ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹಸಿವಿನಿಂದ ಬಳಲುತ್ತಿರುವ ಒಂದು ಶತಕೋಟಿ: ವಿಶ್ವಸಂಸ್ಥೆ (Parents | Africa | Billion | Trend)
Feedback Print Bookmark and Share
 
ಆಫ್ರಿಕಾದ ಬಡರಾಷ್ಟ್ರಗಳಲ್ಲಿ ತಮ್ಮ ಮಕ್ಕಳಿಗೆ ದಿನಕ್ಕೆ ಒಂದು ಹೊತ್ತಿನ ಕೂಳು ನೀಡುವುದಕ್ಕಾಗಿ ಶಾಲೆ, ಬಟ್ಟೆಗಳು ಮತ್ತು ಮ‌ೂಲ ವೈದ್ಯಕೀಯ ಸೌಲಭ್ಯಗಳಲ್ಲಿ ಪೋಷಕರು ಮೊಟಕು ಮಾಡುತ್ತಿದ್ದಾರೆ. ವಿಶ್ವಾದ್ಯಂತ ಒಂದು ಶತಕೋಟಿ ಜನರು ಹಸಿವಿನಿಂದ ಬಳಲುತ್ತಿದ್ದು, ಕೃಷಿ ಕ್ಷೇತ್ರದಲ್ಲಿ ಸರ್ಕಾರಗಳು ಹೆಚ್ಚು ವೆಚ್ಚ ಮಾಡದಿದ್ದರೆ ಹಸಿವಿನಿಂದ ಬಳಲುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತದೆಂದು ವಿಶ್ವಸಂಸ್ಥೆ ಆಹಾರ ಏಜನ್ಸಿ ವರದಿ ಎಚ್ಚರಿಸಿದೆ.

ಆಫ್ರಿಕಾದ 20 ರಾಷ್ಟ್ರಗಳು ಸೇರಿದಂತೆ ಸುಮಾರು 30 ರಾಷ್ಟ್ರಗಳಿಗೆ ತುರ್ತು ಸೇವೆಯ ಅಗತ್ಯವಿದೆಯೆಂದು ವರದಿ ತಿಳಿಸಿದೆ.2015ರೊಳಕ್ಕೆ ಹಸಿವಿನಿಂದ ಬಳಲುವ ಜನಸಂಖ್ಯೆಯನ್ನು ಅರ್ಧದಷ್ಟು ಕಡಿತ ಮಾಡಬೇಕೆಂದು ವಿಶ್ವನಾಯಕರು ಹಾಕಿದ ಗುರಿಯ ಮಧ್ಯೆಯ‌ೂ ಇದೇ ಪ್ರವೃತ್ತಿ ಮುಂದುವರಿದಿದೆ.

ವಾಸ್ತವವಾಗಿ ಅಭಿವೃದ್ಧಿಶೀಲ ಮತ್ತು ಅಭಿವೃದ್ಧಿಹೊಂದಿದ ರಾಷ್ಟ್ರಗಳು ಕ್ರಮ ಕೈಗೊಳ್ಳಬೇಕೆಂಬ ತುರ್ತುಕರೆಯೆಂದು ಆಕ್ಷನ್ ಏಡ್ ಇಂಟರ್‌ನ್ಯಾಷನಲ್ ಮುಖ್ಯಸ್ಥ ಆಟಿವ್ ಇಗ್ಬುಝರ್ ತಿಳಿಸಿದ್ದಾರೆ.

ಪ್ರತಿ ಆರು ಸೆಕೆಂಡುಗಳಿಗೆ ಅಪೌಷ್ಠಿಕತೆಯಿಂದ ಮಗುವೊಂದು ಸಾಯುತ್ತಿರುವ ಬಗ್ಗೆ ಗಮನಸೆಳೆದ ಅವರು, ಗಗನಕ್ಕೇರುತ್ತಿರುವ ಆಹಾರಪದಾರ್ಥಗಳ ಬೆಲೆಗಳು ಸಂಕಷ್ಟಗಳನ್ನು ಮತ್ತಷ್ಟು ಹೆಚ್ಚಿಸಿದೆ. ವಿಶೇಷವಾಗಿ ವಿಶ್ವದ ಅತ್ಯಂತ ಹತಾಶ ರಾಷ್ಟ್ರಗಳಲ್ಲಿ ಬಡವರು ದಿನಕ್ಕೆ ಒಂದು ಹೊತ್ತಿನ ಕೂಳು ತಿನ್ನುವುದು ಕಷ್ಟವಾಗಿದೆಯೆಂದು ಅವರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ