ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹರ್ಬಿನ್‌ಗೆ ಗುರಿ: ಚೀನಾಕ್ಕೆ ಅಗ್ನಿ-5 ಕ್ಷಿಪಣಿಯ ಭಯ (Agni-5 | China | Harbin | India)
Feedback Print Bookmark and Share
 
ಭಾರತದ ಇತ್ತೀಚಿನ ದೂರಗಾಮಿ ಅಣ್ವಸ್ತ್ರ ಸಿಡಿತಲೆ ಒಯ್ಯುವ ಸಾಮರ್ಥ್ಯದ ಕ್ಷಿಪಣಿಯಿಂದ ಚೀನಾದ ಉತ್ತರದ ಹರ್ಬಿನ್ ನಗರದ ಮೇಲೆ ದಾಳಿ ಮಾಡಬಹುದಾಗಿದೆಯೆಂದು ಚೀನಾದ ಪ್ರಮುಖ ದೈನಿಕವೊಂದು ಆರೋಪಿಸಿದೆ.

ಭಾರತದ ಸುಧಾರಿತ ಸಿಸ್ಟಮ್ಸ್ ಪ್ರಯೋಗಾಲಯವು ತನ್ನ ಮುಂದಿನ ಅಗ್ನಿ-5 ಕ್ಷಿಪಣಿಯನ್ನು ರಸ್ತೆಯಲ್ಲಿ ಸುಲಭವಾಗಿ ಸಾಗಣೆ ಮಾಡುವಂತೆ ನಿರ್ಮಿಸಿದ್ದು, ಅದನ್ನು ಈಶಾನ್ಯ ರಾಜ್ಯಕ್ಕೆ ಒಯ್ದರೆ,ಚೀನಾದ ಉತ್ತರತುದಿಗಿರುವ ಹರ್ಬಿನ್ ನಗರದ ಮೇಲೆ ಗುರಿಯಿಡುವ ವ್ಯಾಪ್ತಿಯಲ್ಲಿರುತ್ತದೆಂದು ಪೀಪಲ್ಸ್ ಡೇಲಿ ತಿಳಿಸಿದೆ.

ಹರ್ಬಿನ್ ನಗರವು ಚೀನಾದ ಹೈಲೋಂಗ್‌ಜಿಯಾಂಗ್ ಪ್ರಾಂತ್ಯದ ರಾಜಧಾನಿಯಾಗಿದ್ದು, 5000 ಕಿಮೀ ದೂರವ್ಯಾಪ್ತಿಯ ಅಗ್ನಿ-5 ಕ್ಷಿಪಣಿಯು ಚೀನಾದ ರಾಷ್ಟ್ರೀಯ ದಿನದ ಮಿಲಿಟರಿ ಪರೇಡ್‌ನಲ್ಲಿ ಪ್ರದರ್ಶಿಸಿದ ಡಾಂಗ್‌ಫೆಂಗ್-31ಎ ರೀತಿಯಲ್ಲಿದೆಯೆಂದು ಕಮ್ಯುನಿಸ್ಟ್ ಪಕ್ಷದ ಮುಖವಾಣಿಯಾದ ದೈನಿಕ ತಿಳಿಸಿದೆ. ಭಾರತ 2011ರಲ್ಲಿ ಈ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ನಡೆಸಲಿದೆಯೆಂದು ವರದಿ ತಿಳಿಸಿದೆ.

ಅರುಣಾಚಲ ಪ್ರದೇಶದ ಮೇಲೆ ಹಕ್ಕುಪ್ರತಿಪಾದಿಸಿದ್ದ ಚೀನಾ, ಪ್ರಧಾನಿ ಮನಮೋಹನ್ ಸಿಂಗ್ ಅರುಣಾಚಲಕ್ಕೆ ಅ.3ರಂದು ನೀಡಿದ್ದ ಭೇಟಿಯನ್ನು ಪ್ರಶ್ನಿಸಿತ್ತು. ಚೀನಾದ ಆಕ್ಷೇಪಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಭಾರತ, ಅರುಣಾಚಲ ರಾಷ್ಟ್ರದ ಅವಿಭಾಜ್ಯ ಅಂಗವಾಗಿದ್ದು, ಗಡಿ ವಿವಾದದ ಬಗ್ಗೆ ಮಾತುಕತೆ ಪ್ರಕ್ರಿಯೆಗೆ ನೆರವಾಗುವುದಿಲ್ಲವೆಂದು ಹೇಳಿತ್ತು.ಅರುಣಾಚಲ ವಿಷಯವನ್ನು ಕೆದಕಿದ ಅನೇಕ ಚೀನಾ ಪತ್ರಿಕೆಗಳು ಗಡಿ ವಿವಾದ ಕುರಿತು ಭಾರತದ ವಿರುದ್ಧ ಲೇಖನಗಳ ಮ‌ೂಲಕ ಕಿಡಿಕಾರಿದ್ದವು.
ಸಂಬಂಧಿತ ಮಾಹಿತಿ ಹುಡುಕಿ