ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 160 ಮಹಡಿಯ ವಿಶ್ವದ ಅತೀ ಎತ್ತರದ ಕಟ್ಟಡ ಉದ್ಘಾಟನೆ (Burj Dubai | dazzling lights | Tallest tower | Sheikh Khalifa)
Bookmark and Share Feedback Print
 
Burj Dubai
PR
828 ಮೀಟರ್ ಎತ್ತರದ ವಿಶ್ವದ ಅತೀ ಎತ್ತರದ ಕಟ್ಟಡ ಎಂಬ ಹೆಗ್ಗಳಿಕೆ ಪಡೆದುಕೊಂಡಿರುವ 'ಬುರ್ಜ್ ದುಬೈ' ಕಟ್ಟಡ ನಿರೀಕ್ಷೆಯಂತೆ ಸೋಮವಾರ ಉದ್ಘಾಟನೆಗೊಂಡಿದೆ.

ವಿಶ್ವದ ಅತೀ ಎತ್ತರದ ಕಟ್ಟಡಗಳೆಂಬ ಇತರೆಲ್ಲಾ ದಾಖಲೆಗಳನ್ನು ಮುರಿದು ಮುನ್ನುಗ್ಗಿರುವ ಅರಬ್ ಸಾಮ್ರಾಜ್ಯದ ಈ ಕಟ್ಟಡ ಉದ್ಘಾಟನೆ ಸಂದರ್ಭದಲ್ಲಿ ಸಾವಿರಾರು ಬಾಣ-ಬಿರುಸುಗಳನ್ನು ಹಾರಿ ಸಂಭ್ರಮಿಸಲಾಯಿತು.

160 ಮಹಡಿಗಳುಳ್ಳ ಈ ಕಟ್ಟಡ ನಿರ್ಮಾಣಕ್ಕೆ ಮಾಡಲಾಗಿರುವ ವೆಚ್ಚ ಸುಮಾರು 150 ಕೋಟಿ ಡಾಲರುಗಳು. ಎಮಾರ್ ಪ್ರಾಪರ್ಟೀಸ್ ನಿರ್ಮಿಸಿರುವ ಈ ಕಟ್ಟಡದ ಪ್ರತೀ ಮಹಡಿಗಾಗಿ 90 ಲಕ್ಷ ಡಾಲರುಗಳನ್ನು ವ್ಯಯಿಸಲಾಗಿದೆ.

2004ರಲ್ಲಿ (ಸೆಪ್ಟೆಂಬರ್ 21) ಆರಂಭಿಸಿದ್ದ ಬುರ್ಜ್ ದುಬೈ ನಿರ್ಮಾಣ ಕಾರ್ಯ ಉದ್ಘಾಟನೆಯೊಂದಿಗೆ ಅಂತ್ಯಗೊಂಡದ್ದು 2010ರ ಜನವರಿ 4ರಂದು. ಸುಮಾರು 500 ಎಕರೆಯಲ್ಲಿ ಹರವಿಕೊಂಡಿರುವ ಕಟ್ಟಡ ಪ್ರದೇಶದಲ್ಲಿ 12,000ಕ್ಕೂ ಹೆಚ್ಚು ಮಂದಿ ವಾಸಿಸಬಹುದಾಗಿದೆ.

ಈ ಹಿಂದೆ ತೈವಾನ್‌ನಲ್ಲಿನ 101 ಮಹಡಿಯ ಕಟ್ಟಡವು ವಿಶ್ವದ ಅತೀ ಎತ್ತರದ ಕಟ್ಟಡ (509 ಮೀ) ಎಂಬ ದಾಖಲೆ ನಿರ್ಮಿಸಿತ್ತು. ಅಲ್ಲದೆ ಅಮೆರಿಕಾದ ಉತ್ತರ ಡಕೋಟದಲ್ಲಿರುವ 124 ಮಹಡಿಗಳ ಟೀವಿ ಗೋಪುರದ ದಾಖಲೆಯನ್ನು (628.8 ಮೀ) ಕೂಡ ಇದೀಗ ಬುರ್ಜ್ ದುಬೈ (828 ಮೀ) ಹಿಂದಿಕ್ಕಿದೆ.

ಟವರ್ ಓಪನ್ ಮಾಡಿದ ದುಬೈ ಆಡಳಿತ ಮುಖ್ಯಸ್ಥ ಶೇಖ್ ಮೊಹಮ್ಮದ್ 'ಬುರ್ಜ್ ದುಬೈ' ಕಟ್ಟಡವನ್ನು 'ಬುರ್ಜ್ ಖಾಲಿಫಾ' ಎಂದು ಮರು ನಾಮಕರಣ ಮಾಡಿದ್ದಾರೆ. ಯುಎಇ ಅಧ್ಯಕ್ಷ ಶೇಖ್ ಖಾಲಿಫಾರ ನೆನಪಿಗಾಗಿ ಈ ಹೆಸರನ್ನಿಡಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ