ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನೇಪಾಳ ಮಾವೋವಾದಿಗಳ ಕಪೂರ್ ಹೇಳಿಕೆ ನಮ್ಮದಲ್ಲ: ಭಾರತ (Nepal Maoists | India | Deepak Kapoor | Nepal)
Bookmark and Share Feedback Print
 
ಭಾರತೀಯ ಸೇನಾ ಮುಖ್ಯಸ್ಥ ದೀಪಕ್ ಕಪೂರ್ ನೇಪಾಳದ ಮಾವೋವಾದಿ ಪಡೆಗಳ ಬಗ್ಗೆ ನೀಡಿದ್ದ ಹೇಳಿಕೆ ಭಾರತದ ದೃಷ್ಟಿಕೋನವನ್ನು ಪ್ರತಿನಿಧಿಸುವುದಿಲ್ಲ ಎಂದು ಹೇಳುವ ಮೂಲಕ ಮನಮೋಹನ್ ಸಿಂಗ್ ಸರಕಾರ ವಿವಾದದಿಂದ ನುಣುಚಿಕೊಂಡಿದೆ.

ತನ್ನ ಮೊತ್ತ ಮೊದಲ ನೇಪಾಳ ಅಧಿಕೃತ ಭೇಟಿಯ ಸಂದರ್ಭದಲ್ಲಿ ಜನರಲ್ ಕಪೂರ್ ನೀಡಿದ್ದ ಹೇಳಿಕೆಗೆ ಭಾರತ ಸ್ಪಷ್ಟನೆ ನೀಡಿದೆ.

ನೇಪಾಳ ರಾಷ್ಟ್ರೀಯ ಮಿಲಿಟರಿ ಜತೆ ಮಾವೋವಾದಿಗಳ 'ಪ್ಯೂಪಲ್ಸ್ ಲಿಬರೇಷನ್ ಆರ್ಮಿ'ಯನ್ನು ಸಮನ್ವಯಗೊಳಿಸುವ ಬಗ್ಗೆ ಭಾರತೀಯ ಸೇನಾ ನಾಯಕ ದೀಪಕ್ ಕಪೂರ್ ನೀಡಿದ ಹೇಳಿಕೆಗಳ ವರದಿಗಳನ್ನು ಮಾಧ್ಯಮಗಳ ಮೂಲಕ ನಾವು ಗಮನಿಸಿದ್ದು, ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಮತ್ತು ಈ ಹೇಳಿಕೆ ಸಂಬಂಧಪಟ್ಟ ವಿಚಾರದಲ್ಲಿ ಭಾರತ ಸರಕಾರದ ದೃಷ್ಟಿಕೋನವನ್ನು ಪ್ರತಿಫಲಿಸುವುದಿಲ್ಲ ಎಂದು ಕಾಠ್ಮಂಡುವಿನಲ್ಲಿನ ಭಾರತೀಯ ದೂತವಾಸ ಸೋಮವಾರ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ನೇಪಾಳದ ಆಂತರಿಕ ವಿಚಾರದಲ್ಲಿ ನೇರವಾಗಿ ಮೂಗು ತೂರಿಸಿದ್ದಾರೆ ಎಂದು ಮಾವೋವಾದಿಗಳ ಬಗ್ಗೆ ಹೇಳಿಕೆ ನೀಡಿದ್ದ ಕಪೂರ್ ಹೇಳಿಕೆಯನ್ನು ಉಲ್ಲೇಖಿಸಿರುವ ದೂತವಾಸದ ಪತ್ರಿಕಾ ಹೇಳಿಕೆಯು, ಭಾರತವನ್ನು ಅನಗತ್ಯವಾಗಿ ವಿವಾದಕ್ಕೆಳೆಯಲು ಕೆಲವು ರಾಜಕೀಯ ಪಕ್ಷಗಳು ಯತ್ನಿಸುತ್ತಿರುವುದು ವಿಷಾದನೀಯ ಎಂದಿದೆ.

ಕಪೂರ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದ ಮಾವೋವಾದಿಗಳು, ಇದನ್ನು ಭಾರತ ಸರಕಾರದ ಗಮನಕ್ಕೆ ತಂದು ಪ್ರತಿಕ್ರಿಯೆ ನೀಡುವಂತೆ ಕಾಠ್ಮಂಡು ದೂತವಾಸಕ್ಕೆ ಆಗ್ರಹಿಸಿದ್ದರು.

ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸ್ನೇಹವನ್ನು ದೃಷ್ಟಿಯಲ್ಲಿಟ್ಟುಕೊಂಡು ಭಾರತ ಮತ್ತು ನೇಪಾಳಗಳು ಮಿಲಿಟರಿ ಮತ್ತು ರಕ್ಷಣಾ ಒಪ್ಪಂದಗಳನ್ನು ಸಂಪ್ರದಾಯದಂತೆ ಹೊಂದಿದ್ದು, ಎರಡೂ ದೇಶದ ಸೇನೆಗಳು ನಿಕಟ ಸಂಬಂಧವನ್ನು ಹೊಂದಿವೆ ಎಂದು ಹೇಳಿಕೆಯಲ್ಲಿ ಭಾರತ ತಿಳಿಸಿದೆ.

ಡಿಸೆಂಬರ್ ತಿಂಗಳಲ್ಲಿ ನೇಪಾಳ ಭೇಟಿ ನೀಡಿದ್ದ ದೀಪಕ್ ಕಪೂರ್, ಮಾವೋವಾದಿಗಳ ಪಡೆಯನ್ನು ನೇಪಾಳ ಮಿಲಿಟರಿಯೊಂದಿಗೆ ಏಕೀಕರಣಗೊಳಿಸಬಾರದು, ಇದರಿಂದ ರಾಷ್ಟ್ರೀಯ ಸೇನೆಯನ್ನು ರಾಜಕೀಕರಣಗೊಳಿಸಿದಂತಾಗುತ್ತದೆ ಎಂದು ಹೇಳಿದ್ದರು.
ಸಂಬಂಧಿತ ಮಾಹಿತಿ ಹುಡುಕಿ