ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಾಡೆನ್ ಪುತ್ರಿಯನ್ನು ಬಿಡುಗಡೆ ಮಾಡಿ: ಇರಾನ್‌ಗೆ ಸೌದಿ (Saudi Arabia | al Qaeda | Osama bin Laden | Osama daughter Iman)
Bookmark and Share Feedback Print
 
ಗೃಹಬಂಧನದಿಂದ ತಪ್ಪಿಸಿಕೊಂಡು ತೆಹ್ರಾನ್ ದೂತವಾಸದಲ್ಲಿ ಆಶ್ರಯ ಕೋರಿರುವ ಅಲ್‌ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಪುತ್ರಿಯನ್ನು ತಾಯ್ನಾಡಿಗೆ ಮರಳಿಸುವಂತೆ ಸೌದಿ ಅರೇಬಿಯಾ ಇರಾನ್‌ನಲ್ಲಿ ಮನವಿ ಮಾಡಿಕೊಂಡಿದೆ.

ದೇಶಭ್ರಷ್ಟ ನಾಯಕನ 17ರ ಹರೆಯದ ಪುತ್ರಿ ಇಮಾನ್‌ಳನ್ನು ಬಿಡುಗಡೆ ಮಾಡುವ ಸಂಬಂಧ ಇರಾನ್ ಜತೆ ಸೌದಿ ಅರೇಬಿಯಾ ಸರಕಾರ ಮಾತುಕತೆ ನಡೆಸುತ್ತಿದೆ ಎಂದು ಸೌದಿ ವಿದೇಶಾಂಗ ಸಚಿವ ಪ್ರಿನ್ಸ್ ಸೌದ್ ಅಲ್ ಫೈಸಲ್ ಶನಿವಾರ ತಿಳಿಸಿದ್ದಾರೆ.

ಅಫಘಾನಿಸ್ತಾನದಲ್ಲಿ 2001ರಿಂದ ಅಮೆರಿಕಾ ನೇತೃತ್ವದ ಪಡೆಯು ಆಕ್ರಮಣ ನಡೆಸಲು ಆರಂಭಿಸಿದ ನಂತರ ಅಲ್ಲಿಂದ ತಪ್ಪಿಸಿಕೊಂಡು ಇರಾನ್ ರಕ್ಷಣಾ ಪಡೆ ಕೈಗೆ ಸಿಕ್ಕಿ ಬಿದ್ದಿದ್ದ ಇಮಾಮ್ ಗೃಹಬಂಧನದಿಂದ ಇತ್ತೀಚೇಗಷ್ಟೇ ತಪ್ಪಿಸಿಕೊಂಡು ತೆಹ್ರಾನ್‌ನಲ್ಲಿನ ಸೌದಿ ಅರೇಬಿಯಾ ದೂತವಾಸ ಸೇರಿಕೊಂಡಿದ್ದಳು ಎಂದು ಬಿಬಿಸಿ ವರದಿ ಮಾಡಿದೆ ಎಂದು ಸೌದಿ ಪತ್ರಿಕೆ 'ಅಶಾರ್ಕ್ ಅಲ್ ಅಸ್ವಾತ್' ತಿಳಿಸಿದೆ.

ಭಯೋತ್ಪಾದಕ ಲಾಡೆನ್ ಮಕ್ಕಳು ಮತ್ತು ಆತನ ಪತ್ನಿ ಖಾಯ್ರಿಯಾ ಅವರು ತೆಹ್ರಾನ್‌ನ ಪಕ್ಕದ ವಸತಿ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ಲಾಡೆನ್‌ನ ನಾಲ್ಕನೇ ಮಗ ಒಮರ್‌ನ ಪತ್ನಿ ಝೈನಾ ಬಿನ್ ಲಾಡೆನ್ ಹೇಳಿದ್ದನ್ನು ಕೂಡ ಪತ್ರಿಕೆ ತನ್ನ ವರದಿಯಲ್ಲಿ ಹೇಳಿದೆ.

ಸೌದಿ ರಾಜಧಾನಿ ರಿಯಾದ್‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ತಿಳಿಸಿರುವ ಸಚಿವ ಫೈಸಲ್, ಈ ವಿಚಾರವನ್ನು ಮಾನವೀಯತೆಯ ದೃಷ್ಟಿಯಿಂದ ದೇಶವು ನೋಡುತ್ತಿದೆ ಎಂದಿದ್ದಾರೆ.

ಈ ಸಂಬಂಧ ನಾವು ಇರಾನ್ ಸರಕಾರದೊಂದಿಗೆ ಸಮಾಲೋಚನೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ