ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕಾ: ಕೊನೆಗೂ ಏಡ್ಸ್ ಪೀಡಿತರ ನಿಷೇಧ ವಾಪಸಾತಿ ಜಾರಿ (HIV | AIDS | America | travel ban)
Bookmark and Share Feedback Print
 
ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಪ್ರಕಟಿಸಿದ್ದ ಮಹತ್ವದ ನಿರ್ಧಾರವೊಂದು ಸೋಮವಾರದಿಂದ ಜಾರಿಗೆ ಬಂದಿದೆ. ಎಚ್ಐವಿ/ಏಡ್ಸ್ ಪೀಡಿತರು ಅಮೆರಿಕಾ ಪ್ರವಾಸ ಮಾಡದಂತೆ ಹೇರಲಾಗಿದ್ದ ನಿಷೇಧವನ್ನು ಹಿಂಪಡೆದ ಈ ತೀರ್ಮಾನವನ್ನು ಮಾನವ ಹಕ್ಕುಗಳ ಸಂಘಟನೆಗಳು ಮುಕ್ತಕಂಠದಿಂದ ಶ್ಲಾಘಿಸಿವೆ.

ಕಳೆದ 22 ವರ್ಷಗಳ ಹಿಂದೆ ಜಾರಿಗೆ ಬಂದಿದ್ದ ಕ್ರೂರ ಕಾನೂನನ್ನು ಬುಷ್ ಆಡಳಿತವು ಕೊನೆಗೊಳಿಸಲು ನಿರ್ಧರಿಸಿತ್ತು. ಇದಕ್ಕೆ ಅಂತಿಮ ಅಂಕಿತ ಹಾಕಿದ್ದು ಒಬಾಮಾ. ಅವರು ಅಕ್ಟೋಬರ್ 30ರಂದು ಈ ಕಾಯ್ದೆ ರದ್ದಿಗೆ ಅನುಮತಿ ನೀಡಿದ್ದರು.

ತಾರತಮ್ಯಯುತ ಮತ್ತು ಕಠೋರ ಕಾಯ್ದೆಯೊಂದು ಕೊನೆಗೂ ಅಂತ್ಯಗೊಂಡಿರುವುದು ನಮಗೆ ತೀವ್ರ ಸಂತಸವನ್ನುಂಟು ಮಾಡಿದೆ ಎಂದು ವಲಸೆ ಸಮಾನತಾ ವಾದಿ ಸಮೂಹದ ಕಾನೂನು ನಿರ್ದೇಶಕ ವಿಕ್ಟೋರಿಯಾ ನೀಲ್ಸನ್ ತಿಳಿಸಿದ್ದಾರೆ.

ಎಚ್ಐವಿ ಪೀಡಿತರ ಅಮೆರಿಕಾ ಪ್ರಯಾಣದ ಮೇಲೆ ಹೇರಲಾಗಿದ್ದ ನಿಷೇಧವನ್ನು ಹಿಂದಕ್ಕೆ ಪಡೆಯಲೆಂದೇ ನಮ್ಮ ಸಂಸ್ಥೆಯನ್ನು 1994ರಲ್ಲಿ ಹುಟ್ಟು ಹಾಕಲಾಗಿತ್ತು. ನಮ್ಮ ಪ್ರಮುಖ ಉದ್ದೇಶ ಈ ಕ್ರೂರ ನಿಯಮವನ್ನು ರದ್ದುಗೊಳಿಸುವುದು ಎಂದು 1987ರಲ್ಲಿ ಜಾರಿಗೆ ಬಂದಿದ್ದ ಕಾಯ್ದೆ ರದ್ದಾದ ಸಂತಸದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಸಲಿಂಗಕಾಮಿಗಳು, ದ್ವಿಲಿಂಗಿಗಳು ಮತ್ತು ಲಿಂಗ ಪರಿವರ್ತನೆ ಮಾಡಿಕೊಂಡವರ ಹಕ್ಕುಗಳಿಗಾಗಿ ಹೋರಾಡಿದ್ದ ಮಾನವ ಹಕ್ಕುಗಳ ಹೋರಾಟ ಸಂಸ್ಥೆ, ಏಡ್ಸ್ ಪೀಡಿತರ ಮೇಲಿನ ನಿಷೇಧ ಹಿಂತೆಗೆದುಕೊಂಡಿರುವುದರಿಂದ ದೇಶದ ಕ್ರೂರ ಮತ್ತು ದುಃಖದಾಯಕ ಅಧ್ಯಾಯವೊಂದು ಅಂತ್ಯಗೊಂಡಿದೆ ಎಂದಿದೆ.
ಸಂಬಂಧಿತ ಮಾಹಿತಿ ಹುಡುಕಿ