ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್‌ನಲ್ಲಿ ಬಂಧಿತರಾದ ಅಮೆರಿಕನ್‌ರು ಉಗ್ರರಲ್ಲ: ಅಬ್ದುಲ್ಲಾ (Pakistan | America | Terrorism | Lahore | al Qaeda)
Bookmark and Share Feedback Print
 
ಪಾಕಿಸ್ತಾನದಲ್ಲಿ ಬಂಧಿತರಾಗಿರುವ ಐದು ಮಂದಿ ಅಮೆರಿಕನ್‌ರು ಭಯೋತ್ಪಾದನಾ ದಾಳಿ ನಡೆಸಲು ಬಂದವರಲ್ಲ ಎಂದು ಬಂಧಿತರ ಪರ ವಕೀಲರು ತಿಳಿಸಿದ್ದಾರೆ.

ಸೋಮವಾರ ಬಂಧಿತ ಐದು ಮಂದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಸೆರೆ ಸಿಕ್ಕವರ ವಿರುದ್ಧ ಭಯೋತ್ಪಾದನಾ ಆರೋಪಪಟ್ಟಿಯನ್ನು ತಯಾರಿಸುವಂತೆ ಪೊಲೀಸರಿಗೆ ಕೋರ್ಟ್ ಎರಡು ವಾರಗಳ ಕಾಲಾವಕಾಶ ನೀಡಿದೆ.

ಡಿಸೆಂಬರ್ ತಿಂಗಳಿನಲ್ಲಿ ವಾಷಿಂಗ್ಟನ್ ಡಿಸಿಯಿಂದ ಆಗಮಿಸಿದ್ದ ಐದು ಮಂದಿ ಮುಸ್ಲಿಮರನ್ನು ಪಾಕಿಸ್ತಾನ ಪೊಲೀಸರು ಸರ್ಗೋದಾದಲ್ಲಿ ಬಂಧಿಸಿದ್ದರು. ದೇಶದ ಭಯೋತ್ಪಾದನಾ ನಿಗ್ರಹ ಕಾಯ್ದೆಯನ್ವಯ ಬಂಧಿತರಿಗೆ ಜೀವಾವಧಿ ಶಿಕ್ಷೆಯಾಗುವ ಸಾಧ್ಯತೆ ಇರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತರೆಲ್ಲಾ 19ರಿಂದ 25ರ ವಯೋಮಾನರಾಗಿದ್ದಾರೆ. ಆದರೆ ಬಂಧಿತ ಐದು ಮಂದಿ ಅಲ್ ಖಾಯಿದಾವಾಗಲಿ ಇತರ ಯಾವುದೇ ಉಗ್ರಗಾಮಿ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿಲ್ಲ ಎಂದು ಸೋಮವಾರ ಅವರ ಅಟಾರ್ನಿ ಅಮೀರ್ ಅಬ್ದುಲ್ಲಾ ರೋಕ್ರಿ ಹೇಳಿದರು.'ಕಷ್ಟದಲ್ಲಿರುವ ತಮ್ಮ ಮುಸ್ಲಿಂ ಸಹೋದರರಿಗೆ ನೆರವು ನೀಡುವ ನಿಟ್ಟಿನಲ್ಲಿ ಅವರೆಲ್ಲ ಅಮೆರಿಕದಿಂದ ಅಫ್ಘಾನಿಸ್ತಾನಕ್ಕೆ ಪ್ರಯಾಣ ಬೆಳೆಸಿರುವುದಾಗಿ' ಈ ಸಂದರ್ಭದಲ್ಲಿ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ