ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇರಾನ್‌ನಿಂದ ಸಿರಿಯಾಕ್ಕೆ ತೆರಳಿದ ಲಾಡೆನ್ ಪುತ್ರ (Osama bin Laden | Iran | Syria | al-Qaeda | Damascus)
Bookmark and Share Feedback Print
 
ಅಲ್ ಖಾಯಿದಾ ಮುಖಂಡ ಒಸಾಮಾ ಬಿನ್ ಲಾಡೆನ್ ಪುತ್ರನೋರ್ವ ಡಿಸೆಂಬರ್ ಅಂತ್ಯದ ವೇಳೆಗೆ ಇರಾನ್‌ನಿಂದ ಡಮಾಸ್ಕಸ್‌ಗೆ ತೆರಳಿರುವುದಾಗಿ ಅಶ್ರಕ್ ಅಲ್ ಅವ್‌ಸಾತ್ ತನ್ನ ವರದಿಯಲ್ಲಿ ತಿಳಿಸಿದೆ.

ಸುಮಾರು ಎಂಟು ವರ್ಷಗಳ ಕಾಲ ಇರಾನ್‌ನಲ್ಲಿ ಠಿಕಾಣಿ ಹೂಡಿದ್ದ ಲಾಡೆನ್ ಪುತ್ರ ಬಾಕ್ರ್ ಬಿನ್ ಲಾಡೆನ್ ಇದೀಗ ಡಮಾಸ್ಕಸ್‌ಗೆ ಹೋಗಿರುವುದಾಗಿ ಲಂಡನ್ ಮೂಲದ ಪತ್ರಿಕೆ ಹೇಳಿದೆ. ಅಲ್ಲದೇ, ಲಾಡೆನ್ ಮತ್ತೋರ್ವ ಪುತ್ರ ಓಮರ್ ಬಿನ್ ಲಾಡೆಲ್ ಮೋಸ್ಟ್ ವಾಂಟೆಡ್ ವ್ಯಕ್ತಿಯಾಗಿದ್ದಾನೆ ಎಂದೂ ವಿವರಿಸಿದೆ.

ಒಸಾಮಾನ ಪತ್ನಿಯರಲ್ಲಿ ಓರ್ವಳಾದ ಸಿರಿಯಾ ಮೂಲದ ನಾಜ್ವಾ ಅಲ್ ಘಾನೆಮ್ ಕುಟುಂಬದ ಜೊತೆ ಬಾಕ್ರ್ ಸೇರಿಕೊಂಡಿರುವುದಾಗಿ ಓಮರ್ ತಿಳಿಸಿದ್ದಾನೆ.

ಕ್ರಿಸ್ಮಮಸ್ ದಿನದಂದು ನನ್ನ ಸಹೋದರ ಬಾಕ್ರ್ ತೆಹ್ರಾನ್ ಮೂಲಕ ಡಮಾಸ್ಕಸ್‌ಗೆ ಆಗಮಿಸಿರುವುದಾಗಿ ಓಮರ್ ಹೇಳಿರುವುದಾಗಿ ಪತ್ರಿಕೆ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ