ಇಸ್ಲಾಮಾಬಾದ್ : , ಮಂಗಳವಾರ, 8 ಡಿಸೆಂಬರ್ 2009( 19:03 IST )
ಪಾಕಿಸ್ತಾನದ ಗುಪ್ತಚರ ಸಂಸ್ಥೆಯನ್ನು ಗುರಿಯಾಗಿಸಿಕೊಂಡು ಐಎಸ್‌ಐ ಮೇಲೆ ತಿಂಗಳ ಅವಧಿಯೊಳಗೆ ಎರಡನೇ ಬಾರಿಗೆ ಉಗ್ರರು ದಾಳಿ ನಡೆಸಿದ್ದಾರೆ.
ಪೂರ್ವ ಮುಲ್ತಾನ್ ನಗರದಲ್ಲಿರುವ ಐಎಸ್‌ಐ ಕಚೇರಿಗೆ, ಆತ್ಮಾಹುತಿ ಬಾಂಬರ್ 1 ಸಾವಿರ ಕೆಜಿ ಸ್ಫೋಟಕಗಳನ್ನು ಹೊತ್ತ ವಾಹನವನ್ನು ನುಗ್ಗಿಸಿದಾಗ ಕನಿಷ್ಟ 12 ಮಂದಿ ಸಾವನ್ನಪ್ಪಿದ್ದು,47 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಉಗ್ರರು ಮೊದಲು ಪ್ರಧಾನ ಮಂತ್ರಿ ಯುಸೂಫ್ ರಾಜಾ ಗಿಲಾನಿ ಮತ್ತು ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ ಅವರ ಸ್ವಕ್ಷೇತ್ರವಾದ ಮುಲ್ತಾನ್‌ನ ಖಾಸೀಂ ಬೇಲಾ ಬಡಾವಣೆಯನ್ನು ಪ್ರವೇಶಿಸಿ, ಚೆಕ್‌ಪೋಸ್ಟ್‌ನಲ್ಲಿದ್ದ ಭಧ್ರತಾ ಪಡೆಗಳ ವಿರುದ್ಧ ಚಿಕ್ಕ ಶಸ್ತ್ರಾಸ್ತ್ರಗಳು ಹಾಗೂ ರಾಕೆಟ್‌ಗಳೊಂದಿಗೆ ದಾಳಿ ನಡೆಸಿದರು. ನಂತರ ಭಾರಿ ಭಧ್ರತೆಯಲ್ಲಿರುವ ಐಎಸ್‌ಆ ಕಚೇರಿಗೆ ವಾಹನವನ್ನು ನುಗ್ಗಿಸಿ ಗ್ರೆನೆಡ್ ದಾಳಿ ನಡೆಸಿದ ನಂತರ ವಾಹನವನ್ನು ಸ್ಫೋಟಿಸಿದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಉಗ್ರರ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 47 ಮಂದಿ ಗಾಯಗೊಂಡಿದ್ದಾರೆ.ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.