ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕಿಸ್ತಾನ: ಆತ್ಮಹತ್ಯಾ ಬಾಂಬ್ ದಾಳಿಗೆ 3ಬಲಿ (Taliban | Suicide attack | PoK | Kashmir | Army)
Bookmark and Share Feedback Print
 
ಪಾಕಿಸ್ತಾನ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿನ ಮಿಲಿಟರಿ ಅಡಗುತಾಣದ ಮೇಲೆ ಆತ್ಮಹತ್ಯಾ ಬಾಂಬರ್ ದಾಳಿ ನಡೆಸಿದ ಪರಿಣಾಮ ಮೂರು ಮಂದಿ ಸೈನಿಕರು ಸಾವನ್ನಪ್ಪಿದ್ದು, 11ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರದ ನಗರವಾದ ಮುಜಾಫರಾಬಾದ್‌ನಿಂದ 90ಕಿ.ಮೀ.ದೂರದಲ್ಲಿರುವ ತಾರಾರ್‌ಖಾಲ್ ಆಸ್ಪತ್ರೆ ಸಮೀಪ ಇರುವ ಮಿಲಿಟರಿ ಅಡಗುತಾಣವನ್ನು ಗುರಿಯಾಗಿರಿಸಿಕೊಂಡು ಉಗ್ರರು ಈ ದಾಳಿ ನಡೆಸಿರುವುದಾಗಿ ಪೊಲೀಸರು ಹೇಳಿದ್ದಾರೆ. ದಾಳಿಯಿಂದಾಗಿ ಬ್ಯಾರಕ್ ಭಾಗಶ ನಾಶಗೊಂಡಿದೆ.

ಬುಧವಾರ ಬೆಳಿಗ್ಗೆ ನಡೆದ ಆತ್ಮಹತ್ಯ ಬಾಂಬರ್ ದಾಳಿಯ ಸಂದರ್ಭದಲ್ಲಿ ಬ್ಯಾರಕ್‌ನಲ್ಲಿ 35ಮಂದಿ ಸೈನಿಕರಿದ್ದರು. ಘಟನೆಯಲ್ಲಿ ಮೂರು ಮಂದಿ ಸೈನಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡವರನ್ನು ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಕ್ಟೋಬರ್ ತಿಂಗಳನಿಂದ ಇಲ್ಲಿಯವರೆಗೆ ಪಾಕಿಸ್ತಾನದಾದ್ಯಂತ ನಡೆದ ಬಾಂಬ್ ಮತ್ತು ಆತ್ಮಹತ್ಯಾ ಬಾಂಬರ್ ದಾಳಿಯಲ್ಲಿ ಸುಮಾರು 600ಮಂದಿ ಬಲಿಯಾಗಿದ್ದಾರೆ. ಆ ನಿಟ್ಟಿನಲ್ಲಿ ತಾಲಿಬಾನ್ ಪ್ರಾಬಲ್ಯವುಳ್ಳ ದಕ್ಷಿಣ ವಜಿರಿಸ್ತಾನ್ ಭಾಗದಲ್ಲಿ ತೀವ್ರ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ