ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 12,775 ಮಹಿಳೆಯರನ್ನು ಹಾಸಿಗೆಗೆ ಕೆಡವಿದ್ದ ಹಾಲಿವುಡ್ ನಟ! (Warren Beatty | Bonnie And Clyde | Madonna | Star: How Warren Beatty Seduced America)
Bookmark and Share Feedback Print
 
ಜನಪ್ರಿಯ ಹಾಲಿವುಡ್ ನಟನೊಬ್ಬನ ಖಾಸಗಿ ಜೀವನದಲ್ಲಿ ಬಂದು ಹೋದ ಸ್ತ್ರೀಯರ ಕಲ್ಪನಾತೀತ ಸಂಖ್ಯೆಯಿದು. 72ರ ವಾರೆನ್ ಬೆಟ್ಟಿ ಎಂಬ ನಟ ತನ್ನ ಯೌವನದ ದಿನಗಳಲ್ಲಿ ದಿನಕ್ಕೊಬ್ಬ ಹುಡುಗಿಯರನ್ನು ಬಳಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ.

'ಬೋನಿ ಎಂಡ್ ಸ್ಲೈಡ್' ಚಿತ್ರದ ಮೂಲಕ ಪ್ರಸಿದ್ಧಿಗೆ ಬಂದ ಹಾಲಿವುಡ್ ನಟ, ನಿರ್ದೇಶಕ, ನಿರ್ಮಾಪಕ ವಾರೆನ್ ಬೆಟ್ಟಿ ತನ್ನ ಜೀವಮಾನದ ಅವಧಿಯಲ್ಲಿ 76ರ ಹರೆಯದ ನಟಿ ಜಾನ್ ಕಾಲಿನ್ಸ್‌ರಿಂದ ಹಿಡಿದು 51ರ ಹರೆಯದ ಮಡೋನ್ನಾ ಸಹಿತ 12,775 ಮಹಿಳೆಯರೊಂದಿಗೆ ಹಾಸಿಗೆ ಹಂಚಿಕೊಂಡಿದ್ದರು ಎಂದು ಹೇಳಲಾಗಿದೆ.

ಪೀಟರ್ ಬಿಸ್ಕಿಂಡ್ ಎಂಬವರು ಬರೆದಿರುವ 'ತಾರೆ: ವಾರೆನ್ ಬೆಟ್ಟಿ ಅಮೆರಿಕಾದ ಮಾನ ಹರಾಜು ಹಾಕಿದ್ದು ಹೇಗೆ?' ಎಂಬ ಪುಸ್ತಕದಲ್ಲಿ ಈ ಕಲ್ಪನೆಗೂ ಸಿಗದ ಈ ವಿವರಣೆಯನ್ನು ನೀಡಲಾಗಿದೆ.

ಪೀಟರ್ ಪ್ರಕಾರ ಬೆಟ್ಟಿ ಈಗಲೂ ಹಲವು ಮಹಿಳೆಯರ ಜತೆ ಸಂಬಂಧ ಹೊಂದಿದ್ದಾರೆ. ತಾನು ನೀಡಿರುವ ಅಂಕಿ-ಅಂಶಗಳಲ್ಲಿ ಅವರ ಸಂಬಂಧಗಳೆಲ್ಲವೂ ಸೇರಿಲ್ಲ ಎಂದು ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಆದರೆ ಪೀಟರ್ ವಾದವನ್ನು ಬೆಟ್ಟಿ ತಳ್ಳಿ ಹಾಕಿದ್ದಾರೆ ಮತ್ತು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಪೀಟರ್
ಇನ್ನಷ್ಟೇ ತನ್ನ ಪುಸ್ತಕವನ್ನು ಬಿಡುಗಡೆ ಮಾಡಬೇಕಿದ್ದು, ನ್ಯಾಯಾಲಯದ ಮೂಲಕ ತಡೆ ಹೇರುವ ಸಾಧ್ಯತೆಗಳಿವೆ ಎಂದು ನಿರೀಕ್ಷಿಸಲಾಗುತ್ತಿದೆ.

ಪೀಟರ್ ಅವರಿಗೆ ಬೆಟ್ಟಿ ನೀಡಿರುವ ಸಂದರ್ಶನದಲ್ಲಿ ಇದನ್ನೆಲ್ಲ ಹೇಳಿದ್ದಾರೆ ಎಂದು ಸ್ವತಃ ಪೀಟರ್ ಹೇಳಿಕೊಂಡಿದ್ದರೂ, ಇದನ್ನು ಬೆಟ್ಟಿ ಖಚಿತಪಡಿಸಿಲ್ಲ. ಆದರೂ ಬೆಟ್ಟಿ ಆಪ್ತರ ಪ್ರಕಾರ ಲೇಖಕರು ಹೇಳಿರುವಷ್ಟು ಸಂಖ್ಯೆಯನ್ನು ಮುಟ್ಟುವುದು ಅಸಾಧ್ಯವಾದರೂ, ಸಂಖ್ಯೆ ತೀರಾ ಕಡಿಮೆಯಾಗಿರಲಿಕ್ಕಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ