ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕರೆನ್ಸಿ, ಡ್ರಗ್ಸ್ ಜಾಲ: ನೇಪಾಳ ಮಾಜಿ ಸಚಿವರ ಪುತ್ರ ಸೆರೆ (Nepal | currency-drugs racket | king Gyanendra | Yunus Ansari)
Bookmark and Share Feedback Print
 
ನೇಪಾಳದ ಕಮ್ಯೂನಿಸ್ಟ್ ಆಡಳಿತ ಪಕ್ಷದಲ್ಲಿದ್ದ ಪ್ರಭಾವಿ ರಾಜಕಾರಣಿಯೊಬ್ಬರ ಪುತ್ರನೊಬ್ಬ ಪಾಕಿಸ್ತಾನಿ ಸಹಚರರೊಂದಿಗೆ ನಡೆಸುತ್ತಿದ್ದ ಭಾರತೀಯ ಕರೆನ್ಸಿ ಮತ್ತು ಡ್ರಗ್ಸ್‌ ಮಾಫಿಯಾವೊಂದನ್ನು ಪೊಲೀಸರು ಗುಪ್ತ ಕಾರ್ಯಾಚರಣೆಯಲ್ಲಿ ಭೇದಿಸಿದ್ದಾರೆ.

ಆಡಳಿತ ಪಕ್ಷಕ್ಕೆ ಸೇರಿದ್ದ ನೇಪಾಳದ ಮಾಜಿ ಅರಣ್ಯ ಸಚಿವ ಸಲೀಮ್ ಅನ್ಸಾರಿ ನಂತರದ ದಿನಗಳಲ್ಲಿ ಪದಚ್ಯುತ ದೊರೆ ಜ್ಞಾನೇಂದ್ರರನ್ನು ಬೆಂಬಲಿಸಿದ್ದರು. ಬಳಿಕ ಅವರು ಭಾರತ ಮತ್ತು ಪಾಕಿಸ್ತಾನಗಳ ಭೂಗತರೊಂದಿಗೆ ಸಂಪರ್ಕಗಳನ್ನು ಹೊಂದಿದ್ದರು ಎಂದು ಆರೋಪಿಸಲಾಗಿತ್ತು.

ಅವರ ಪುತ್ರ ಸಲೀಮ್ ಅನ್ಸಾರಿ ಎಂಬಾತನೇ ಇದೀಗ ಸಿಕ್ಕಿ ಬಿದ್ದಿರುವುದು. 2.5 ಮಿಲಿಯನ್ ಮೌಲ್ಯದ ಭಾರತೀಯ ಖೋಟಾ ನೋಟು ಹಾಗೂ ಸುಮಾರು ನಾಲ್ಕು ಕೇಜಿ ಹೆರಾಯಿನ್ ಮಾದಕದ್ರವ್ಯದೊಂದಿಗೆ ಈತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಪ್ರಚಲಿತ ರಾಜಕೀಯದಿಂದ ಹೊರಗುಳಿದಿರುವುದರ ಹೊರತಾಗಿಯೂ ಯೂಸುಫ್ ತಂದೆ ಆರಾಮದಾಯಕ ಜೀವನ ನಡೆಸುತ್ತಿದ್ದು, ವಶೀಲಿಬಾಜಿ ನಡೆಸಬಹುದೆಂಬ ಭೀತಿಯಿಂದ ಶುಕ್ರವಾರ ಆರೋಪಿಯನ್ನು ಬಂಧಿಸಲಾಗಿದ್ದರೂ ಬಹಿರಂಗಪಡಿಸಿರಲಿಲ್ಲ.

ಬಂಧನದ ಸುದ್ದಿ ಹೊರ ಜಗತ್ತಿಗೆ ಬಂದದ್ದು ಭಾನುವಾರ ಸಂಜೆ. ನ್ಯಾಯಾಲಯವು ಆತನ ಕೂಲಂಕಷ ತನಿಖೆಗಾಗಿ ನ್ಯಾಯಾಂಗ ಕಸ್ಟಡಿಗೆ 10 ದಿನಗಳ ಕಾಲ ಒಪ್ಪಿಸಿದ ಮೇಲಷ್ಟೇ ಪ್ರಕರಣ ಬಹಿರಂಗವಾಗಿತ್ತು.

ಕರಾಚಿ ಮೂಲದಿಂದ ಈ ಮಾಫಿಯಾ ನಡೆಸಲ್ಪಡುತ್ತಿದ್ದು, ಇದರಲ್ಲಿ ಯೂಸುಫ್ ಸಕ್ರಿಯನಾಗಿದ್ದ. ನೇಪಾಳದ ಮೂಲಕವೇ ವ್ಯವಹಾರ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಸಂಶಯಗಳ ಹಿನ್ನೆಲೆಯಲ್ಲಿ ಯೂಸುಫ್ ಮೇಲೆ ಹಲವು ಸಮಯದಿಂದ ಪೊಲೀಸರು ಕಣ್ಣಿಟ್ಟಿದ್ದರು. ಆತನ ಅಂಗರಕ್ಷಕನ ಬೆನ್ನು ಬಿದ್ದ ಪೊಲೀಸರಿಗೆ ನಿರಾಸೆಯಾಗಲಿಲ್ಲ. ಬಳಿಕ ಆತನ ಜಾಡು ಹಿಡಿದು ಯೂಸುಫ್ ನಡೆಸುತ್ತಿರುವ ಅಡ್ಡೆಗೆ ದಾಳಿ ನಡೆಸಿ ಬಂಧಿಸಲಾಯಿತು ಎಂದು ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ