ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮೆಲ್ಬೊರ್ನ್: ಭಾರತೀಯ ಯುವಕನ ಅರೆಬೆಂದ ಮೃತದೇಹ ಪತ್ತೆ (Australia | India | police | Melbourn | Nitin Garg,)
Bookmark and Share Feedback Print
 
ಭಾರತೀಯ ವಿದ್ಯಾರ್ಥಿಯೊಬ್ಬನನ್ನು ಹತ್ಯೆಗೈದ ಘಟನೆ ಬೆನ್ನಲ್ಲೇ, ಆಸ್ಟ್ರೇಲಿಯಾದ ನ್ಯೂ ಸೌತ್ ವಾಲ್ಸ್ ಪ್ರದೇಶದಲ್ಲಿ ಅರೆಸುಟ್ಟ ಭಾರತೀಯ ಯುವಕನ ಮೃತದೇಹವೊಂದು ಪತ್ತೆಯಾಗಿರುವುದಾಗಿ ಮಂಗಳವಾರ ಪೊಲೀಸರು ತಿಳಿಸಿದ್ದಾರೆ.

ಕಳೆದ ವಾರ ಗ್ರಿಫೀತ್‌ನ ರಸ್ತೆ ಸಮೀಪ 25ರ ಹರೆಯದ ಭಾರತೀಯ ಯುವಕನ ಮೃತದೇಹ ಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆಂದು ಎಬಿಸಿ ವರದಿ ಹೇಳಿದೆ.

ಮೃತದೇಹದ ಗುರುತಿಸುವಿಕಾಗಿ ಆಸ್ಟ್ರೇಲಿಯಾದ ಅಧಿಕಾರಿಗಳು ಯುವಕನ ಕುಟುಂಬ ಮತ್ತು ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳೊಂದಿಗೆ ಸಂಪರ್ಕ ಇರಿಸಿಕೊಂಡಿರುವುದಾಗಿ ವಿವರಿಸಿದ್ದಾರೆ.

ಯುವಕ ಯಾವ ರೀತಿಯಲ್ಲಿ ಸಾವನ್ನಪ್ಪಿದ್ದ, ಯಾವ ಪ್ರದೇಶದಲ್ಲಿ ಈ ಕೃತ್ಯ ಎಸಗಲಾಗಿದೆ ಎಂಬ ನಿಟ್ಟಿನಲ್ಲಿ ಅಪರಾಧ ಪತ್ತೆದಳ ತನಿಖೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ರಾತ್ರಿಯಷ್ಟೇ ಮೆಲ್ಬೊರ್ನ್‌ನಲ್ಲಿ 21ರ ಹರೆಯದ ನಿತಿನ್ ಗಾರ್ಗ್ ಎಂಬ ವಿದ್ಯಾರ್ಥಿಯನ್ನು ಚೂರಿಯಿಂದ ಇರಿದು ಕೊಲೆಗೈಯಲಾಗಿತ್ತು. ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲಿನ ದಾಳಿ ನಿರಂತರವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಭಾರತ ಎಚ್ಚರಿಕೆಯನ್ನು ನೀಡಿತ್ತು. ಏತನ್ಮಧ್ಯೆಯೇ ಭಾಗಶಃ ಸುಟ್ಟುಹೋದ ಸ್ಥಿತಿಯಲ್ಲಿರುವ ಭಾರತೀಯ ಯುವಕನ ಮೃತದೇಹ ಪತ್ತೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ