ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್ ಆಟದ ಮೈದಾನ ಸ್ಫೋಟ ಬಲಿ ಸಂಖ್ಯೆ 95ಕ್ಕೇರಿಕೆ (Pakistan | Shah Hasankhel village | Bomb blast | Islamabad)
Bookmark and Share Feedback Print
 
ವಾಯುವ್ಯ ಪಾಕಿಸ್ತಾನ ಪ್ರಾಂತ್ಯದ ಆಟದ ಮೈದಾನವೊಂದರಲ್ಲಿ ನಡೆದ ಆತ್ಮಹತ್ಯಾ ಕಾರ್ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 95ಕ್ಕೇರಿದ್ದು, ಆಹುತಿಯಾಗಿರುವ 20ಕ್ಕೂ ಹೆಚ್ಚು ಮನೆಗಳ ಅವಶೇಷಗಳಡಿಯಿಂದ ಜನರನ್ನು ರಕ್ಷಿಸುವ ಕಾರ್ಯ ಮುಂದುವರಿದಿದೆ.

ವಾಯುವ್ಯ ಪ್ರಾಂತ್ಯದ ಶಾಹ್ ಹಸಂಖೇಲ್ ಗ್ರಾಮದಲ್ಲಿ ನಡೆದ ಈ ದಾಳಿಗೆ 20ಕ್ಕೂ ಹೆಚ್ಚು ಮನೆಗಳು ಧರಾಶಾಯಿಯಾಗಿವೆ. ಅವಶೇಷಗಳಡಿಯಿಂದ ಶವಗಳನ್ನು ಹೊರತೆಗೆಯಲಾಗುತ್ತಿದ್ದು, ಇದುವರೆಗೆ ಸಾವನ್ನಪ್ಪಿದವರ ಸಂಖ್ಯೆ 95ಕ್ಕೆ ತಲುಪಿದೆ ಎಂದು ಪೊಲೀಸರು ಮತ್ತು ತುರ್ತು ರಕ್ಷಣಾ ಪಡೆಗಳು ತಿಳಿಸಿವೆ.

ಸುಮಾರು 100 ಮಂದಿ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಅವರಲ್ಲಿ ಕೆಲವು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಶುಕ್ರವಾರ ಸಂಜೆ 5.30ರ ಹೊತ್ತಿಗೆ ಸುಮಾರು 300 ಕೇಜಿ ಸ್ಫೋಟಕಗಳನ್ನು ತುಂಬಿದ್ದ ಎಸ್‌ಯುವಿ ವಾಹನವನ್ನು ಆಟದ ಮೈದಾನದ ಮಧ್ಯಭಾಗಕ್ಕೆ ತಂದಿದ್ದ ದಾಳಿಕೋರ ತನ್ನನ್ನು ತಾನು ಸ್ಫೋಟಿಸಿಕೊಂಡು ಕುಕೃತ್ಯ ನಡೆಸಿದ್ದ.

ಈ ಸಂದರ್ಭದಲ್ಲಿ ಇಲ್ಲಿನ ಎರಡು ಸ್ಥಳೀಯ ತಂಡಗಳ ನಡುವೆ ವಾಲಿಬಾಲ್ ಪಂದ್ಯವೊಂದು ನಡೆಯುತ್ತಿದ್ದ ಕಾರಣ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು ಎಂದು ಮೂಲಗಳು ಹೇಳಿವೆ.

ಭಾರೀ ಸ್ಫೋಟಕಗಳು ಕಾರಿನಲ್ಲಿದ್ದ ಕಾರಣ ಆಟದ ಮೈದಾನ ಚಿಂದಿಯಾಗಿದ್ದಲ್ಲದೆ, ಪಕ್ಕದ ಸುಮಾರು 20ಕ್ಕೂ ಹೆಚ್ಚು ಮನೆಗಳು ಧ್ವಂಸಗೊಂಡಿದ್ದವು. ಅಲ್ಲದೆ ಇಟ್ಟಿಗೆಗಳ ಹೊಡೆತಕ್ಕೆ ಸಿಕ್ಕ ಹಲವು ಅಂಗಡಿ-ಮಳಿಗೆಗಳು ಭಾಗಶಃ ಹಾನಿಗೀಡಾಗಿವೆ.

ಮೈದಾನದಲ್ಲಿದ್ದ ಕೆಲವು ಆಟಗಾರರ ಶವಗಳು ಚೂರು ಚೂರಾದ ಕಾರಣ ಅವರ ಶವಗಳನ್ನು ಪತ್ತೆ ಹಚ್ಚುವುದು ಸಾಧ್ಯವಾಗಿಲ್ಲ. ಮೈದಾನದಲ್ಲೆಲ್ಲ ರಕ್ತ ಮತ್ತು ದೇಹದ ಭಾಗಗಳೇ ತುಂಬಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ