ನ್ಯೂರೆಮ್ಬರ್ಗ್, ಸೋಮವಾರ, 7 ಸೆಪ್ಟೆಂಬರ್ 2009( 14:31 IST )
ಜರ್ಮನಿಯ ಮಾಜಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಯುವಕನಾಗಿದ್ದಾಗ ರಚಿಸಿದ್ದ ಮೂರು ಜಲವರ್ಣಚಿತ್ರಗಳು ನ್ಯೂರೆನ್ಬರ್ಗ್ ಬವಾರಿಯನ್ ನಗರದಲ್ಲಿ ಒಟ್ಟು 60,000 ಡಾಲರ್ ಹಣಕ್ಕೆ ಹರಾಜಾಗಿದೆ. ದೂರವಾಣಿ ಬಿಡ್ಡಿಂಗ್ನಲ್ಲಿ ಮೂರು ವರ್ಣಚಿತ್ರಗಳನ್ನು ವಿವಿಧ ಬಿಡ್ಡರ್ಗಳಿಗೆ ಮಾರಾಟ ಮಾಡಲಾಗಿದೆಯೆಂದು ಜರ್ಮನಿ ಹರಾಜುದಾರ ಹರ್ಬರ್ಟ್ ವೈಡ್ಲರ್ ತಿಳಿಸಿದ್ದಾರೆ.
ಹಿಟ್ಲರ್ ಎಷ್ಟು ವರ್ಣಚಿತ್ರಗಳನ್ನು ರಚಿಸಿದ್ದರೆಂಬ ಬಗ್ಗೆ ನಿಖರ ಸಂಖ್ಯೆಗಳು ತಿಳಿದಿಲ್ಲವಾದರೂ, ಸುಮಾರು 720 ವರ್ಣಚಿತ್ರಗಳು ಅಸ್ತಿತ್ವದಲ್ಲಿವೆಯಂದು ತಜ್ಞರು ಹೇಳಿದ್ದಾರೆ. ಕಲಾವಿದನಾಗಿ ರೂಪುಗೊಳ್ಳಲು ಹಿಟ್ಲರ್ ಹೆಣಗಾಟ ಮಾಡಿದ್ದರೆಂದು ತಿಳಿದುಬಂದಿದೆ. ವಿಯೆನ್ನಾದ ಕಲಾಶಾಲೆಗೆ ಅವರು ಅರ್ಜಿ ಸಲ್ಲಿಸಿದರೂ ಅದು ತಿರಸ್ಕೃತವಾಗಿತ್ತು.
ಈ ಹಿಂದೆ ಕೂಡ ಹಿಟ್ಲರ್ ವರ್ಣಚಿತ್ರಗಳಿಗೆ ಅನೇಕ ಹರಾಜುಗಳು ನಡೆದಿದ್ದವು. ಹರಾಜಿನಲ್ಲಿ ಮಾರಾಟವಾಗಿರುವ ಜಲವರ್ಣ ಚಿತ್ರಗಳು ಗ್ರಾಮೀಣ ಪರಿಸರದಲ್ಲಿ ಚರ್ಚ್ಗಳು, ಗುಡಿಸಲುಗಳು ಮತ್ತು ಮಿಲ್ಗಳನ್ನು ಬಿಂಬಿಸುತ್ತವೆ.