ಕ್ಸಾನ್ಸರ್ ರೋಗದಿಂದ ಜೀವನ್ಮರಣ ಹೋರಾಟ ಮಾಡಿ ಸಾವಪ್ಪಿದ ರಿಯಾಲಿಟಿ ಟಿವಿ ನಟಿ ಜೇಡ್ ಗೂಡಿಯ ಪತಿ ಜ್ಯಾಕ್ ಟ್ವೀಡ್ ವಿರುದ್ಧ ಹರೆಯದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಆರೋಪ ಹೊರಿಸಲಾಗಿದೆ. 22 ವರ್ಷ ವಯಸ್ಸಿನ ಎಸೆಕ್ಸ್ ನಿವಾಸಿಯು ಸೋಮವಾರ ಈ ಕುರಿತು ಕೋರ್ಟ್‌ನಲ್ಲಿ ಹಾಜರಾಗಲಿದ್ದಾನೆ. 19 ವರ್ಷ ವಯಸ್ಸಿನ ಬಾಲಕಿಯ ದೂರಿನ ಆಧಾರದ ಮೇಲೆ 20ರ ಹರೆಯದ ಇಬ್ಬರು ವ್ಯಕ್ತಿಗಳ ಜತೆ ಟ್ವೀಡ್‌ನನ್ನು ಭಾನುವಾರ ಬಂಧಿಸಲಾಗಿತ್ತು.
ರೆಡ್‌ಬ್ರಿಡ್ಜ್‌ನಲ್ಲಿರುವ ಟ್ವೀಡ್‌ನ ಅವಿವಾಹಿತರ ಕೋಣೆಯಲ್ಲಿ ಟ್ವೀಡ್ ಬಾಲಕಿಯ ಮೇಲೆ ದೌರ್ಜನ್ಯ ಮಾಡಿದ್ದಾನೆ. ರಾತ್ರಿಕ್ಲಬ್‌ನಲ್ಲಿ ಬಾಲಕಿಯನ್ನು ಭೇಟಿ ಮಾಡಿದ್ದ ಟ್ವೀಡ್ ಅವಳನ್ನು ಕೋಣೆಗೆ ಕರೆತಂದಿದ್ದ.
16 ವರ್ಷ ವಯಸ್ಸಿನ ಬಾಲಕನನ್ನು ಗಾಲ್ಫ್ ಬ್ಯಾಟಿನಿಂದ ಬಾರಿಸಿದ್ದ ಟ್ವೀಡ್ 18 ತಿಂಗಳು ಜೈಲುಶಿಕ್ಷೆ ಅನುಭವಿಸಿ ಕಳೆದ ಜನವರಿಯಲ್ಲಿ ಹೊರಬಂದಿದ್ದ. ಬಳಿಕ ಟ್ಯಾಕ್ಸಿ ಚಾಲಕನೊಬ್ಬನಿಗೆ ಥಳಿಸಿದ್ದ ಅವನು ಪುನಃ ಮೇನಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ. ಗೂಡಿ ಸಾವಿನ ನೋವನ್ನು ಮರೆಯಲು ಕುಡಿತಕ್ಕೆ ಮೊರೆಹೋಗಿದ್ದ ಟ್ವೀಡ್ ಪತ್ರಿಕೆಗಳಿಗೆ ಸುದ್ದಿಯಾಗಿದ್ದ. ಈಗ ಮತ್ತೆ ಹದಿಹರೆಯದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಪತ್ರಿಕೆಗಳಿಗೆ ಆಹಾರವಾಗಿದ್ದಾನೆ.