ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತದ ವಿರುದ್ಧ ನೇಪಾಳ ಭೂಗತರನ್ನು ಬಳಸುತ್ತಿದೆ ಪಾಕ್ (Pakistan | India | Nepal | Drugs racket)
Bookmark and Share Feedback Print
 
ಪಾಕಿಸ್ತಾನದ ಗುಪ್ತಚರ ವಿಭಾಗಗಳ ಸಹಕಾರದೊಂದಿಗೆ ನೇಪಾಳದ ಪ್ರಭಾವಿ ರಾಜಕಾರಣಿ ಪುತ್ರ ನಡೆಸುತ್ತಿದ್ದ ಭಾರತೀಯ ನಕಲಿ ನೋಟು ಮತ್ತು ಡ್ರಗ್ಸ್ ಕಳ್ಳಸಾಗಾಟ ಜಾಲ ಬಯಲಿಗೆ ಬರುವುದರೊಂದಿಗೆ ಇಸ್ಲಾಮಾಬಾದ್ ನೇಪಾಳದ ಭೂಗತರಿಗೆ ಭಾರತದ ವಿರುದ್ಧ ಕಾರ್ಯಾಚರಣೆಗೆ ಹಣ ಸುರಿಯುತ್ತಿರುವುದು ಬಹಿರಂಗವಾಗಿದೆ.

ನೇಪಾಳದ ಮಾಜಿ ಸಚಿವ ಸಲೀಮ್ ಮಿಯಾ ಅನ್ಸಾರಿ ಪುತ್ರ, ಪಾಕಿಸ್ತಾನದ ಐಎಸ್ಐ ಮತ್ತು ಮುಂಬೈ ಭೂಗತ ಜಗತ್ತಿನ ಪ್ರಭಾವಿ ಡಾನ್ ದಾವೂದ್ ಇಬ್ರಾಹಿಂ ಜತೆ ಸಂಬಂಧ ಹೊಂದಿರುವ ಯೂನಸ್ ಅನ್ಸಾರಿ ಎಂಬಾತನನ್ನು ಭಾರತದ ಮನವಿ ಮೇರೆಗೆ ನೇಪಾಳ ಪೊಲೀಸರು ಬಂಧಿಸಿದ್ದರು. ಆತ ಎರಡು ಕ್ರಿಮಿನಲ್ ಜಾಲಗಳಲ್ಲಿ ಸಕ್ರಿಯನಾಗಿದ್ದ ಎಂದು ಆರೋಪಿಸಲಾಗಿದೆ.

ಇನ್ನಷ್ಟೇ ನಿರಂತರ ಪ್ರಸಾರ ಆರಂಭಿಸಬೇಕಿರುವ ನೂತನ ಟೀವಿ ಚಾನೆಲ್ ಒಂದರ ಅಧ್ಯಕ್ಷ ಹಾಗೂ ನೇಪಾಳ ರಾಷ್ಟ್ರೀಯ ಕುಸ್ತಿ ಫೆಡರೇಷನ್ ಅಧ್ಯಕ್ಷನಾಗಿರುವ ಯೂನಸ್ ಅನ್ಸಾರಿಯನ್ನು ಇತರ ಮೂವರು ನೇಪಾಳಿಗಳು, ಇಬ್ಬರು ಪಾಕಿಸ್ತಾನೀಯರು, ಒಬ್ಬ ಆಫ್ರಿಕನ್ ಮತ್ತು ಒಬ್ಬ ಕೆರೆಬಿಯನ್ ಪ್ರಜೆಯೊಂದಿಗೆ ಬಂಧಿಸಲಾಗಿದೆ. ಆರೋಪಿಯ ತಂದೆ ಮಾಜಿ ಅರಣ್ಯ ಹಾಗೂ ಭೂಸಂರಕ್ಷಣಾ ಸಚಿವ ಅನ್ಸಾರಿ ವಿರುದ್ಧ ಯಾವುದೇ ಪುರಾವೆಗಳು ಸಿಕ್ಕಿಲ್ಲವಾದ ಕಾರಣ ಬಂಧಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಭಾರತದ ಮಧ್ಯಪ್ರದೇಶದಲ್ಲಿ ಕಳೆದ ವರ್ಷ ಬಂಧಿಸಲಾಗಿದ್ದ ಇಬ್ಬರು ನೇಪಾಳೀಯರ ಜಾಡು ಹಿಡಿದ ಭಾರತೀಯ ಪೊಲೀಸರ ಸಹಕಾರದಿಂದ 2.5 ಮಿಲಿಯನ್ ರೂಪಾಯಿ ಮೌಲ್ಯದ ಭಾರತೀಯ ಖೋಟಾ ನೋಡು ಮತ್ತು ಸುಮಾರು ನಾಲ್ಕು ಕಿಲೋ ಹೆರಾಯಿನ್ ಮಾದಕ ದ್ರವ್ಯದೊಂದಿಗೆ ಯೂಸುಫ್ ಅನ್ಸಾರಿ ಮತ್ತು ಆತನ ಸಹಚರರನ್ನು ಕಳೆದ ವಾರ ನೇಪಾಳ ಪೊಲೀಸರು ಬಂಧಿಸಿದ್ದರು.

ತನಿಖೆಗಳ ಪ್ರಕಾರ ಈ ಜಾಲ ಆರಂಭವಾಗಿರುವುದು ಪಾಕಿಸ್ತಾನದ ಕರಾಚಿಯಿಂದ. ಅಲ್ಲಿನ ಹಾಜಿ ತಲಾದ್ ಆಲಿ ಎಂಬಾತನಿಂದ ಇದು ನಡೆಸಲ್ಪಡುತ್ತಿದೆ. ಈತನಿಗೆ ಪಾಕಿಸ್ತಾನದ ಗುಪ್ತಚರ ವಿಭಾಗಗಳಿಂದ ಪೂರಕ ಸಹಕಾರಗಳು ಸಿಗುತ್ತಿವೆ ಎಂದು ಹೇಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ