ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕರಾಚಿ ಹಿಂಸಾಚಾರ ಪೂರ್ವಯೋಜಿತ ಕೃತ್ಯ? (Karachi violence | Lahore | Conspiracy | Pakistan | Muharram procession)
Bookmark and Share Feedback Print
 
ಕಳೆದ ವರ್ಷದ ಡಿಸೆಂಬರ್ 28ರ ಮೊಹರಂ ಮೆರವಣಿಗೆಯನ್ನು ಗುರಿಯಾಗಿರಿಸಿಕೊಂಡು ನಡೆಸಿದ ಬಾಂಬ್ ಸ್ಫೋಟ ಮತ್ತು ಹಿಂಸಾಚಾರ ಪ್ರಕರಣ 'ಪೂರ್ವ ನಿಯೋಜಿತ' ಎಂದು ಖಾಸಗಿ ಟಿವಿ ಚಾನೆಲ್ ವರದಿಯೊಂದು ತಿಳಿಸಿದೆ.

ಡಿಸೆಂಬರ್ 28ರಂದು ಶಿಯಾ ಪಂಗಡದವರ ಮೊಹರಂ ಮೆರವಣಿಗೆ ಸಾಗುತ್ತಿದ್ದ ವೇಳೆ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ ಪರಿಣಾಮ 42ಮಂದಿ ಸಾವನ್ನಪ್ಪಿದ್ದು, 83ಜನರು ಗಾಯಗೊಂಡಿದ್ದರು.

ಏಕಾಏಕಿ ಬಾಂಬ್ ಸ್ಫೋಟ ಸಂಭವಿಸಿದ ಪರಿಣಾಮ ಜನ ದಿಕ್ಕಾಪಾಲಾಗಿ ಓಡಿದ್ದರು, ನಗರದ ವಿವಿಧೆಡೆ ಹಿಂಸಾಚಾರ ಭುಗಿಲೆದ್ದಿದ್ದು, ವಾಹನಗಳ ಮೇಲೆ ಕಲ್ಲೆಸೆದು ಅಂಗಡಿಗಳ ಮೇಲೆ ದಾಳಿ ನಡೆಸಲಾಗಿತ್ತು.

ಬಾಂಬ್ ಸ್ಫೋಟ ಸಂಭವಿಸಿದ 39ನಿಮಿಷಗಳ ಕಾಲ ನಡೆದ ಪೂರ್ವ ಯೋಜಿತ ಹಿಂಸಾಚಾರದಲ್ಲಿ ಶಂಕಿತ ವ್ಯಕ್ತಿಗಳು ತೊಡಗಿಸಿಕೊಂಡಿರುವುದು ಸಿಸಿಟಿವಿ ಫೂಟೇಜ್‌ನಲ್ಲಿ ದಾಖಲಾಗಿರುವುದಾಗಿ ಡೈಲಿ ಟೈಮ್ಸ್ ವರದಿ ತಿಳಿಸಿರುವುದಾಗಿ ಚಾನೆಲ್ ವಿವರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ