ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬ್ರಿಟೀಷ್ ಯೋಧೆಯಿಂದ ಇರಾಕ್ ಖೈದಿಗಳಿಗೆ ಲೈಂಗಿಕ ಕಿರುಕುಳ (UK | Iraq | Female UK soldier | Humilate)
Bookmark and Share Feedback Print
 
ಇರಾಕ್‌ನ ಬಸ್ರಾ ನಗರದಲ್ಲಿರುವ ಬ್ರಿಟೀಷ್ ಸೇನಾ ಪಡೆಗಳು ಖೈದಿಗಳಿಗೆ ಹಿಂಸೆ ನೀಡುತ್ತಿವೆ ಎಂಬ ಆರೋಪಗಳು ಹೆಚ್ಚುತ್ತಿದ್ದು, ಆಂಗ್ಲ ಮಹಿಳಾ ಯೋಧೆಯೊಬ್ಬಳು ಲೈಂಗಿಕ ತೇಜೋವಧೆ ಮತ್ತು ನಿಂದನೆ ಎಸಗಿದ್ದಾಳೆ ಎಂದು 'ದಿ ಟೈಮ್ಸ್' ಪತ್ರಿಕೆ ವರದಿ ಮಾಡಿದೆ.

ಈ ಹಿಂದೆ ಸೆರೆಯಲ್ಲಿದ್ದ ಐವರು ಮಾಜಿ ಖೈದಿಗಳು ಈ ಆರೋಪಗಳನ್ನು ಮಾಡಿದ್ದಾರೆ. ಈ ಮಹಿಳಾ ವಿಚಾರಣಾಧಿಕಾರಿಯನ್ನು 'ಕ್ಯಾಟಿ' ಎಂದು ಬಲಿಪಶುಗಳು ಹೆಸರಿದ್ದಾರೆ.

ಕ್ಯಾಟಿ ಎಂಬಾಕೆ ಕಸ್ಟಡಿಯಲ್ಲಿದ್ದ ಸಂದರ್ಭದಲ್ಲಿ ಖೈದಿಗಳ ಮಾನ ಹರಾಜು ಹಾಕುವುದು, ಲೈಂಗಿಕ ಹಿಂಸೆ ನೀಡುವುದು ಮತ್ತು ಮೂದಲಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ಬ್ರಿಟೀಷ್ ಸೇನೆಯ ವಿಚಾರಣಾ ವಿಭಾಗದ ಮೇಲೆ ಪ್ರಸಕ್ತ ಈ ಪ್ರಕರಣವೂ ಸೇರಿದಂತೆ ಒಟ್ಟು 14 ನೂತನ ಪ್ರಕರಣಗಳು ಬೆಳಕಿಗೆ ಬಂದಿದ್ದು, ಅವುಗಳನ್ನು ಮುಚ್ಚಿಡಲು ಯತ್ನಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಇದರೊಂದಿಗೆ ಇರಾಕ್ ಖೈದಿಗಳಿಂದ ಬ್ರಿಟೀಷ್ ನ್ಯಾಯಾಲಯದಲ್ಲಿ ದಾಖಲಿಸಲ್ಪಟ್ಟಿರುವ ಒಟ್ಟು ಪ್ರಕರಣಗಳ ಸಂಖ್ಯೆ 40ಕ್ಕೇರಿದೆ.

2003ರಿಂದ 2007ರ ನಡುವೆ ಬಸ್ರಾದಲ್ಲಿನ ಸೈಬಾಹ್ ಲೋಜಿಸ್ಟಿಕ್ಸ್ ಬೇಸ್‌ನಲ್ಲಿರುವ ಡಿವಿಜನಲ್ ಟೆಂಪರರಿ ಡಿಟೆಂಕ್ಷನ್ ಫೆಸಿಲಿಟಿ ಕೇಂದ್ರದಲ್ಲಿ ನಿರಂತರವಾಗಿ ಲೈಂಗಿಕ ತೇಜೋವಧೆ ನಡೆಸಲಾಗುತ್ತಿದೆ ಎಂದು ಜೆಎಫ್ಐಟಿ ಎಂಬ ಸಂಘಟನೆ ಆರೋಪಿಸಿದೆ. ಇದರಲ್ಲಿ ಕನಿಷ್ಠ ಪುರುಷನೊಬ್ಬನ ಮೇಲೆ ಅತ್ಯಾಚಾರ ನಡೆಸಿದ ಆರೋಪವೂ ಸೇರಿದೆ.

ಈ ಸಂಬಂಧ 'ದಿ ಟೈಮ್ಸ್' ಪತ್ರಿಕೆಗೆ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವಾಲಯದ ವಕ್ತಾರರು, ಎಲ್ಲಾ ಆರೋಪಗಳನ್ನು ತನಿಖೆ ನಡೆಸಲಾಗಿದೆ ಮತ್ತು ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ