ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಾಶ್ಮೀರಕ್ಕಾಗಿ ಸಾವಿರ ವರ್ಷ ಯುದ್ಧಕ್ಕೂ ನಾವು ಸಿದ್ದ: ಪಾಕಿಸ್ತಾನ (1000-yr ideological war | India | Asif Ali Zardari | Pakistan)
Bookmark and Share Feedback Print
 
ಕಾಶ್ಮೀರ ವಿವಾದದಲ್ಲಿ ಭಾರತದೊಂದಿಗೆ ಸಾವಿರ ವರ್ಷಗಳ ಸೈದ್ಧಾಂತಿಕ ಸಮರಕ್ಕೂ ಸಿದ್ಧ ಎಂದು ಪಾಕಿಸ್ತಾನ ಅಧ್ಯಕ್ಷ ಆಸಿಫ್ ಆಲಿ ಜರ್ದಾರಿ ಘೋಷಿಸಿದ್ದಾರೆ.

ಇದು ಸೈದ್ಧಾಂತಿಕ ಸಮರವಾಗಿದ್ದು, ಹಲವು ಪೀಳಿಗೆಗಳ ಕಾಲ ಮುಂದುವರಿಯಲಿದೆ ಎಂದು ಜರ್ದಾರಿ ಹೇಳಿದ್ದಾರೆಂದು 'ಡೈಲಿ ಟೈಮ್ಸ್' ವರದಿ ಮಾಡಿದೆ.
Zardari
PTI


ಸ್ವತಂತ್ರ ಜಮ್ಮು-ಕಾಶ್ಮೀರ (ಭಾರತ ಇದನ್ನು ಪಾಕ್ ಆಕ್ರಮಿತ ಕಾಶ್ಮೀರ ಎನ್ನುತ್ತದೆ) ವಿಧಾನಸಭೆ ಮತ್ತು ಕಾಶ್ಮೀರ ಸಂಪುಟ ಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಜರ್ದಾರಿ, ಕಾಶ್ಮೀರ ವಿವಾದದಲ್ಲಿ ಮುನ್ನಡೆ ಸಾಧಿಸುವಲ್ಲಿ ಪ್ರಜಾಸತ್ತಾತ್ಮಕ ಸರಕಾರಗಳು ಪ್ರಮಖ ಪಾತ್ರವಹಿಸಿವೆ ಎಂದರು.

ಕಾಶ್ಮೀರ ವಿಚಾರದಲ್ಲಿ ಸಾವಿರ ವರ್ಷಗಳ ಯುದ್ಧಕ್ಕೂ ಸಿದ್ಧ ಎಂದಿದ್ದ ಜುಲ್ಫೀಕರ್ ಆಲಿ ಭುಟ್ಟೋ (ಪಾಕಿಸ್ತಾನದ ಮಾಜಿ ಅಧ್ಯಕ್ಷ ಹಾಗೂ ಪ್ರಧಾನಿ), ಮಾತುಕತೆ ಅಥವಾ ಸಂಧಾನಗಳ ಮೂಲಕ ವಿವಾದವನ್ನು ಪರಿಹರಿಸಲು ಸಾಧ್ಯವಿಲ್ಲ ಎಂದು ಯಾವತ್ತೂ ಹೇಳಿಲ್ಲ ಎಂದು ಜರ್ದಾರಿ ಇದೇ ಸಂದರ್ಭದಲ್ಲಿ ಇತಿಹಾಸವನ್ನು ಕೆದಕಿದರು.

ಅಲ್ಲದೆ ಈ ಪ್ರಾಂತ್ಯದಲ್ಲಿ ಶಾಂತಿ ನೆಲೆಸಬೇಕಾದರೆ ಹಲವು ದಶಕಗಳಿಗೂ ಹೆಚ್ಚು ಕಾಲದಿಂದ ನೆನೆಗುದಿಗೆ ಬಿದ್ದಿರುವ ಕಾಶ್ಮೀರ ವಿವಾದ ಪರಿಹಾರವಾಗಬೇಕಿದೆ, ಇದು ಪ್ರಾಂತ್ಯದ ಶಾಂತಿಯಲ್ಲಿ ಮಹತ್ವದ ಪಾತ್ರವಹಿಸಲಿದೆ ಎಂದರು.

ಕಾಶ್ಮೀರದಲ್ಲಿ ಶಾಂತಿ ನೆಲೆಸದೆ ಈ ಖಂಡದಲ್ಲಿ ಶಾಂತಿ ನೆಲೆಯೂರಬಹುದು ಎಂಬುದನ್ನು ನಾವು ಒಪ್ಪುವುದಿಲ್ಲ. ಈ ವಿಚಾರವನ್ನು ನಾವು ಜಾಗತಿಕ ವೇದಿಕೆಯ ಗಮನಕ್ಕೆ ತಂದಿದ್ದೇವೆ ಮತ್ತು ಮುಂದಿನ ದಿನಗಳಲ್ಲೂ ಇದನ್ನು ಮುಂದುವರಿಸುತ್ತೇವೆ ಎಂದರು.

ಮಾತು ಮುಂದುವರಿಸಿದ ಪಾಕ್ ಅಧ್ಯಕ್ಷ ಜರ್ದಾರಿ, ಕಾಶ್ಮೀರವು ಪಾಕಿಸ್ತಾನದ ಅವಿಭಾಜ್ಯ ಅಂಗ' ಅದು ನಮ್ಮ ಕತ್ತಿನಲ್ಲಿರುವ ಪ್ರಮುಖ ರಕ್ತನಾಳದಂತೆ. ಕಾಶ್ಮೀರ ವಿಚಾರದಲ್ಲಿ ವಿಶ್ವವು ತೆಗೆದುಕೊಳ್ಳುವ ಮಹತ್ವದ ನಿರ್ಧಾರದ ಸಮಯ ಶೀಘ್ರದಲ್ಲೇ ಬರಬಹುದು ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ