ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಲ್ಲಾಹ್ ಶಬ್ದ ಮುಸ್ಲಿಮರಿಗೆ ಮೀಸಲಲ್ಲ, ಕ್ರೈಸ್ತರೂ ಬಳಸಬಹುದು..! (Allah | Muslim | Christian | Malaysia)
Bookmark and Share Feedback Print
 
ಹೀಗೆಂದು ತೀರ್ಪು ನೀಡಿರುವುದು ಮಲೇಷಿಯಾ ನ್ಯಾಯಾಲಯ. ಇಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರು 'ಅಲ್ಲಾಹ್' ಶಬ್ದವನ್ನು ಬಳಸದಂತೆ ಸರಕಾರ ಹೇರಿದ್ದ ನಿಷೇಧವನ್ನು ಪ್ರಶ್ನಿಸಿದಾಗ ನ್ಯಾಯಾಲಯವು, ಯಾರು ಬೇಕಾದರೂ ಬಳಸಬಹುದು; ಇದು ಮುಸ್ಲಿಮರಿಗೆ ಮಾತ್ರ ಮೀಸಲಾದ ಪದವಲ್ಲ ಎಂದಿದೆ.

'ಅಲ್ಲಾಹ್' ಶಬ್ದವನ್ನು ಬಳಸಬಾರದು ಎಂಬ ಷರತ್ತಿನೊಂದಿಗೆ ಮಲೇಷಿಯಾ ಗೃಹ ಸಚಿವಾಲಯದಿಂದ ಪ್ರಕಟನೆಯ ಅನುಮತಿ ಪಡೆದುಕೊಂಡಿದ್ದ ಕ್ಯಾಥೊಲಿಕ್ ಪತ್ರಿಕೆ 'ಹೆರಾಲ್ಡ್' ಹೈಕೋರ್ಟ್ ಮೆಟ್ಟಿಲೇರಿತ್ತು.
Malaysia Flag
PR


ತೀರ್ಪಿನ ನಂತರ ಪ್ರತಿಕ್ರಿಯಿಸಿರುವ ಸರಕಾರಿ ವಕೀಲರುಗಳು, ತಾವು ಗೃಹ ಸಚಿವಾಲಯವನ್ನು ಸಂಪರ್ಕಿಸಿದ ಬಳಿಕ ಮೇಲ್ಮನವಿ ಸಲ್ಲಿಸುವ ಕುರಿತಾದ ನಿರ್ಧಾರಕ್ಕೆ ಬರುವುದಾಗಿ ತಿಳಿಸಿದ್ದಾರೆ.

ಗೃಹ ಸಚಿವಾಲಯವು 'ಅಲ್ಲಾಹ್' ಶಬ್ದವನ್ನು ಬಳಸುವುದರ ಮೇಲೆ ಹೇರಿದ್ದ ನಿಷೇಧವನ್ನು ತೆರವುಗೊಳಿಸಿರುವ ನ್ಯಾಯಾಲಯವು ಹೆರಾಲ್ಡ್ ಪತ್ರಿಕೆಯು ಅಲ್ಲಾಹ್ ಶಬ್ದವನ್ನು ತನ್ನ ಪತ್ರಿಕೆಯಲ್ಲಿ ಬಳಸಬಹುದಾಗಿದೆ ಎಂದು ತಿಳಿಸಿದ್ದು, ಸರಕಾರದ ಆದೇಶವು 'ಕಾನೂನುಬಾಹಿರ, ನಿರ್ಮೌಲ್ಯ ಮತ್ತು ಅಸಿಂಧು' ಎಂದು ತೀರ್ಪು ನೀಡಿದೆ.

ಮುಸ್ಲಿಂ ಬಹುಸಂಖ್ಯಾತರಾಗಿರುವ ಮಲೇಷಿಯಾದಲ್ಲಿ ಮುಸ್ಲಿಮರೇತರ ಪತ್ರಿಕೆಯಾದ ಹೆರಾಲ್ಡ್ ಅಲ್ಲಾಹ್ ಪದವನ್ನು ಬಳಸದಂತೆ ನಿಷೇಧ ಹೇರಿದ್ದ ಹಿನ್ನೆಲೆಯಲ್ಲಿ ಕಳೆದ ಹಲವು ಸಮಯಗಳಿಂದ ಕಾನೂನು ಸಮರ ನಡೆಯುತ್ತಿತ್ತು. ಅಲ್ಲಾಹ್ ಶಬ್ದವನ್ನು ಕೇವಲ ಮುಸ್ಲಿಮರು ಮಾತ್ರ ಬಳಸಬೇಕೆಂದು ಸರಕಾರ ವಾದಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ