ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪ್ಯಾರಿಸ್:ಹೊಸ ವರ್ಷದ ಸಂಭ್ರಮ-1137ಕಾರು ಭಸ್ಮ! (Police | New Year | Paris | France | London)
Bookmark and Share Feedback Print
 
ಫ್ರಾನ್ಸ್‌ನಾದ್ಯಂತ ರಾತ್ರಿ ಇಡೀ ನಡೆದ ಹೊಸ ವರ್ಷದ ಮೋಜು ಕೂಟದಲ್ಲಿ ಯುವಕರ ದಂಡು ಸುಮಾರು 1,137ಕಾರುಗಳಿಗೆ ಬೆಂಕಿ ಹಚ್ಚಿ ವಿಕೃತ ಸಂತೋಷ ಅನುಭವಿಸಿದೆ ಎಂದು ಫ್ರಾನ್ಸ್ ಆಂತರಿಕ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಫ್ರಾನ್ಸ್‌ನ ಬೃಹತ್ ನಗರಗಳ ಬಡಾವಣೆಗಳಲ್ಲಿ ಹೊಸ ವರ್ಷದ ಮೋಜು ಮಸ್ತಿಯಲ್ಲಿ ತೊಡಗಿದ್ದವರು ಸಿಕ್ಕ, ಸಿಕ್ಕ ಕಾರುಗಳಿಗೆ ಬೆಂಕಿ ಹಚ್ಚಿದ್ದರು. ಕಳೆದ ವರ್ಷ 1,147ಕಾರುಗಳಿಗೆ ಬೆಂಕಿ ಹಚ್ಚಲಾಗಿದ್ದರೆ, ಈ ಬಾರಿ 1,137ಕಾರುಗಳು ಕಿಡಿಗೇಡಿಗಳ ಹುಚ್ಚಾಟಕ್ಕೆ ಭಸ್ಮವಾಗಿವೆ.

ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಇಂತಹ ಘಟನೆಗಳು ನಡೆಯುತ್ತವೆ ಎಂಬ ನಿಟ್ಟಿನಲ್ಲಿ 45ಸಾವಿರ ಪೊಲೀಸರನ್ನು ಗಸ್ತು ತಿರುಗಲು ನಿಯೋಜಿಸಲಾಗಿತ್ತು. ಆದರೂ ಈ ಘಟನೆ ನಡೆದಿದೆ.

ಘಟನೆ ನಡೆಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಸುಮಾರು 549ಜನರನ್ನು ಬಂಧಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಯುವಕರ ಗುಂಪಿನ ನಡುವೆ ಯಾವುದೇ ಘರ್ಷಣೆ ನಡೆದಿರಲಿಲ್ಲವಾಗಿತ್ತು. ಸಣ್ಣ ಪುಟ್ಟ ಗದ್ದಲ ನಡೆದಿದ್ದು ಅವುಗಳನ್ನು ಪೊಲೀಸರು ನಿಯಂತ್ರಣಕ್ಕೆ ತಂದಿರುವುದಾಗಿ ಸಚಿವಾಲಯ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ