ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್-ಭಾರತ ಉದ್ವಿಗ್ನಕ್ಕೆ ಮತ್ತೊಂದು ದಾಳಿ ಸಾಧ್ಯತೆ (Pakistan | India | Terror attack | Pakistani troops)
Bookmark and Share Feedback Print
 
ಭಾರತ ಮತ್ತು ಪಾಕಿಸ್ತಾನಗಳ ನಡುವೆ ಕಿಚ್ಚು ಹೊತ್ತಿಸುವ ಉದ್ದೇಶದಿಂದ ಭಾರತದ ಮೇಲೆ ಮುಂಬೈ ದಾಳಿಯಂತಹ ಜಿಹಾದಿ ತತ್ವವನ್ನಾಧರಿಸಿದ ಬೃಹತ್ ದಾಳಿ ನಡೆಯುವ ಸಾಧ್ಯತೆಗಳಿವೆ ಎಂದು ಅಮೆರಿಕಾದ ಭದ್ರತಾ ತಜ್ಞರು ಎಚ್ಚರಿಸಿದ್ದಾರೆ.

ಭಾರತದ ಮೇಲೆ ಇಂತಹ ದಾಳಿ ನಡೆಸುವುದರಿಂದ ಜಿಹಾದಿಗಳ ವಿರುದ್ಧ ಪಾಕಿಸ್ತಾನದ ಪೂರ್ವ ಭಾಗದಲ್ಲಿ ಪಾಕಿಸ್ತಾನಿ ಪಡೆಗಳು ನಡೆಸುತ್ತಿರುವ ಸಮರದಿಂದ ವಿಮುಖವಾಗಬಹುದು ಎಂಬ ಲೆಕ್ಕಾಚಾರ ಭಯೋತ್ಪಾದಕರದ್ದು ಎಂದು ಜಾಗತಿಕ ಗುಪ್ತಚರ ಸಂಸ್ಥೆ ಎಂದು ಕರೆಸಿಕೊಳ್ಳುತ್ತಿರುವ 'ಸ್ಟಾಟ್ಫಾರ್' ತನ್ನ 2010ರ ವಾರ್ಷಿಕ ಭವಿಷ್ಯದಲ್ಲಿ ಹೇಳಿದೆ.

ಕಳೆದ ನವೆಂಬರ್ ತಿಂಗಳಿನಲ್ಲಿ ನಡೆದ ಮುಂಬೈ ದಾಳಿ ಬಳಿಕ ಭಾರತ ಮತ್ತು ಅಮೆರಿಕಾಗಳು ಒಟ್ಟಾಗಿ ಅಮೂಲ್ಯ ಮಾಹಿತಿಗಳನ್ನು ಹಂಚಿಕೊಳ್ಳುತ್ತಿರುವುದರಿಂದ ಇಂತಹ ದಾಳಿಗಳನ್ನು ವಿಫಲಗೊಳಿಸುವಲ್ಲಿ ಯಶಸ್ಸನ್ನು ಸಾಧಿಸಿವೆ. ಆದರೆ ದಾಳಿಗಳು ನಡೆಯುವುದೇ ಇಲ್ಲ ಎಂದು ಹೇಳಲಾಗದು ಎಂದು ಸಂಸ್ಥೆ ತನ್ನ ವರದಿಯಲ್ಲಿ ಎಚ್ಚರಿಸಿದೆ.

ಅಮೆರಿಕಾವು ತನ್ನ ಅಫಘಾನಿಸ್ತಾನದ ತಂತ್ರಗಳನ್ನು ಜಾರಿಗೆ ತರುತ್ತಿರುವಂತೆಯೇ, ವಾಷಿಂಗ್ಟನ್ ಮತ್ತು ಪಾಕಿಸ್ತಾನದ ನೆಲದಿಂದ ಕಾರ್ಯ ನಿರ್ವಹಿಸುವ ಜಿಹಾದಿಗಳೊಂದಿಗೆ ಇಸ್ಲಾಮಾಬಾದ್ ನಿರ್ಣಾಯಕ ಘಟ್ಟಕ್ಕೆ ಸನಿಹದಲ್ಲಿದೆ. ಇಲ್ಲಿಂದ ಮುಂದೆ ಅಫಘಾನಿಸ್ತಾನಕ್ಕಿಂತ ಪಾಕಿಸ್ತಾನದ ಬೆಳವಣಿಗೆಗಳೂ ಹೆಚ್ಚಿನ ಮಹತ್ವ ಪಡೆದುಕೊಳ್ಳಲಿವೆ ಎಂದೂ ವರದಿ ತಿಳಿಸಿದೆ.

ಆದರೆ ಅಲ್‌ಖೈದಾದ ಕೆಲವು ಬಣಗಳು ಇನ್ನು ಅಫಘಾನಿಸ್ತಾನದ ಬದಲು ಪಾಕಿಸ್ತಾನದಲ್ಲೇ ಕಾರ್ಯಾಚರಿಸಬೇಕೆಂದು ಬಯಸುತ್ತಿವೆ. ಗಡಿ ಪ್ರದೇಶದಲ್ಲಿ ಬಹುತೇಕ ಡ್ರೋನ್ ದಾಳಿ ಸೇರಿದಂತೆ ತನ್ನ ಕಾರ್ಯಾಚರಣೆಯನ್ನು ಹೆಚ್ಚಿಸಿರುವ ಅಮೆರಿಕಾ ಮಿಲಿಟರಿ ಮತ್ತು ವಿಶೇಷ ಪಡೆಗಳ ನಿರ್ವಹಣೆಯಿಂದಾಗಿ 2010ರಲ್ಲಿ ಹೆಚ್ಚಿನ ಸಂಘರ್ಷಗಳು ನಡೆಯಬಹುದು ಎಂದು ಹೇಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ