ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪ್ರಭಾಕರನ್ ಬಂದೂಕುಗಳು, ಯುದ್ಧಕವಚ ಪತ್ತೆ: ಶ್ರೀಲಂಕಾ (Sri Lanka | Tamil Tiger | Vellupilai Prabhakaran | LTTE)
Bookmark and Share Feedback Print
 
ಏಳು ತಿಂಗಳ ಹಿಂದೆ ಸೇನೆಗೆ ಬಲಿಯಾದ ತಮಿಳು ಹುಲಿ ಎಲ್‌ಟಿಟಿಇ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್ ಬಳಸುತ್ತಿದ್ದ ಗನ್ ಮತ್ತು ಯುದ್ಧಕವಚಗಳು ಪತ್ತೆಯಾಗಿವೆ ಎಂದು ಶ್ರೀಲಂಕಾ ಹೇಳಿದೆ.

ಪ್ರಭಾಕರನ್ ಬಳಸುತ್ತಿದ್ದ ಶಸ್ತ್ರಾಸ್ತ್ರಗಳು ಮುಲೈತೀವು ಪ್ರದೇಶದ ವೆಲ್ಲುಮುಲ್ಲಿವೈಕಾಲ್ ಎಂಬಲ್ಲಿ ಭೂಮಿಯಿಂದ 15 ಅಡಿ ಆಳದಲ್ಲಿ ಹೂಳಲಾಗಿತ್ತು. ಇಲ್ಲಿ ಆತ್ಮಹತ್ಯಾ ಪರಿಕರಗಳು ಮತ್ತು ವಿಮಾನಗಳನ್ನು ಹೊಡೆದುರುಳಿಸುವ ಬಂದೂಕುಗಳು ಕೂಡ ಪತ್ತೆಯಾಗಿವೆ.

ಪ್ರಭಾಕರನ್ ತನ್ನ ವೈಯಕ್ತಿಕ ಆಯುಧವಾಗಿ ಬಳಸುತ್ತಿದ್ದ ಎಂ-16ಎ2 ಎಂಬ ಗ್ರೆನೇಡ್ ಉಡಾಯಿಸುವ ಫಿರಂಗಿ ಸಿಕ್ಕಿದೆ ಎಂದು ವಾವುನಿಯಾ ನಿಮಲ್ ಲೆವ್ಕೆಯ ಹಿರಿಯ ಡಿಐಜಿ ಖಚಿತಪಡಿಸಿದ್ದಾರೆಂದು ಸ್ಥಳೀಯ ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ.

ಪ್ರಭಾಕರನ್‌ನನ್ನು ಶ್ರೀಲಂಕಾ ಸೇನೆಯು ಕಳೆದ ವರ್ಷದ ಮೇ 18ರಂದು ನಂದಿಕಾದಲ್ ಎಂಬ ಬಳಿಯ ತೀರದಲ್ಲಿ ಕೊಂದು ಹಾಕಿತ್ತು. ಆ ಮೂಲಕ ಹಲವಾರು ದಶಕಗಳಿಂದ ನಡೆಯುತ್ತಿದ್ದ ತಮಿಳರ ಹೋರಾಟವನ್ನು ಸೇನೆ ಹತ್ತಿಕ್ಕುವಲ್ಲಿ ಯಶಸ್ವಿಯಾಗಿತ್ತು.

ಬಂದೂಕಿನ ಜತೆ ತನುತ್ರಾಣ (ದೇಹರಕ್ಷಕ), 125 ಆತ್ಮಹತ್ಯಾ ಪರಿಕರಗಳು, 50 ಮೋರ್ಟಾರ್ ಬಾಂಬುಗಳು ಮತ್ತು ವಿಮಾನ ಹೊಡೆದುರುಳಿಸುವ 25 ತೋಪುಗಳನ್ನು ಕೂಡ ಹೂತು ಹಾಕಲಾಗಿತ್ತು. ಅವೆಲ್ಲವನ್ನೂ ಈಗ ಲಂಕಾ ವಶಪಡಿಸಿಕೊಳ್ಳುತ್ತಿದ್ದು, ಎಲ್‌ಟಿಟಿಇ ಪ್ರಾಬಲ್ಯವಿದ್ದ ಪ್ರದೇಶಗಳಲ್ಲಿ ಮತ್ತಷ್ಟು ಕುರುಹುಗಳು ಸಿಗಬಹುದೆಂಬ ನಿರೀಕ್ಷೆಯಿರುವ ಲಂಕಾ ಹುಡುಕಾಟ ನಡೆಸುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ