ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 9/11: ಜಾಕ್ರಿಯಾ ಜೀವಾವಧಿ ಶಿಕ್ಷೆ ಎತ್ತಿಹಿಡಿದ ಕೋರ್ಟ್ (Barack Obama | Zacarias Moussaoui | life sentence | 9/11)
Bookmark and Share Feedback Print
 
ಅಮೆರಿಕದಲ್ಲಿ 2001ರ ಸೆಪ್ಟೆಂಬರ್ 11ರಂದು ನಡೆದ ಭಯೋತ್ಪಾದನಾ ದಾಳಿ ಪ್ರಕರಣದ ಆರೋಪಿ ಫ್ರೆಂಚ್ ಪ್ರಜೆಯಾಗಿರುವ ಜಾಕ್ರಿಯಾ ಮೌಸ್ಸೋವಿಗೆ ಅಲೆಗ್ಸಾಂಡ್ರಿಯಾದ ಫೆಡರಲ್ ನ್ಯಾಯಾಲಯ ನೀಡಿರುವ ಜೀವಾವಧಿ ಶಿಕ್ಷೆಯನ್ನು ಅಮೆರಿಕ ಮುಖ್ಯ ನ್ಯಾಯಾಲಯ ಎತ್ತಿಹಿಡಿದಿದೆ.

2001ರ ಸೆಪ್ಟೆಂಬರ್ 11ರಂದು ನಡೆಸಿದ ಭಯೋತ್ಪಾದನಾ ಘಟನೆಯಲ್ಲಿ 3ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ಆದರೆ ಒಬ್ಬ ವ್ಯಕ್ತಿಯ ಕೃತ್ಯದಿಂದ ಈ ಘಟನೆ ನಡೆಯಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಆತನಿಗೆ ವಿಧಿಸಿರುವ ಶಿಕ್ಷೆ ಕಾನೂನುಬಾಹಿರವಾದದ್ದು ಎಂದು ವಾದಿಸಿರುವ ಮೌಸ್ಸೋವಿ ವಕೀಲರ ವಾದವನ್ನು ಅಮೆರಿಕ ನ್ಯಾಯಾಲಯ ತಿರಸ್ಕರಿಸಿದ್ದು, ಆತನಿಗೆ ನೀಡಿರುವ ಜೀವಾವಧಿ ಶಿಕ್ಷೆ ಆದೇಶವನ್ನು ಎತ್ತಿಹಿಡಿದಿದೆ.

ನ್ಯೂಯಾರ್ಕ್ ವರ್ಲ್ಡ್ ಟ್ರೇಡ್ ಸೆಂಟರ್, ಪೆಂಟಾಗಾನ್ ಮೇಲೆ ಪ್ರಯಾಣಿಕರ ವಿಮಾನವನ್ನು ಅಪಹರಿಸಿ ದಾಳಿ ನಡೆಸಿದ ಪ್ರಕರಣದ ಕುರಿತಂತೆ 2005ರಲ್ಲಿ ವಿಚಾರಣೆ ನಡೆಸಿದ್ದ ಅಲೆಗ್ಸಾಂಡ್ರಿಯಾದ ಫೆಡರಲ್ ಕೋರ್ಟ್ ಮೌಸ್ಸೋವಿ ದೋಷಿ ಎಂದು ತೀರ್ಪು ನೀಡಿತ್ತು. ಅಲ್ಲದೇ, ತಿಂಗಳುಗಳ ಕಾಲ ನಡೆದ ಸುದೀರ್ಘ ವಿಚಾರಣೆ ನಂತರ ಮೌಸ್ಸೋವಿಗೆ ಅಲೆಗ್ಸಾಂಡ್ರಿಯಾ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ