ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆಫ್ಘನ್ ಅಫೀಮಿನ ನಾಶ ಅವಶ್ಯಕವೆಂದ ವಿಶ್ವಸಂಸ್ಥೆ (NATO | Taliban | Opium | Drugs)
Feedback Print Bookmark and Share
 
ನ್ಯಾಟೊ ರಾಷ್ಟ್ರಗಳಲ್ಲಿ ಅಫೀಮಿನ ಸೇವನೆಯಿಂದ ಪ್ರತಿ ವರ್ಷ ಸಾವನ್ನಪ್ಪುತ್ತಿರುವವರ ಸಂಖ್ಯೆಯು ಆಫ್ಘನ್ ತಾಲಿಬಾನ್ ವಿರುದ್ಧ 8 ವರ್ಷಗಳ ಹೋರಾಟದಲ್ಲಿ ಸತ್ತವರ ಪ್ರಮಾಣಕ್ಕಿಂತ ಐದು ಪಟ್ಟು ಹೆಚ್ಚಿಗೆಯಿದೆಯೆಂದು ಮಾದಕವಸ್ತು ಮತ್ತು ಅಪರಾಧ ಕುರಿತ ವಿಶ್ವಸಂಸ್ಥೆ ಕಚೇರಿ ಬುಧವಾರ ತಿಳಿಸಿದೆ. ನ್ಯಾಟೊ ರಾಷ್ಟ್ರಗಳಲ್ಲಿ ಪ್ರತಿ ವರ್ಷ ಸುಮಾರು 10,000 ಜನರು ಅಫೀಮು ದುರ್ಬಳಕೆಯಿಂದ ಮೃತಪಡುತ್ತಿದ್ದಾರೆಂದು ಅದು ತಿಳಿಸಿದೆ.

ಸುಮಾರು 15 ದಶಲಕ್ಷ ಜನರು ಪ್ರತಿವರ್ಷ ಮಾದಕಪದಾರ್ಥ ಚಟಕ್ಕೆ ಬಲಿಯಾಗುತ್ತಿದ್ದು, ಎಚ್‌ಐವಿ ಮತ್ತು ಏಡ್ಸ್ ಹರಡಲು ಇದು ಕೊಡುಗೆ ನೀಡಿದೆಯೆಂದು ವಿಶ್ವಸಂಸ್ಥೆ ಕಚೇರಿ ತಿಳಿಸಿದೆ. ವಿಶ್ವದ ಅಫೀಮು ಮಾರುಕಟ್ಟೆಯಲ್ಲಿ ಶೇ.92ರಷ್ಟು ಆಫ್ಘಾನಿಸ್ತಾನ ಉತ್ಪಾದಿಸುತ್ತಿದ್ದು, ಇದು 65 ಶತಕೋಟಿ ಡಾಲರ್ ಮೌಲ್ಯದ್ದಾಗಿದೆ. ಅಫೀಮು ಎಲ್ಲಿ ಬೆಳೆಯುತ್ತಿದೆಯೋ ಆ ಜಾಗದಲ್ಲಿ ಅಫೀಮನ್ನು ವಶಪಡಿಸಿಕೊಳ್ಳುವುದು ದಕ್ಷತೆಯ ಕೆಲಸವೇ ಹೊರತು ಅಫೀಮು ಮಾರಾಟಗಾರರ ಬಂಧನದಿಂದಿಲ್ಲವೆಂದು ವಿಶ್ವಸಂಸ್ಥೆ ಮುಖ್ಯಸ್ಥ ಆಂಟೊನಿಯ ಮಾರಿಯ ಕೋಸ್ಟಾ ತಿಳಿಸಿದ್ದಾರೆ.

ಅಫೀಮಿನ ಉತ್ಪಾದನೆಯು ಕಳೆದ 10 ವರ್ಷಗಳಲ್ಲಿ 6900 ಟನ್ ಸ್ಫೋಟಿಸಿದೆ. ಕೆಡುಕರ ಕೈಗಳಿಗೆ ಅಫೀಮು ಸಿಕ್ಕಿರುವುದರಿಂದ ಈ ದಾಸ್ತಾನನ್ನು ನಾಶಮಾಡುವ ತುರ್ತು ಅಗತ್ಯಕಂಡುಬಂದಿದೆಯೆಂದು ಕೋಸ್ಟಾ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ