ಚಾಬಾಡ್ ಕೇಂದ್ರಗಳ ಮೇಲೆ ಮತ್ತು ಯಹೂದ್ಯರ ಪೂಜಾಮಂದಿರಗಳ ಮೇಲೆ ಭಯೋತ್ಪಾದನೆ ದಾಳಿಗಳು ನಡೆಯುವ ದೃಢ ಬೆದರಿಕೆಯಿರುವುದರಿಂದ ಭಾರತಕ್ಕೆ ಪ್ರಯಾಣಿಸುವುದರ ವಿರುದ್ಧ ಇಸ್ರೇಲ್ ತನ್ನ ಪೌರರಿಗೆ ಎಚ್ಚರಿಸಿದೆ. ಕಳೆದ ತಿಂಗಳು ಪ್ರವಾಸಿ ಸಲಹೆ ಜಾರಿ ಮಾಡಿದಾಗಿನಿಂದ ಇಸ್ರೇಲಿ ಪೌರರ ಮೇಲೆ ಸಂಭವನೀಯ ದಾಳಿಗಳು ಗಮನಾರ್ಹವಾಗಿ ಹೆಚ್ಚಿದೆಯೆಂದು ಭಯೋತ್ಪಾದನೆ ನಿಗ್ರಹ ದಳ ತಿಳಿಸಿದೆ.
ಗೋವಾ ಸೇರಿದಂತೆ ದೇಶಾದ್ಯಂತ ಚಾಬಾಡ್ ಕೇಂದ್ರಗಳು ಮತ್ತು ಪೂಜಾಮಂದಿರಗಳ ಮೇಲೆ ಹಾಗೂ ಇಸ್ರೇಲಿ ಮತ್ತು ಪಾಶ್ಚಿಮಾತ್ಯರು ಭೇಟಿ ಕೊಡುವ ಸ್ಥಳಗಳಲ್ಲಿ ದಾಳಿಗಳ ಬೆದರಿಕೆಯಿದೆಯೆಂದು ಅದು ತಿಳಿಸಿದೆ.
2008ರ ಮುಂಬೈ ಹತ್ಯಾಕಾಂಡಕ್ಕೆ ಕಾರಣವಾದ ಪಾಕಿಸ್ತಾನ ಭಯೋತ್ಪಾದನೆ ವಿಭಾಗದ ಜತೆ ಜಾಗತಿಕ ಜಿಹಾದ್ ಗುಂಪು ಕೈಗೂಡಿಸಿದ್ದು, ದಾಳಿಯನ್ನು ಯೋಜಿಸುತ್ತಿದೆಯೆಂದು ಇಸ್ರೇಲಿ ಅಧಿಕಾರಿಗಳಿಗೆ ಸಿಕ್ಕಿದ ಗುಪ್ತಚರ ವರದಿಗಳ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ.