ಇಸ್ಲಾಮಾಬಾದ್, ಸೋಮವಾರ, 7 ಸೆಪ್ಟೆಂಬರ್ 2009( 11:25 IST )
ಪಾಕಿಸ್ತಾನದ ಮಾಜಿ ಅಧ್ಯಕ್ಷ ಜಿಯಾ ಉಲ್ ಹಕ್ ಮತ್ತು ಪಾಕಿಸ್ತಾನದ ಉನ್ನತಾಧಿಕಾರಿಗಳು ವಿಮಾನಅಪಘಾತದಲ್ಲಿ ಮೃತಪಟ್ಟ ಘಟನೆಯಲ್ಲಿ ಅಮೆರಿಕದ ಕೈವಾಡವಿದೆಯೆಂಬ ಆರೋಪಗಳನ್ನು ಅದು ನಿರಾಕರಿಸಿದೆ. ಅಪಘಾತದ ಹಿಂದೆ ಅಮೆರಿಕ ಕೈವಾಡ ನಡೆಸಿದೆಯೆಂದು ಮಾಜಿ ಗುಪ್ತಚರ ದಳದ ಆರೋಪವನ್ನು ಅಮೆರಿಕ ರಾಯಭಾರ ಕಚೇರಿಯ ವಕ್ತಾರ ರಿಚರ್ಡ್ ಸ್ನೆಲ್‌ಸೈರ್ ನಿರಾಕರಿಸಿದ್ದಾರೆ.
ಅಮೆರಿಕವು ಅಪಘಾತ ಕುರಿತ ತನಿಖೆ ಸ್ಥಗಿತಗೊಳಿಸಲು ಪ್ರಭಾವ ಬೀರಲು ಪ್ರಯತ್ನಿಸುತ್ತಿದೆಯೆಂಬ ಆರೋಪ ಕೂಡ ನಿರಾಧಾರ ಮತ್ತು ಅಸತ್ಯವೆಂದು ಅವರು ಹೇಳಿದ್ದು, ಇಂತಹ ಎಲ್ಲಾ ಆರೋಪಗಳನ್ನು ತಾವು ನಿರಾಕರಿಸುವುದಾಗಿ ಹೇಳಿದ್ದಾರೆ.ಪಾಕಿಸ್ತಾನದಲ್ಲಿ ಅಮೆರಿಕದ ಆಗಿನ ರಾಯಭಾರಿ 1988ರ ಘಟನೆಯಲ್ಲಿ ಮೃತಪಟ್ಟಿದ್ದು, ಅಮೆರಿಕ ಸದಾ ವಾಸ್ತವಾಂಶ ಹೊರೆತೆಗೆಯುವುದರ ಪರವಾಗಿದೆಯೆಂದು ಮೂಲಗಳು ಹೇಳಿವೆ.
ಅಮೆರಿಕವು ವಿಮಾನ ಅಪಘಾತ ಕುರಿತ ಘಟನೆಯ ತನಿಖೆಯನ್ನು ಬಲವಂತವಾಗಿ ನಿಲ್ಲಿಸಿದೆಯೆಂದು ಜಿಯಾ ಉಲ್ ಹಕ್ ಅವರ ಹಿರಿಯ ಪುತ್ರ ಎಜಾಜ್ ಉಲ್ ಹಕ್ ಆರೋಪಿಸಿದ್ದರು.