ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಉಗ್ರರು ಅಮೆರಿಕಾಕ್ಕೆ ಹೋಗೋದಿನ್ನು ಅಷ್ಟು ಸುಲಭವಲ್ಲ (US travellers | Pakistan | al-Qaida | Taliban)
Bookmark and Share Feedback Print
 
ಭಯೋತ್ಪಾದಕರ ತಂತ್ರಗಳನ್ನು ಆಗಾಗ ವಿಫಲಗೊಳಿಸುತ್ತಿರುವ ಹೊತ್ತಿನಲ್ಲೇ ಮತ್ತಷ್ಟು ಸವಾಲುಗಳನ್ನು ಎದುರಿಸುತ್ತಿರುವ ಅಮೆರಿಕಾ ಇದೀಗ ತನ್ನ ದೇಶಕ್ಕೆ ಬರುವ ನಿರ್ದಿಷ್ಟ ದೇಶಗಳ ಪ್ರವಾಸಿಗರ ಮೇಲೆ ಹದ್ದಿನ ಕಣ್ಣಿಡಲು ಮುಂದಾಗಿದೆ.

ಪಾಕಿಸ್ತಾನ, ಅಫಘಾನಿಸ್ತಾನ, ನೈಜೀರಿಯಾ, ಯೆಮನ್ ಸೌದಿ ಅರೇಬಿಯಾ ಸೇರಿದಂತೆ 13 ದೇಶಗಳಿಂದ ಅಮೆರಿಕಾಕ್ಕೆ ವಾಯುಮಾರ್ಗವಾಗಿ ಪ್ರವೇಶಿಸುವವರನ್ನು ಹೆಚ್ಚುವರಿ ತಪಾಸಣೆಗೊಳಪಡಿಸಲು ನಿರ್ಧರಿಸಿದೆ.

ಹೊಸ ಸುರಕ್ಷತಾ ನಿಯಮಗಳ ಪ್ರಕಾರ ಈ ದೇಶಗಳಿಂದ ಬರುವ ಪ್ರಯಾಣಿಕರ ತಪಾಸಣೆ ಮತ್ತು ಅವರ ಸಾಮಾನು-ಸರಂಜಾಮುಗಳನ್ನು ಪರಿಶೀಲನೆಗೊಳಪಡಿಸಲಾಗುವ ಪ್ರಕ್ರಿಯೆಯನ್ನು ಸೋಮವಾರದಿಂದಲೇ ಆರಂಭಿಸಲಾಗಿದೆ.

ಅಲ್ಲದೆ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರನ್ನೂ ಸುಧಾರಿತ ತಂತ್ರಜ್ಞಾನಗಳ ತಪಾಸಣೆಗೊಳಪಡಿಸಲಾಗುತ್ತದೆ. ಬ್ಯಾಗುಗಳನ್ನು ಮತ್ತು ಇಡೀ ದೇಹವನ್ನು ಸ್ಕ್ಯಾನ್ ಮಾಡಿ ಸ್ಫೋಟಕಗಳಿವೆಯೇ ಎಂದು ಪತ್ತೆ ಹಚ್ಚುವುದು, ಇನ್ನಿತರ ತಪಾಸಣೆಗಳು ಸೇರಿವೆ ಎಂದು ಸಾರಿಗೆ ಸುರಕ್ಷತಾ ಆಡಳಿತ ಭಾನುವಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕ್ರಿಸ್‌ಮಸ್ ದಿನದಂದು ಡೆಟ್ರಾಯಿಟ್‌ಗೆ ತೆರಳುತ್ತಿದ್ದ ಅಮೆರಿಕಾ ವಿಮಾನವೊಂದನ್ನು ಆಕಾಶ ಮಾರ್ಗದಲ್ಲಿಯೇ ಅಲ್‌ಖೈದಾ ಸಹಚ ಎಂದು ಹೇಳಲಾಗಿರುವ ನೈಜೀರಿಯಾ ಪ್ರಜೆಯೊಬ್ಬ ಸ್ಫೋಟಗೊಳಿಸಲು ಯತ್ನಿಸಿದ ಬೆನ್ನಿಗೆ ಈ ಕಠಿಣ ಕ್ರಮಗಳಿಗೆ ಅಮೆರಿಕಾ ಮುಂದಾಗಿದೆ.

ಅಲ್‌ಖೈದಾ ಮತ್ತು ತಾಲಿಬಾನ್ ಉಗ್ರಗಾಮಿ ಸಂಘಟನೆಗಳ ದಮನಕ್ಕೆ ಅಫಘಾನಿಸ್ತಾನದಲ್ಲಿ ಅಮೆರಿಕಾ ಯತ್ನಿಸುತ್ತಿರುವುದರಿಂದ ಆ ದೇಶವನ್ನೂ ಹೆಚ್ಚಿನ ತಪಾಸಣೆಗೆ ಪರಿಗಣಿಸಲಾಗಿದೆ.

ಪಾಕಿಸ್ತಾನ, ಅಫಘಾನಿಸ್ತಾನ, ಅಲ್ಜೀರಿಯಾ, ಇರಾಕ್, ಲೆಬನಾನ್, ಲಿಬಿಯಾ, ನೈಜೀರಿಯಾ, ಸೌದಿ ಅರೇಬಿಯಾ, ಸೋಮಾಲಿಯಾ, ಯೆಮನ್, ಕ್ಯೂಬಾ, ಇರಾನ್, ಸೂಡಾನ್ ಮತ್ತು ಸಿರಿಯಾ ದೇಶಗಳಿಂದ ಬರುವ ಪ್ರಯಾಣಿಕರನ್ನು ಉತ್ಕೃಷ್ಟ ತಪಾಸಣೆಗೊಳಪಡಿಸಲು ಅಮೆರಿಕಾ ನಿರ್ಧರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ