ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಚಂದ್ರಯಾತ್ರೆ ಬಳಿಕ ಮಾನವನ ಬಾಹ್ಯಾಕಾಶ ಯಾತ್ರೆ (Moon | Chandrayaan | India | United Nations)
Feedback Print Bookmark and Share
 
ಪ್ರಥಮ ಚಂದ್ರಯಾನ ಯೋಜನೆಯ ಯಶಸ್ಸಿನ ಬಳಿಕ, ಮಾನವನನ್ನು ಬಾಹ್ಯಾಕಾಶಕ್ಕೆ ಕಳಿಸುವ ಕಾರ್ಯಕ್ರಮ ಸೇರಿದಂತೆ ಗ್ರಹಗಳ ಶೋಧನೆ ಬಳಸಿಕೊಂಡು ಬಾಹ್ಯ ಜಗತ್ತಿನ ಅನ್ವೇಷಣೆಗೆ ಭಾರತ ಎದುರುನೋಡುತ್ತಿದೆ.

ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಸ್ವಾವಲಂಬನೆ ಸಾಧಿಸಿದ ಭಾರತ ಆಂತರಿಕ ಸೌರಮಂಡಲ ಅನ್ವೇಷಣೆಗೆ ಮತ್ತು ಬಾಹ್ಯ ಸೌರಮಂಡಲ ಅನ್ವೇಷಣೆಗೆ ಸಾಮರ್ಥ್ಯಗಳನ್ನು ನಿರ್ಮಿಸುವುದಕ್ಕಾಗಿ ಮುಖ್ಯವಾಗಿ ಬಾಹ್ಯಾಕಾಶ ಅನ್ವೇಷಣೆ ಹಂತವನ್ನು ಪ್ರವೇಶಿಸಿದೆ ಎಂದು ಭಾರತೀಯ ಸಂಸತ್ ಸದಸ್ಯರೊಬ್ಬರು ತಿಳಿಸಿದ್ದಾರೆ.

ಗ್ರಹಗಳಿಗೆ ಯಾತ್ರೆಯನ್ನು ಬಳಸಿಕೊಂಡು ಬಾಹ್ಯಾಕಾಶದ ಅನ್ವೇಷಣೆಯನ್ನು ಚಂದ್ರಯಾನ-2 ಮತ್ತಿತರ ಯಾತ್ರೆಗಳ ಮ‌ೂಲಕ ಸಾಧಿಸುವುದಾಗಿ ಅಲಿ ಅನ್ವರ್ ಅನ್ಸಾರಿ ತಿಳಿಸಿದ್ದಾರೆ. ಬಾಹ್ಯ ಜಗತ್ತಿನ ಶಾಂತಿಯುತ ಬಳಕೆಗಾಗಿ ಅಂತಾರಾಷ್ಟ್ರೀಯ ಸಹಕಾರ ಕುರಿತ ಸಮಿತಿಯ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಮಾನವನನ್ನು ಬಾಹ್ಯಾಕಾಶ ಯಾತ್ರೆಗೆ ಕಳಿಸುವ ಅಗತ್ಯದ ಬಗ್ಗೆ ವಿವಿಧ ಮಟ್ಟಗಳಲ್ಲಿ ಭಾರತ ಚರ್ಚಿಸುತ್ತಿದೆಯೆಂದು ಹೇಳಿದ ಅವರು,ಕಳೆದ ಒಂದು ವರ್ಷದಲ್ಲಿ ಚಂದ್ರಯಾನ ಯೋಜನೆಯ ಮ‌ೂಲಕ ಬಾಹ್ಯಾಕಾಶ ಅನ್ವೇಷಣೆಯಲ್ಲಿ ಭಾರತ ಮಹತ್ವದ ದಾಪುಗಾಲು ಹಾಕಿದೆಯೆಂದು ಹೇಳಿದರು.

ಭಾರತದ 11 ವೈಜ್ಞಾನಿಕ ಉಪಕರಣಗಳು ಮತ್ತು ಇತರೆ ಐದು ರಾಷ್ಟ್ರಗಳ ಉಪಕರಣಗಳನ್ನು ಬಳಸಿಕೊಂಡ ಭಾರತದ ಪ್ರಧಮ ಚಂದ್ರಯಾನ-1 ಯಾತ್ರೆಯು ಅಲ್ಪಕಾಲಾವಧಿಯಲ್ಲೇ ಜಾಗತಿಕ ವಿಜ್ಞಾನ ಸಮುದಾಯದ ತೃಪ್ತಿ ಮುಂತಾದ ಯಾತ್ರೆಯ ಉದ್ದೇಶವನ್ನು ಸಾಧಿಸಿದೆಯೆಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ