ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪೇಶಾವರಲ್ಲಿ ಬಾಂಬ್ ದಾಳಿಗೆ ಮಗು ಬಲಿ (Peshawar | Lahore | Kohat | Bomb)
Feedback Print Bookmark and Share
 
ಲಾಹೋರ್ ಮತ್ತು ಕೋಹಟ್‌ನಲ್ಲಿ 41 ಜನರ ಸಾವಿನೊಂದಿಗೆ ತಾಲಿಬಾನಿಗಳು ರಕ್ತದ ಕೋಡಿ ಹರಿಸಿದ ಬಳಿಕ ಭಯೋತ್ಪಾದಕರು ವಾಯವ್ಯ ಪಾಕಿಸ್ತಾನ ನಗರ ಪೇಶಾವರದ ವಸತಿ ಪ್ರದೇಶದಲ್ಲಿ ಬಾಂಬ್ ಸ್ಫೋಟಿಸಿದ್ದು, ಈ ಘಟನೆಯಲ್ಲಿ ಮಗುವೊಂದು ಸತ್ತಿದ್ದು 9 ಜನರು ಗಾಯಗೊಂಡಿದ್ದಾರೆ.

ಪೇಶಾವರದ ಕೊಹಾಟ್ ರಸ್ತೆಯ ಗುಲ್ಶಾನ್ ಎ ರೆಹ್ಮಾನ್ ಕಾಲೋನಿಯಲ್ಲಿ ಈ ಸ್ಫೋಟ ಸಂಭವಿಸಿದ್ದು, ವಾಯವ್ಯ ಪ್ರಾಂತ್ಯ ಸರ್ಕಾರದ ಬಹುಸಂಖ್ಯಾತ ನೌಕರರು ಈ ಕಾಲೋನಿಯಲ್ಲಿ ವಾಸವಿದ್ದಾರೆ.

ಸ್ಪೋಟದಿಂದ ಕುಸಿದುಬಿದ್ದ ಕಟ್ಟಡದ ಗೋಡೆಗಳ ಚಿತ್ರವನ್ನು ಟಿವಿ ಚಾನೆಲ್‌ಗಳು ಬಿತ್ತರಿಸುತ್ತಿದ್ದು,ಅನೇಕ ಕಿ.ಮೀ.ದೂರದವರೆಗೆ ಸ್ಫೋಟದ ಸದ್ದು ಕೇಳಿಬಂದಿದೆ. ದಾಳಿಗೆ ಯಾವುದೇ ಗುಂಪು ಹೊಣೆ ಹೊತ್ತಿಲ್ಲ. ಸ್ಫೋಟದ ನಿಖರ ಸ್ವರೂಪವು ತಕ್ಷಣವೇ ದೃಢಪಟ್ಟಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ