ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬ್ರಿಟನ್ ಲೇಖಕಿ ಹಿಲರಿ ಮ್ಯಾಂಟೆಲ್‌ಗೆ ಬೂಕರ್ ಪ್ರಶಸ್ತಿ (London | Hilary Mantel | Booker | Wolf Hall)
 
ಈ ಬಾರಿಯ ಮ್ಯಾನ್ ಬೂಕರ್ ಪ್ರಶಸ್ತಿಯು ಬ್ರಿಟನ್ ಲೇಖಕಿ ಹಿಲರಿ ಮ್ಯಾಂಟೆಲ್ ಅವರು ಬರೆದ 16ನೇ ಶತಮಾನದ 'ವುಲ್ಫ್ ಹಾಲ್' ಶಿರೋನಾಮೆಯ ಕಥೆಗಾಗಿ ನೀಡಲಾಗಿದೆ. 57 ವರ್ಷ ವಯಸ್ಸಿನ ಮಾಂಟೆಲ್ ಅವರು 50,000 ಪೌಂಡ್ ಪ್ರಶಸ್ತಿ ಮೊತ್ತವನ್ನು ಗಳಿಸಲಿದ್ದು, ಇಂಗ್ಲೀಷ್ ಭಾಷಿಕ ಜಗತ್ತಿನ ಅತ್ಯಂತ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿಯೆಂದು ಇದನ್ನು ಪರಿಗಣಿಸಲಾಗಿದೆ.

ಬೂಕರ್‌ ಪ್ರಶಸ್ತಿಯು ಭಾರತದ ಲೇಖಕರಾದ ಸಲ್ಮಾನ್ ರಷ್ದಿ, ಅನಿತಾ ದೇಸಾಯಿ, ಅರವಿಂದ ಅಡಿಗ ಮತ್ತು ಅರುಂಧತಿ ರಾಯ್ ಮುಂತಾದವರಿಗೆ ಇದಕ್ಕೆ ಮುಂಚೆ ಬಂದಿದ್ದು, ಈ ವರ್ಷ ಪ್ರಶಸ್ತಿಗೆ ನಾಮಾಂಕಿತರಾದವರ ಪಟ್ಟಿಯಲ್ಲಿ ಭಾರತೀಯರ ಹೆಸರು ಇರಲಿಲ್ಲ.

ಅಧ್ಯಕ್ಷ ಜೇಮ್ಸ್ ನಾಟಿ ಬೂಕರ್ ಪ್ರಶಸ್ತಿ ಬಗ್ಗೆ ತಿಳಿಸುತ್ತಾ, ಪುಸ್ತಕದಲ್ಲಿ ಕಥೆಹೇಳುವ ರೀತಿಯಲ್ಲಿನ ದಿಟ್ಟತನ, ಸನ್ನಿವೇಶ ಸೃಷ್ಟಿ ಮತ್ತು ನ್ಯಾಯಾಧೀಶರೊಬ್ಬರು ತಿಳಿಸಿದಂತೆ ಅಸಾಮಾನ್ಯ ರೀತಿಯಲ್ಲಿ ಸೃಷ್ಟಿಸಿದ ಸಮಕಾಲೀನ ಕೃತಿಯೆಂದು ಬಣ್ಣಿಸಿದ್ದಾರೆ.

ಸಂಬಂಧಿತ ಮಾಹಿತಿ ಹುಡುಕಿ