ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನಿಲ್ಲದ ಜನಾಂಗೀಯ ಹಿಂಸೆ: ಆಸ್ಟ್ರೇಲಿಯಾದಲ್ಲಿ ಭಾರತೀಯನ ಹತ್ಯೆ (Indian youth | Australia | Nitin Garg | Punjab)
Bookmark and Share Feedback Print
 
ಕೆಲಸಕ್ಕೆ ಹೋಗುತ್ತಿದ್ದ ಭಾರತೀಯ ಮೂಲದ ಆಸ್ಟ್ರೇಲಿಯಾ ಖಾಯಂ ನಿವಾಸಿಯೊಬ್ಬನನ್ನು ಇರಿದು ಕೊಂದು ಹಾಕಲಾಗಿದ್ದು, ಕಾಂಗರೂಗಳ ನಾಡಿನಲ್ಲಿ ಜನಾಂಗೀಯ ಹಿಂಸೆ ನಿಲ್ಲುವ ಬದಲು ತಾರಕಕ್ಕೇರುತ್ತಿದೆ.

ಪಂಜಾಬ್‌ನಿಂದ ಆಸ್ಟ್ರೇಲಿಯಾಕ್ಕೆ ವಲಸೆ ಹೋಗಿದ್ದ ನಿತಿನ್ ಗಾರ್ಗ್ ಎಂಬ 21ರ ಹರೆಯದ ಯುವಕ ಕೆಲಸಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ಹೊಟ್ಟೆಗೆ ಇರಿಯಲಾಗಿತ್ತು.

ತೀವ್ರವಾಗಿ ಗಾಯಗೊಂಡಿದ್ದ ಅವರು ತಾನು ಪಾರ್ಟ್‌ಟೈಮ್ ಕೆಲಸ ಮಾಡುತ್ತಿದ್ದ ಫಾಸ್ಟ್ ಫುಡ್ ರೆಸ್ಟಾರೆಂಟ್‌ ಪಕ್ಕದ ಬೀದಿಗೆ ತೂರಾಡುತ್ತಾ ತಲುಪಿದ್ದರು.

ಶನಿವಾರ ರಾತ್ರಿ ಸುಮಾರು 10 ಗಂಟೆಗೆ ಈ ಘಟನೆ ನಡೆದಿದ್ದು, ಈ ಸಂದರ್ಭದಲ್ಲಿ ಸಹಾಯಕ್ಕಾಗಿ ನಿತಿನ್ ಅಂಗಲಾಚಿದ್ದರು. ಬಳಿಕ ಅವರನ್ನು ಇಲ್ಲಿನ ರಾಯಲ್ ಮೆಲ್ಬೋರ್ನ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಸಾವನ್ನಪ್ಪಿದರು ಎಂದು ಟೀವಿ ವರದಿಗಳು ಹೇಳಿವೆ.

ನ್ಯೂಪೋರ್ಟ್‌ನಿಂದ ಯಾರವಿಲ್ಲೆ ರೈಲ್ವೇ ನಿಲ್ದಾಣಕ್ಕೆ ರಾತ್ರಿ 9.30ರ ಹೊತ್ತಿಗೆ ಪ್ರಯಾಣಿಸಿದ್ದ ನಿತಿನ್, ರೆಸ್ಟಾರೆಂಟ್ ಕಡೆ ಹೋಗುತ್ತಿದ್ದಾಗ ಹೊಟ್ಟೆಗೆ ಇರಿಯಲಾಗಿದೆ. ಬಳಿಕ ಅವರು 300 ಮೀಟರುಗಳಷ್ಟು ದೂರ ನಡೆದುಕೊಂಡು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ತನಿಖೆ ನಡೆಸಲಾಗುತ್ತದೆ. ತಪ್ಪಿತಸ್ಥರನ್ನು ಬಂಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಒಂದು ವರ್ಷದಿಂದ ಆಸ್ಟ್ರೇಲಿಯಾದಲ್ಲಿ ಹಲವು ಭಾರತೀಯರ ಮೇಲೆ ದಾಳಿಗಳು ನಡೆಯುತ್ತಿದೆ. ಅಗತ್ಯ ಕ್ರಮದ ಭರವಸೆಯನ್ನು ಅಲ್ಲಿನ ಆಡಳಿತ ನೀಡುತ್ತಿದೆಯಾದರೂ ದಾಳಿಗಳು ಅವ್ಯಾಹತವಾಗಿ ಮುಂದುವರಿದಿರುವ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ