ಮಾಡಲಾಗಿದ್ದು, ಕೆಂಪು ಬಣ್ಣದ ಪೇಂಟ್‌ನಿಂದ ಬಂಡೆಗಳು ಮತ್ತು ಕಲ್ಲುಗಳ ಮೇಲೆ ಚೀನಾದ ಘೋಷವಾಕ್ಯವನ್ನು ಕಾಂಟೋನಿಸ್ ಭಾಷೆಯಲ್ಲಿ ಬರೆದಿದೆಯೆಂದು ಅಧಿಕೃತ ಮೂಲಗಳು ತಿಳಿಸಿದ್ದವು. 22,420 ಅಡಿ ಎತ್ತರದ ಮೌಂಟ್ ಗಯಾ ಪರ್ವತವು ಸೇನೆಯಿಂದ 'ಅಂದದ ಮಂಜಿನ ರಾಜಕುಮಾರಿ' ಎಂದು ಹೆಸರಾಗಿದ್ದು, ಜಮ್ಮು ಕಾಶ್ಮೀರದ ಲಡಕ್‌ನ ತ್ರಿಸಂಧಿ ಸ್ಥಳವಾದ ಹಿಮಾಚಲಪ್ರದೇಶ ಮತ್ತು ಟಿಬೆಟ್‌ನ ಸ್ಪಿಟಿಯಲ್ಲಿದೆ. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಈ ಗಡಿಯನ್ನು ಗುರುತು ಮಾಡಲಾಗಿದ್ದು, ಉಭಯ ರಾಷ್ಟ್ರಗಳಿಗೆ ಅಂತಾರಾಷ್ಟ್ರೀಯ ಗಡಿಯೆಂದು ಪರಿಗಣಿಸಲಾಗಿದೆ.
ಜುಲುಂಗ್ ಲಾ ಕಣಿವೆಯಲ್ಲಿ ಜುಲೈ 31ರಂದು ಕಲ್ಲುಗಳು ಮತ್ತು ಬಂಡೆಗಳ ಮೇಲೆ ಕೆಂಪು ಬಣ್ಣದ ಗುರುತುಗಳನ್ನು ಗಡಿ ರಕ್ಷಣಾ ದಳ ಗುರುತಿಸಿದ್ದು, ಎಲ್ಲ ಕಡೆ ಚೀನಾ, ಚೀನಾ ಎಂದು ಬರೆಯಲಾಗಿದೆಯೆಂದು ಮೂಲಗಳು ತಿಳಿಸಿವೆ. ಸ್ವಾತಂತ್ರ್ಯದ ಬಳಿಕ ಪ್ರಥಮಬಾರಿಗೆ ಚೀನಾವು ಭಾರತದ ಗಡಿಯೊಳಕ್ಕೆ 1.5 ಕಿಮೀನಿಂದ 1.,7ಕಿಮೀ.ವರೆಗೆ ಅತಿಕ್ರಮಣ ಮಾಡಿದ್ದು ಅಧಿಕಾರಿಗಳು ಗಂಭೀರವಾಗಿ ಈ ಘಟನೆಯನ್ನು ಪರಿಗಣಿಸಿದ್ದಾರೆ.
ಪರೀಚು ನದಿ ಹಿಮಾಚಲಪ್ರದೇಶದ ಮೂಲಕ ಹರಿಯುತ್ತಿದ್ದು, ಆಗಾಗ್ಗೆ ಪ್ರವಾಹಗಳಿಂದ ತಲೆನೋವು ತಂದಿದ್ದು, ಈ ಪ್ರದೇಶದಿಂದ ಟಿಬೆಟ್‌ಗೆ ಪ್ರವೇಶಿಸುತ್ತಿದೆ. ಇದಕ್ಕೆ ಮುಂಚೆ ಸಹ ಚೀನಾದ ಹೆಲಿಕಾಪ್ಟರ್‌ಗಳು ಕಳೆದ ಜೂನ್‌ನಲ್ಲಿ ಭಾರತದ ವಾಯುಪ್ರದೇಶವನ್ನು ಚುಮಾರ್‌ನ ನಿಯಂತ್ರಣರೇಖೆ ಬಳಿ ಉಲ್ಲಂಘಿಸಿದ್ದು, ಕೆಲವು ಅವಧಿ ಮೀರಿದ ಆಹಾರಪದಾರ್ಥವನ್ನು ಹೆಲಿಕಾಪ್ಟರ್‌ನಿಂದ ಕೆಳಕ್ಕೆ ಉದುರಿಸಿತ್ತೆಂದು ವರದಿಯಾಗಿತ್ತು.