ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬ್ಲಾಕ್‌ವಾಟರ್ ಅಧಿಕಾರಿಗಳಿಗೆ ಪಾಕಿಸ್ತಾನ ವೀಸಾ ನೀಡಿಲ್ಲ: ಮಲಿಕ್ (Blackwater | Rehman Malik | Pakistan | America)
Bookmark and Share Feedback Print
 
ಅಮೆರಿಕಾದ ವಿವಾದಿತ ಭದ್ರತಾ ಪಡೆ 'ಬ್ಲಾಕ್‌ವಾಟರ್' ಪಾಕಿಸ್ತಾನದಲ್ಲಿ ಅಸ್ತಿತ್ವದಲ್ಲಿದೆ ಎಂಬುದನ್ನು ತಳ್ಳಿ ಹಾಕಿರುವ ಪಾಕ್ ಆಂತರಿಕ ಸಚಿವ ರೆಹಮಾನ್ ಮಲಿಕ್, ಅಂತಹ ಪಡೆಯ ಯಾವುದೇ ಅಧಿಕಾರಿಗಳಿಗೆ ನಮ್ಮ ವೀಸಾಗಳನ್ನು ನೀಡಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ ಪಾಕಿಸ್ತಾನ ಆಂತರಿಕ ಗುಪ್ತಚರ ಇಲಾಖೆ ಐಎಸ್ಐ ಮತ್ತು ಬ್ಲಾಕ್‌ವಾಟರ್ ನಡುವೆ ಒಪ್ಪಂದ ನಡೆದಿದೆ ಎಂಬ ವರದಿಗಳನ್ನೂ ಅವರು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ.

ಪಾಕಿಸ್ತಾನ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯಲ್ಲಿನ ಉದ್ಯಮ ಮುಖಂಡರೆದುರು ಜತೆ ಮಾತನಾಡುತ್ತಿದ್ದ ಮಲಿಕ್, ಬ್ಲಾಕ್‌ವಾಟರ್‌ನಂತಹ ಯಾವುದೇ ಏಜೆನ್ಸಿ ದೇಶದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿದರು.

ಅಲ್ಲದೆ ಭಯೋತ್ಪಾದಕರು ವಿದೇಶಗಳಿಂದ ಬೆಂಬಲ ಪಡೆದುಕೊಳ್ಳುತ್ತಿದ್ದಾರೆ. ದೇಶದೊಳಗಿನ ಜನರ ನಡುವೆ ವಿವಾದ ಹುಟ್ಟಿಸಿ ರಾಷ್ಟ್ರ ವಿಭಜನೆ ಮಾಡುವುದು ಅವರ ಉದ್ದೇಶ ಎಂದು ತನ್ನ ಮಾತನ್ನು ಅವರು ಇದೇ ಸಂದರ್ಭದಲ್ಲಿ ಪುನರುಚ್ಛರಿಸಿದ್ದಾರೆ.

ಪಾಕಿಸ್ತಾನವನ್ನು ವಿಭಜಿಸಲು ಭಯೋತ್ಪಾದಕರು ವಸ್ತುಗಳಾಗುತ್ತಿದ್ದಾರೆ ಎಂದು ಮಲಿಕ್ ಹೇಳಿದ್ದಾರೆಂದು 'ದಿ ನ್ಯೂಸ್' ಪತ್ರಿಕೆ ವರದಿ ಮಾಡಿದೆ.

ತಮ್ಮ ಸಂಪಾದನೆಯಲ್ಲಿ ಶೇ.0.02ರಷ್ಟು ಭಾಗವನ್ನು ದೇಶದ ಪೊಲೀಸ್ ಪಡೆಯನ್ನು ಅಭಿವೃದ್ಧಿಪಡಿಸಲು ನೀಡಬೇಕೆಂದು ಉದ್ಯಮ ಸಮುದಾಯವನ್ನು ಮನವಿ ಮಾಡಿದ ಅವರು, ದೇಶದ ರಕ್ಷಣಾ ಪಡೆಗಳು ಕರಾಚಿ ಹಿಂಸಾಚಾರದಂತಹ ಗಂಭೀರ ಪರಿಸ್ಥಿತಿಗಳನ್ನು ನಿಯಂತ್ರಿಸಲು ಅಸಮರ್ಥವಾಗಿವೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ