ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಿಮಾನ ಸ್ಫೋಟದ ಸಂಚು: ಮ‌ೂವರು ತಪ್ಪಿತಸ್ಥರು (London | America | Plot | 9/11)
 
ಲಂಡನ್‌ನಿಂದ ಅಮೆರಿಕಕ್ಕೆ ತೆರಳುತ್ತಿದ್ದ ವಿಮಾನಗಳನ್ನು ಸ್ವದೇಶಿ ನಿರ್ಮಿತ ದ್ರವ ಬಾಂಬ್‌ಗಳ ಮ‌ೂಲಕ ಸ್ಫೋಟಿಸಿ ಸಾವಿರಾರು ಜನರ ಹತ್ಯೆಗೆ ಪಿತೂರಿ ನಡೆಸಿದ ಆರೋಪದ ಮೇಲೆ ಮ‌ೂವರನ್ನು ತಪ್ಪಿತಸ್ಥರು ಎಂದು ಕೋರ್ಟೊಂದು ತೀರ್ಪು ನೀಡಿದೆ. ವೂಲ್‌ವಿಕ್ ಕ್ರೌನ್ ಕೋರ್ಟ್ ನ್ಯಾಯಾಧೀಶರು 28 ವರ್ಷ ವಯಸ್ಸಿನ ಅಬ್ದುಲ್ಲಾ ಅಹ್ಮದ್ ಅಲಿ, 28ರ ಪ್ರಾಯದ ತನ್ವೀರ್ ಹುಸೇನ್ ಮತ್ತು 29ರ ಪ್ರಾಯದ ಅಸಾದ್ ಸರ್ವರ್ ಅವರು ತಪ್ಪಿತಸ್ಥರೆಂದು ತೀರ್ಪು ನೀಡಿದ್ದಾರೆ.

ಪಾನೀಯಗಳನ್ನು ಒಯ್ಯುವ ಸೋಗಿನಲ್ಲಿ ಬಾಂಬ್‌ಗಳನ್ನು ಕ್ರಿಯಾಶೀಲಗೊಳಿಸಲು ಅವರು ಪಿತೂರಿ ನಡೆಸಿದ್ದರೆಂದು ಆರೋಪಿಸಲಾಗಿದೆ. ಆತ್ಮಾಹುತಿ ಬಾಂಬ್ ಸಂಚಿನಲ್ಲಿ ಭಾಗಿಯಾದ ಇನ್ನೂ ನಾಲ್ವರನ್ನು ತಪ್ಪಿತಸ್ಥರಲ್ಲವೆಂದು ಕೋರ್ಟ್ ತೀರ್ಮಾನಿಸಿದೆ. ಪಿತೂರಿಯ ರಿಂಗ್‌ಲೀಡರ್ ಅಹ್ಮದ್ ಅಲಿ ಎರಡೂವರೆ ವರ್ಷಗಳ ಅವಧಿಯಲ್ಲಿ 7 ಅಮೆರಿಕ ಮತ್ತು ಕೆನಡಾಗೆ ತೆರಳುವ ವಿಮಾನಗಳನ್ನು ಸ್ಫೋಟಿಸಲು ಗುರುತಿಸಿದ್ದನೆಂದು ಬಂಧನದ ಸಂದರ್ಭದಲ್ಲಿ ತಿಳಿದುಬಂದಿದೆ.

ಲಂಡನ್ ಹೀಥ್ರೋ ವಿಮಾನನಿಲ್ದಾಣದಿಂದ ಸಾನ್ ಫ್ರಾನ್ಸಿಸ್ಕೊ, ವಾಷಿಂಗ್ಟನ್, ನ್ಯೂಯಾರ್ಕ್,ಚಿಕಾಗೊ, ಟೊರಂಟೊ ಮತ್ತು ಮಾಂಟ್ರಿಯಲ್‌ಗೆ ಹಾರುವ ವಿಮಾನಗಳನ್ನು ಸ್ಪೋಟಿಸಲು ಅವನು ಸಂಚು ರೂಪಿಸಿದ್ದ.ಅಹ್ಮದ್ ಅಲಿಯ ಕ್ವಾರ್ಟರ್‌ಮಾಸ್ಟರ್ ಎಂದು ಕರೆಯಲಾದ ಸರ್ವಾರ್ ಬಕಿಂಗ್‌ಹ್ಯಾಂಶೈರ್ ಹೈ ವೈಕೋಂಬ್‌ನ ಮನೆಯಲ್ಲಿ ಬಾಂಬ್ ಸಾಮಗ್ರಿಗಳನ್ನು ಹೊಂದಿದ್ದು, ಪೂರ್ವ ಲಂಡನ್ ವಾಲ್ತಾಮ್‌ಸ್ಟೊ ಪ್ರದೇಶವು ಬಾಂಬ್ ಕಾರ್ಖಾನೆಯಾಗಿ ಪರಿವರ್ತಿತವಾಗಿತ್ತು. ಅಲ್ಲಿ ಮ‌ೂವರು ರಾಸಾನಿಯಕಗಳ ವಿಶೇಷ ಮಿಶ್ರಣ ತಯಾರಿಸಿ ವಿಮಾನದ ಲಗೇಜಿನಲ್ಲಿ ಸಾಗಿಸುವ ಸಾಮಾನ್ಯ ಕ್ರೀಡಾ ಪಾನೀಯ ಸೀಸೆಗಳಲ್ಲಿಡಲು ಯೋಜಿಸಿದ್ದರು.

ದ್ರವ ಬಾಂಬ್‌ಗಳನ್ನು ಒಳಗೊಂಡ ಹತ್ಯೆ ಸಂಚಿನಲ್ಲಿ ವಾಲ್ತಾಮ್‌ಸ್ಟೋವ್‌ನ ಅಹ್ಮದ್ ಅಲಿ, ಪೂರ್ವ ಲಂಡನ್ ಲೇಟನ್‌ನ ಹುಸೇನ್ ಮತ್ತು ಸರ್ವಾರ್ ಈ ಮುಂಚೆ ದ್ರವ ಬಾಂಬ್‌ಗಳ ಮ‌ೂಲಕ ಹತ್ಯೆಯ ಸಂಚಿನಲ್ಲಿ ತಪ್ಪಿತಸ್ಥರೆನಿಸಿದ್ದರು. ಆದರೆ ವಿಮಾನದಲ್ಲಿ ಉಪಕರಣಗಳನ್ನು ಸ್ಪೋಟಿಸುವ ಯೋಜನೆಗಳ ಬಗ್ಗೆ ಪ್ರಥಮ ವಿಚಾರಣೆಯಲ್ಲಿ ತೀರ್ಪುಗಾರರಿಗೆ ತಿಳಿದುಬರಲಿಲ್ಲ. ಆದರೆ ಎರಡನೇ ತೀರ್ಪುಗಾರರು ಈ ಯೋಜನೆ ಅಸ್ತಿತ್ವದಲ್ಲಿತ್ತೆಂದು ನಿರ್ಧರಿಸಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ