ಬಂದೂಕುಗಳು ಮತ್ತು ಸ್ಫೋಟಕಗಳನ್ನು ಬಳಸಿಕೊಂಡು ಹಿಂಸಾತ್ಮಕ ಜಿಹಾದಿ ದಾಳಿಗೆ ಸಂಚು ರೂಪಿಸಿದ ಐವರು ಮುಸ್ಲಿಮರನ್ನು ವಿಚಾರಣೆ ಬಳಿಕ ಇಲ್ಲಿನ ಕೋರ್ಟ್ ತಪ್ಪಿತಸ್ಥರನ್ನಾಗಿ ಮಾಡಿದೆ. ಸುಮಾರು 10 ತಿಂಗಳ ವಿಚಾರಣೆ ಬಳಿಕ ಸಂಭವನೀಯ ಜೀವಾವಧಿ ಶಿಕ್ಷೆ ಎದುರಿಸುತ್ತಿರುವ ಐವರು ತೀರ್ಪಿಗೆ ಯಾವುದೇ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸಿಲ್ಲ.
ಆದರೆ ಬಿಗಿಭದ್ರತೆಯ ಕೋರ್ಟ್ ಹೊರಗೆ ಕೋಪೋದ್ರಿಕ್ತ ದೃಶ್ಯಗಳು ಕಂಡುಬಂದು, ಆರೋಪಿಗಳ ಬೆಂಬಲಿಗರು ಮಾಧ್ಯಮದವರ ಜತೆ ಕೈಕೈ ಮಿಲಾಯಿಸಿದರು.ಇರಾಕ್ ಮತ್ತು ಆಫ್ಘಾನಿಸ್ತಾನಕ್ಕೆ ಆಸ್ಟ್ರೇಲಿಯ ಪಡೆಗಳನ್ನು ಕಳಿಸಿದ್ದರಿಂದ ಅದನ್ನು ಶಿಕ್ಷಿಸುವ ಸಲುವಾಗಿ ಜಿಹಾದಿ ದಾಳಿಗೆ ಸಂಚು ರೂಪಿಸಿದರೆಂದು ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದರು.
ಜು.2004 ಮತ್ತು ನ.2005ರ ಅವಧಿ ನಡುವೆ ಇನ್ನೂ ನಾಲ್ಕು ಮಂದಿಗೆ ವಿಧ್ವಂಸಕಾರಿ ಚಟುವಟಿಕೆಗೆ ಸಂಚು ರೂಪಿಸಿದ ಆರೋಪದ ಮೇಲೆ ಶಿಕ್ಷೆ ವಿಧಿಸಲಾಗಿತ್ತು. ಇರಾಕ್ ಮತ್ತು ಆಫ್ಘಾನಿಸ್ತಾನದ ಸಂಘರ್ಷಗಳಲ್ಲಿ ಆಸ್ಟ್ರೇಲಿಯ ಪಾತ್ರವು ಮುಸ್ಲಿಂ ಸಮುದಾಯದ ವಿರುದ್ಧ ಆಕ್ರಮಣಕಾರಿ ಕೃತ್ಯಗಳು ಎಂಬ ಪರಿಕಲ್ಪನೆಯಿಂದ ಐದು ಮಂದಿ ಪ್ರೇರಿತರಾಗಿದ್ದರೆಂದು ಪ್ರಾಸಿಕ್ಯೂಟರ್ ರಿಚರ್ಡ್ ಮೇಡ್‌ಮೆಂಟ್ ನ್ಯೂ ಸೌತ್‌ವೇಲ್ಸ್ ಸುಪ್ರೀಂಕೋರ್ಟ್‌ಗೆ ಈ ಮುಂಚೆ ತಿಳಿಸಿದ್ದರು.