PTIPTI ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರು ಜಗತ್ತಿನಲ್ಲಿ ಶಾಂತಿ ಸ್ಥಾಪನೆಗೆ ಪಟ್ಟ ಶ್ರಮಕ್ಕಾಗಿ ಮತ್ತು ವಿಶ್ವವನ್ನು ಅಣ್ವಸ್ತ್ರಮುಕ್ತವಾಗಿಸಲು ಅಣ್ವಸ್ತ್ರ ದಾಸ್ತಾನನ್ನು ತಗ್ಗಿಸುವ ಪ್ರಯತ್ನಕ್ಕಾಗಿ ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿಗೆ ಪುರಸ್ಕೃತರಾಗಿದ್ದಾರೆ. ಅಮೆರಿಕದ ಉನ್ನತ ಹುದ್ದೆಯನ್ನು ಹೊಂದಿದ ಪ್ರಥಮ ಆಫ್ರಿಕನ್-ಅಮೆರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಒಬಾಮಾ, ಪರಮಾಣು ನಿಶ್ಶಸ್ತ್ರೀಕರಣಕ್ಕೆ ಕರೆ ನೀಡಿದ್ದು, ಕಳೆದ ಜನವರಿಯಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಸ್ಥಗಿತಗೊಂಡ ಮಧ್ಯಪೂರ್ವ ಶಾಂತಿ ಪ್ರಕ್ರಿಯೆಯ ಪುನಾರಂಭಕ್ಕೆ ಕೆಲಸ ಮಾಡಿದ್ದರು. ಒಬಾಮಾ