ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಾಜಿ ಅಧ್ಯಕ್ಷರ ಹುಟ್ಟೂರಿನಲ್ಲಿ ಒಬಾಮಾ ಪ್ರತಿಕೃತಿ ನೇಣಿಗೆ! (Jimmy Carter | Obama | America | US secret service | effigy)
Bookmark and Share Feedback Print
 
ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಹುಟ್ಟೂರಿನ ಕಟ್ಟಡವೊಂದರ ಮೇಲೆ ಹಾಲಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಪ್ರತಿಕೃತಿಯನ್ನೇ ನೇಣಿಗೇರಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಮೆರಿಕ ಗುಪ್ತಚರ ಇಲಾಖೆ ತನಿಖೆ ನಡೆಸುತ್ತಿದೆ ಎಂದು ದಿ ಅಟ್ಲಾಂಟಾ ಜರ್ನಲ್ ಕಾನ್‌ಸ್ಟಿಟ್ಯೂಷನ್ ವರದಿ ತಿಳಿಸಿದೆ.

ಬರಾಕ್ ಒಬಾಮಾ ಹೋಲುವ ಗೊಂಬೆಯೊಂದನ್ನು ಕಟ್ಟಡದ ಮೇಲ್ಭಾಗವೊಂದರಲ್ಲಿ ನೇಣಿಗೇರಿಸಿರುವ ದೃಶ್ಯವನ್ನು ವಾಲ್ಬ್ ಟಿವಿ ಪ್ರಸಾರ ಮಾಡಿರುವುದಾಗಿ ಪತ್ರಿಕೆಯ ವರದಿ ವಿವರಿಸಿದೆ.

ನೇಣಿಗೇರಿಸಲ್ಪಟ್ಟ ಗೊಂಬೆಯ ಮೇಲೆ ಒಬಾಮಾ ಹೆಸರನ್ನು ಬರೆಯಲಾಗಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬ ಟೆಲಿವಿಷನ್‌ಗೆ ತಿಳಿಸಿರುವುದಾಗಿ ವರದಿ ಹೇಳಿದೆ. ವಿಷಯ ತಿಳಿದ ಗುಪ್ತಚರ ಇಲಾಖೆಯ ಅಧಿಕಾರಿಗಳು ಶನಿವಾರವೇ ಆ ಗೊಂಬೆಯನ್ನು ತೆಗೆದುಹಾಕಲಾಗಿದೆ.

ಆದರೆ ಒಬಾಮಾ ಹೆಸರಿನಲ್ಲಿ ಗೊಂಬೆಯೊಂದನ್ನು ನೇಣಿಗೇರಿಸುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಿಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಅಧಿಕಾರಿಗಳು ಹೆಚ್ಚಿನ ಮಾಹಿತಿ ನೀಡಲು ಮಾತ್ರ ನಿರಾಕರಿಸಿದ್ದಾರೆ ಎಂದು ಪತ್ರಿಕೆ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ