ವಾಷಿಂಗ್ಟನ್, ಮಂಗಳವಾರ, 8 ಸೆಪ್ಟೆಂಬರ್ 2009( 15:02 IST )
ಪಾಕಿಸ್ತಾನದ ಅಣ್ವಸ್ತ್ರಾಗಾರದಲ್ಲಿ ಭದ್ರತಾ ವ್ಯವಸ್ಥೆಗಳ ಬಗ್ಗೆ ಅಮೆರಿಕ ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಗೇಟ್ಸ್ ಸಂತೃಪ್ತಿ ವ್ಯಕ್ತಪಡಿಸಿದ್ದಾರೆ. ಅಲ್ ಜಝೀರಾ ಟಿವಿ ಚಾನೆಲ್ ಜತೆ ನಡೆದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಗೇಟ್ಸ್, ಮುಸ್ಲಿಂ ಭಯೋತ್ಪಾದಕರ ವಿರುದ್ಧ ಅಣ್ವಸ್ತ್ರಗಳನ್ನು ರಕ್ಷಿಸಲು ಪಾಕಿಸ್ತಾನದ ವ್ಯವಸ್ಥೆಗಳು ಸೂಕ್ತ ಮತ್ತು ಸಾಕಷ್ಟಿದೆಯೆಂದು ಅವರು ಹೇಳಿದ್ದಾರೆ.
ತಾಲಿಬಾನ್ ಬೆದರಿಕೆಗಳ ದೃಷ್ಟಿಯಿಂದ ಪಾಕಿಸ್ತಾನದ ಅಣ್ವಸ್ತ್ರ ಭಂಡಾರದ 80ರಿಂದ 100 ಶಸ್ತ್ರಾಸ್ತ್ರಗಳ ರಕ್ಷಣೆ ಬಗ್ಗೆ ಅತಿಯಾದ ಆತಂಕ ಕವಿದಿದೆ. ಕಳೆದ ತಿಂಗಳು ಬ್ರಿಟನ್ ಬ್ರಾಡ್‌ಫೋರ್ಡ್ ವಿವಿಯ ಭದ್ರತಾ ಸಂಶೋಧನಾ ಘಟಕದ ನಿರ್ದೇಶಕ ಶಾನ್ ಗ್ರೆಗರಿ ಈ ಕುರಿತು ತಿಳಿಸುತ್ತಾ, ಸ್ವದೇಶಿ ಭಯೋತ್ಪಾದಕರು ಪಾಕಿಸ್ತಾನದ ಅಣ್ವಸ್ತ್ರ ಸೌಲಭ್ಯಗಳ ಮೇಲೆ 2007 ಮತ್ತು 2008ರಲ್ಲಿ ಮೂರು ಬಾರಿ ದಾಳಿ ಮಾಡಿದ್ದು, ಇಸ್ಲಾಮಾಬಾದ್ ಈ ದಾಳಿಗಳನ್ನು ನಿರಾಕರಿಸಿದೆಯೆಂದರು.
ಇಸ್ಲಾಮಾಬಾದ್ ಕೂಡ ತಾನು ಅಣ್ವಸ್ತ್ರಗಳಿಗೆ ಮತ್ತು ಸಂಬಂಧಿಸಿದ ಪ್ರಯೋಗಶಾಲೆಗಳಿಗೆ ಸೂಕ್ತ ಭದ್ರತಾವ್ಯವಸ್ಥೆಗಳನ್ನು ಮಾಡಿರುವುದಾಗಿ ಅಮೆರಿಕಕ್ಕೆ ಆಶ್ವಾಸನೆ ನೀಡಿದೆಯೆಂದು ತಿಳಿಸಿದರು.