ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ದಲಾಯಿ, ಕಾದೀರ್‌ರಿಗೆ ಐಫೋನ್‌ಗಳಲ್ಲೂ ಚೀನಾ ನಿಷೇಧ..! (iPhone | China | Dalai Lama | Rebiya Kadeer)
Bookmark and Share Feedback Print
 
ಚೀನಾ ಕಾನೂನುಗಳಿಗೆ ತಲೆ ಬಾಗಿರುವ ಆಪಲ್, ಬೀಜಿಂಗ್ ಪರಿಗಣಿಸಿರುವ ಪ್ರತ್ಯೇಕತಾವಾದಿಗಳಾದ ದಲಾಯಿ ಲಾಮಾ ಮತ್ತು ಉಯಿಗುರ್ ನಾಯಕ ರೆಬಿಯಾ ಕಾದೀರ್ ಅವರ ಸಾಫ್ಟ್‌ವೇರುಗಳನ್ನು ತನ್ನ ಐಫೋನ್ ಬಳಕೆದಾರರು ಡೌನ್‌ಲೋಡ್ ಮಾಡದಂತೆ ತಡೆ ಹೇರಿದೆ.

ಟಿಬೆಟಿಯನ್ ನಾಯಕನಿಗೆ ಸಂಬಂಧಪಟ್ಟ ಕನಿಷ್ಠ ಐದು ಸಾಫ್ಟ್‌ವೇರುಗಳು ಐಫೋನ್‌ ಚೀನಾ ಅಪ್ಲಿಕೇಷನ್ ಸ್ಟೋರ್‌ನಲ್ಲಿ ಲಭ್ಯವಿಲ್ಲ. ಇದರಲ್ಲಿ ಒಂದು ಕಾದೀರ್ ಅವರಿಗೂ ಸೇರಿದೆ ಐಜಿಡಿ ಸುದ್ದಿ ಸಂಸ್ಥೆ ತಿಳಿಸಿದೆ.

ಮ್ಯಾಕ್‌ವರ್ಲ್ಡ್, ಕಂಪ್ಯೂಟರ್‌ವರ್ಲ್ಡ್, ಪಿಸಿ ವರ್ಲ್ಡ್ ಮತ್ತಿತರ ನಿಯತಕಾಲಿಕೆಗಳ ಪ್ರಕಾಶಕ ಸಂಸ್ಥೆ ಐಡಿಜಿ ಪ್ರಕಾರ, ಅಮೆರಿಕಾದ ತಾಂತ್ರಿತ ದಿಗ್ಗಜ ತನ್ನ ಆಪಲ್ ಸಾಫ್ಟ್‌ವೇರುಗಳನ್ನು ಚೀನಾದಲ್ಲಿ ಪಸರಿಸುವಾಗ ಹಲವು ಬದಲಾವಣೆಗಳನ್ನು ಮಾಡುತ್ತಿದೆ.

ನಾವು ಸ್ಥಳೀಯ ಕಾನೂನುಗಳಿಗೆ ಹೊಂದಿಕೊಂಡು ಮುಂದುವರಿಯುತ್ತೇವೆ. ನಮ್ಮ ಎಲ್ಲಾ ಸಾಫ್ಟ್‌ವೇರುಗಳು ಎಲ್ಲಾ ದೇಶಗಳಲ್ಲೂ ಲಭ್ಯವಿಲ್ಲ ಎಂದು ಆಪಲ್ ವಕ್ತಾರೆ ಟ್ರೂಡಿ ಮುಲ್ಲೆರ್ ತಿಳಿಸಿದ್ದಾರೆ.

ಚೀನಾವು ಸೂಕ್ಷ್ಮಸಂವೇದನೆಯ ವೆಬ್‌ಸೈಟುಗಳನ್ನು ಆಗಾಗ ಗಮನಿಸಿ ನಿಷೇಧಿಸುತ್ತಾ ಬಂದಿದೆ. ಇದರಲ್ಲಿ ಅಮೆರಿಕಾದ ಕಂಪನಿಗಳಾದ ಮೈಕ್ರೋಸಾಫ್ಟ್, ಸಿಸ್ಕೋ, ಗೂಗಲ್ ಮತ್ತು ಯಾಹೂಗಳಿಗೂ ಹೊಡೆತ ಬಿದ್ದ ಕಾರಣ ಆಗಾಗ ಅವುಗಳು ಚೀನಾ ನೀತಿ ವಿರುದ್ಧ ಕಿಡಿ ಕಾರುತ್ತಿವೆ.

ಐಡಿಜಿ ಬೀಜಿಂಗ್ ಆಪಲ್ ಸ್ಟೋರ್‌ನಲ್ಲಿ ನಡೆಸಿದ ಪರೀಕ್ಷೆಗಳ ಪ್ರಕಾರ ಐದು ಐಫೋನ್‌ಗಳಲ್ಲಿ ನಾಲ್ಕರಲ್ಲಿ ದಲಾಯ್ ಎಂಬ ಪದಕ್ಕೆ ಯಾವುದೇ ಫಲಿತಾಂಶಗಳು ಬಂದಿಲ್ಲ. ಆದರೆ ಒಂದು ದಲಾಯಿ ಲಾಮಾ ಸಾಫ್ಟ್‌ವೇರುಗಳ ಪಟ್ಟಿಯನ್ನು ತೋರಿಸುತ್ತಿದೆ. ಇದರ ಮರ್ಮ ಬಹಿರಂಗವಾಗಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ